Reported By: H.D. Savita
ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟ ಮಾಡಿದೆ. ಈ ವರ್ಷ ಟಿ-20 ವಿಶ್ವ ಕಪ್ ಟೂರ್ನಿಯ ಪಂದ್ಯಗಳು ಯುಎಇ ಹಾಗೂ ಓಮನ್ನಲ್ಲಿ ನಡೆಯಲಿದೆ. ಇದರ ಪ್ರಕಾರ ಟೂರ್ನಿಗೆ ಅಕ್ಟೋಬರ್ 17 ರಂದು ಚಾಲನೆ ಸಿಗಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ.
ಅಕ್ಟೋಬರ್ 17 ಮೊದಲ ರೌಂಡ್ ಪಂದ್ಯ ಒಮನ್ ಮತ್ತು ಪಿಎನ್ಜಿ ನಡುವೆ ನಡೆಯಲಿದೆ. ಸಾಕಷ್ಟು ರೋಚಕತೆ ಸೃಷ್ಟಿಸಿರೋದು ಅಕ್ಟೋಬರ್ 24 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ. ಇದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಟೂರ್ನಿಯ ಮೊದಲ ಸೂಪರ್ 12 ಪಂದ್ಯ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಅ. 23ಕ್ಕೆ ಆರಂಭವಾಗಲಿದೆ.