ಮಹಿಳಾ ಪ್ರೀಮಿಯರ್‌ಲೀಗ್‌-ಫೈನಲ್ ಪ್ರವೇಶಿಸಿದ ಮುಂಬೈತಂಡ

Share

ಮಹಿಳಾ ಪ್ರೀಮಿಯರ್‌ಲೀಗ್‌-ಫೈನಲ್ ಪ್ರವೇಶಿಸಿದ ಮುಂಬೈತಂಡ

 by-ಕೆಂಧೂಳಿ
ಮುಂಬೈ,ಮಾ,೧೪-ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ೪೭ ರನ್‌ಗಳಿಂದಿ ಮಣಿಸಿ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.
ನಿವಾರ ನಡೆಯುವ ಫೈನಲ್‌ನಲ್ಲಿ ೨೦೨೩ರ ಆವೃತ್ತಿಯ ಚಾಂಪಿಯನ್ ಮುಂಬೈ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ತಂಡವು ಲೀಗ್ ಹಂತದಲ್ಲಿ ಅಗ್ರಸ್ಥಾನ ದೊಡನೆ ಸತತ ಮೂರನೇ ಬಾರಿ ಫೈನಲ್ ತಲುಪಿದೆ.
ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಇಂಡಿಯನ್ಸ್ ತಂಡವು ಹೇಯ್ಲಿ (೭೭;೫೦ಎ, ೪x೧೦, ೬x೩) ಮತ್ತು ಬ್ರಂಟ್ (೭೭;೪೧ಎ, ೪x೧೦, ೬x೨) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ೨೦ ಓವರ್‌ಗಳಲ್ಲಿ ೪ ವಿಕೆಟ್‌ಗಳಿಗೆ ೨೧೩ ರನ್ ಗಳಿಸಿತು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡವು ೧೯.೨ ಓವರ್‌ಗಳಲ್ಲಿ ೧೬೬ ರನ್ ಗಳಿಸಿ ಹೋರಾಟ ಮುಗಿಸಿತು. ಮುಂಬೈಗೆ ಜೈಂಟ್ಸ್ ವಿರುದ್ಧ ಇದು ಸತತ ಏಳನೇ ಗೆಲುವಾಗಿದೆ.
ಗುಜರಾತ್‌ನ ಡೇನಿಯಲ್ ಗಿಬ್ಸನ್ (೩೪), ಫೋಬೆ ಲಿಚ್‌ಫೀಲ್ಡ್ (೩೧), ಭಾರತಿ ಫೂಲ್ಮಾಲಿ (೩೦) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿ ಸಿದರು. ಹೇಯ್ಲಿ ಮತ್ತು ಅಮೆಲಿಯಾ ಕೆರ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಕಡಿವಾಣ ಹಾಕಿದರು.ಇದಕ್ಕೂ ಮೊದಲು ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಯಷ್ಟಿಕಾ ಭಾಟಿಯಾ (೧೫; ೧೪ಎ) ಮತ್ತು ಹೇಯ್ಲಿ ಅವರು ಉತ್ತಮ ಆರಂಭ ನೀಡಿದರು. ಆದರೆ ೫ನೇ ಓವರ್‌ನಲ್ಲಿ ಡೇನಿಯಲ್ ಗಿಬ್ಸನ್ ಬೌಲಿಂಗ್‌ನಲ್ಲಿ ಯಷ್ಟಿಕಾ ಔಟಾದರು.ಈ ಸಂದರ್ಭದಲ್ಲಿ ಹೇಯ್ಲಿ ಜೊತೆಗೂಡಿದ ಬ್ರಂಟ್ ಎರಡನೇ ವಿಕೆಟ್ ಜೊತೆಯಾಟದಲ್ಲಿ ೧೩೩ ರನ್ ಸೇರಿಸಿದರು. ಇವರಿಬ್ಬರು ೧೭ನೇ ಓವರ್‌ವರೆಗೂ ಬೌಲರ್‌ಗಳನ್ನು ಕಾಡಿದರು.
ಕಶ್ವಿ ಗೌತಮ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮ್ಯಾಥ್ಯೂಸ್ ಅವರು ಬೆತ್ ಮೂನಿಗೆ ಕ್ಯಾಚಿತ್ತರು. ಆದರೆ ಗುಜರಾತ್ ಸಂಕಷ್ಟ ಮುಗಿಯಲಿಲ್ಲ. ಕ್ರೀಸ್‌ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ (೩೬; ೧೨ಎ, ೪x೨, ೬x೪) ಮಿಂಚಿನ ಬ್ಯಾಟಿಂಗ್ ಮಾಡಿ ತಂಡದ ಮೊತ್ತವು ‘ದ್ವಿಶತಕ’ ದಾಟಲು ಕಾರಣರಾದರು. ೩೦೦ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: ೨೦ ಓವರ್‌ಗಳಲ್ಲಿ ೪ ವಿಕೆಟ್‌ಗಳಿಗೆ ೨೧೩ (ಹೇಯ್ಲಿ ಮ್ಯಾಥ್ಯೂಸ್ ೭೭, ನ್ಯಾಟ್ ಶಿವರ್ ಬ್ರಂಟ್ ೭೭, ಹರ್ಮನ್‌ಪ್ರೀತ್ ಕೌರ್ ೩೬, ಡೇನಿಯಲ್ ಗಿಬ್ಸನ್ ೪೦ಕ್ಕೆ೨).
ಗುಜರಾತ್ ಜೈಂಟ್ಸ್- ೧೯.೨ ಓವರ್‌ಗಳಲ್ಲಿ ೧೬೬ (ಡೇನಿಯಲ್ ಗಿಬ್ಸನ್ ೩೪, ಫೋಬೆ ಲಿಚ್‌ಫೀಲ್ಡ್ ೩೧, ಭಾರತಿ ಫೂಲ್ಮಾಲಿ ೩೦; ಹೇಯ್ಲಿ ಮ್ಯಾಥ್ಯೂಸ್ ೩೧ಕ್ಕೆ ೩, ಅಮೆಲಿಯಾ ಕೆರ್ ೨೮ಕ್ಕೆ ೨, ನ್ಯಾಟ್ ಶಿವರ್ ಬ್ರಂಟ್ ೩೧ಕ್ಕೆ ೧).

Girl in a jacket
error: Content is protected !!