Reported By: H.D.Savita
ಟೋಕಿಯೋ: 41ವರ್ಷಗಳ ನಂತರ ಓಲಂಪಿಕ್ ಹಾಕಿ ಸೆಮಿ ಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ಹಾಕಿ ತಂಡ, ಬೆಲ್ಜಿಯಂ ವಿರುದ್ಧ 5-2 ಗೋಲುಗಳ ಅಂತರದಿಂದ ಸೋತು ನಿರಾಸೆ ಅನುಭವಿಸಿತು. ಇದರೊಂದಿಗೆ ಭಾರತದ ಫೈನಲ್ ಪ್ರವೇಶಿಸುವ ಕನಸು ಭಗ್ನ ಗೊಂಡಿತು. ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ತಲಾ ಒಂದೊಂದು ಗೋಲು ಗಳಿಸಿದರು.
ಇನ್ನು ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬೆಲ್ಜಿಯಂ ಫೈನಲ್ ಪ್ರವೇಶಿಸಿತು.
ಬೆಲ್ಜಿಯಂ ತಂಡವು ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್ನಲ್ಲಿ ಸೆಣಸಲಿರುವ ಜರ್ಮನಿ ಮತ್ತು ಆಸ್ಟ್ರೇಲಿಯಾದ ನಡುವಿನ ವಿಜೇತರನ್ನು ಫೈನಲ್ನಲ್ಲಿ ಎದುರಿಸಲಿದೆ. ಸೋತ ತಂಡವು, ಭಾರತದೊಂದಿಗೆ ಕಂಚಿಗಾಗಿ ಸ್ಪರ್ಧಿಸಲಿದೆ.