ಟೋಕಿಯೊ,ಜು,೨೫:ಮೇರಿ ಕೋಮ್ಸ್ ಇಲ್ಲಿನ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್ನಲ್ಲಿ ಪ್ರೀ-ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ಮೇರಿ ಕೋಮ್ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದು ಈ ಬಾರಿ ಫೈನಲ್ನಲ್ಲಿ ಗೆದ್ದರೆ ಆರನೇ ಬಾರಿ ಫೈನಲ್ಲನಲ್ಲಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆಯುವ ಸಾಧ್ಯತೆಗಳಿವೆ.
ಭಾನುವಾರ ನಡೆದ ಮಹಿಳೆಯರ ೫೧ ಕೆ.ಜಿ ವಿಭಾಗದಲ್ಲಿ ನಡೆದ ರೌಂಡ್ ೩೨ರ ಹಂತದ ಪಂದ್ಯದಲ್ಲಿ ಮೇರಿ ಕೋಮ್ ಅವರು ಡೊಮಿನಿಕಾದ ಮಿಗುಲಿನಾ ಹೆರ್ನಾಂಡೆಜ್ ವಿರುದ್ಧ ಗೆಲುವು ದಾಖಲಿಸಿ ಮಿಂಚಿದರು
೨೦೧೨ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್, ಬಹುತೇಕ ತಮ್ಮ ಕೊನೆಯ ಮಹಾಕ್ರೀಡಾಕೂಟದಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡುವ ಇರಾದೆಯಲ್ಲಿದ್ದಾರೆ.
ಪ್ರಿ-ಕ್ವಾರ್ಟರ್ಗೆ ಮೇರಿ ಕೋಮ್
Share