Reported By : H.D.Savita
ಟೋಕಿಯೋ,ಆ,08: ಜುಲೈ 23ರಿಂದ ಆರಂಭವಾದ ಒಲಂಪಿಕ್ಸ್ ಭಾನುವಾರ ಮುಕ್ತಾಯಗೊಂಡಿತು. ಮುಂದಿನ ಒಲಂಪಿಕ್ಸ್ ಕ್ರೀಡಾಕೂಟವು 2024ರಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿದೆ. ಪ್ಯಾರಿಸ್ ನಲ್ಲಿ 26 ಜುಲೈ – 11 ಅಗಸ್ಟ್ 2024 ರವರೆಗೆ ಆಯೋಜಿಸಲು ಉದ್ದೇಶಿಸಲಾಗಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತದ ಪ್ರದರ್ಶನ ಅದ್ಭುತವಾಗಿತ್ತು. ಭಾರತ 7 ಒಲಂಪಿಕ್ಸ್ ಪದಕಗಳನ್ನು ಗೆದ್ದು, ಈ ಹಿಂದಿನ ದಾಖಲೆಯನ್ನು ಮುರಿದಿದೆ. ಈ ಬಾರಿ ಚಿನ್ನ ಸೇರಿದಂತೆ 7 ಪದಕಗಳು ಗೆದ್ದಿರೋದು ವಿಶೇಷವಾಗಿತ್ತು. ನೂರು ವರ್ಷಗಳ ಆಸೆ ಈಡೇರಿದೆ.
ಟೋಕಿಯೋ ಒಲಂಪಿಕ್ಸ್ ನ ಸಮಾರೋಪ ಸಮಾರಂಭದಲ್ಲಿ ಭಾರತದ ತ್ರಿವರ್ಣ ದ್ವಜವನ್ನು ಹಿಡಿದು ತಂಡವನ್ನು ಮುನ್ನೆಡಿಸಿದರು. ಟೋಕಿಯೊ ಒಲಂಪಿಕ್ಸ್ ಭಾರತಕ್ಕೆ ಐತಿಹಾಸಿಕವಾಗಿದ್ದು, ಇದರಲ್ಲಿ ಭಜರಂಗ್ ಪುನಿಯಾ ಕೂಡ ಕಂಚಿನ ಪದಕ ಗೆದ್ದರು.
ಟೋಕಿಯೋ ಒಲಂಪಿಕ್ಸ್ ಕ್ರೀಡಾಂಗಣ ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತ್ತಿತ್ತು. ಟೋಕಿಯೋ ಒಲಂಪಿಕ್ಸ್ ಸಮಾರೋಪ ಸಮಾರಂಭವು ಪಟಾಕಿಗಳನ್ನು ಸಿಡಿಸುವ ಮೂಲಕ ಆರಂಭವಾಯ್ತು. ಇಡೀ ಒಲಂಪಿಕ್ಸ್ ಕ್ರೀಡಾಕೂಟವನ್ನು ವಿಶೇಷ ಕೋವಿಡ್ ಪ್ರೋಟೋಕಾಲ್ ಅಡಿಯಲ್ಲಿ ನಡೆಸಲಾಯಿತು.