Reported By : H.D. Savita
ಹೊಸದಿಲ್ಲಿ: ಭಾರತದಲ್ಲಿ ಕುಸ್ತಿ ಕ್ರೀಡೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಉತ್ತರಪ್ರದೇಶ ಸರ್ಕಾರ 2032ರ ಒಲಂಪಿಕ್ಸ್ ವರೆಗೆ ಭಾರತೀಯ ಕುಸ್ತಿಯನ್ನು ದತ್ತು ಪಡೆಯಲು ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಭಾರತೀಯ ಕುಸ್ತಿ ಒಕ್ಕೂಟ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮ್ಮತಿಸಿದ್ದಾರೆ. ಕುಸ್ತಿ ಪಟುಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಸಂಪೂರ್ಣ ಬೆಂಬಲ ನೀಡುವುದಾಗಿ ಯುಪಿ ಸರ್ಕಾರವು ಸುಮಾರು 170ಕೋಟಿ ರೂ.ಬಂಡವಾಳ ಹೂಡಿಕೆ ಮಾಡುವ ನೀರಿಕ್ಷೆ ಇದೆ ಎಂದು ಡಬ್ಲು ಎಫ್ ಐ ಅಧ್ಯಕ್ಷ ಬ್ರಿಜ್ ಭೂಷಣ ಶರಣ್‌ಸಿಂಗ್ ತಿಳಿಸಿದ್ದಾರೆ.
ಪ್ರಸ್ತುತ ಭಾರತೀಯ ಹಾಕಿ ತಂಡವನ್ನು ಒಡಿಸ್ಸಾ ಸರ್ಕಾರವು ಪ್ರೋತ್ಸಾಹಿಸುತ್ತಿದೆ. ಈಗ ಉತ್ತರಪ್ರದೇಶ ಸರ್ಕಾರವು ಭಾರತೀಯ ಕುಸ್ತಿ ಕ್ರೀಡೆಯನ್ನು ದತ್ತು ಪಡೆಯುವ ನಿರ್ಧಾರ ಸ್ವಾಗತಾರ್ಹ.