ಟೋಕಿಯೊ,ಆ,೦೬: ಕಂಚಿನ ಪದಕ ಗೆಲ್ಲುವ ತವಕದಲ್ಲಿದ್ದ ಭಾರತೀಯ ಹಾಕಿ ತಂಡದ ಕನಸು ಭಗ್ನವಾಗಿದೆ.
ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ಹಾಕಿ ಸೋಲು ಕಾಣುವ ಮೂಲಕ ಕಂಡಿದ್ದ ಕನಸು ತೀವ್ರನಿರಾಸೆಯಾಯಿತು.
ಶುಕ್ರವಾರ ಬೆಳಗ್ಗೆ ಮುಕ್ತಾಯಾದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ ೧ ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.
ಗ್ರೇಟ್ ಬ್ರಿಟನ್ -ಭಾರತ ಮಹಿಳಾ ಹಾಕಿ ತಂಡದ ನಡುವೆ ಇಂದು ಮುಕ್ತಾಯವಾದ ಕಂಚಿನ ಪದಕ ಬೇಟೆಯಲ್ಲಿ ೪-೩ ಗೋಲುಗಳ ಅಂತರ ಕಂಡುಬಂದು ಭಾರತ ಮಹಿಳಾ ಹಾಕಿ ತಂಡ ೪ನೇ ಸ್ಥಾನ ಪಡೆಯುವ ಮೂಲಕ ಈ ಬಾರಿಯ ಒಲಿಂಪಿಕ್ ಗೆ ವಿದಾಯ ಹೇಳಿದೆ.
ತಂಡದ ಸಾಧನೆ ಹೆಮ್ಮೆ ತಂದಿದೆ. ನಮ್ಮ ಮಹಿಳಾ ಹಾಕಿ ತಂಡದ ಸಾಧನೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿ ಇಡುತ್ತೇವೆ. ಸ್ವಲ್ಪದರಲ್ಲಿ ನಮಗೆ ಕಂಚಿನ ಪದಕ ಕೈತಪ್ಪಿ ಹೋಗಿದೆ. ಆದರೆ ಈ ತಂಡದ ಪರಿಶ್ರಮ, ಸಾಧನೆ ನವ ಭಾರತದ ಉತ್ಸಾಹವನ್ನು ಪ್ರತಿಫಲಿಸುತ್ತದೆ. ಮಹಿಳಾ ತಂಡದ ಯಶಸ್ಸು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಣ್ಣು ಮಕ್ಕಳು ಹಾಕಿ ಆಟವನ್ನು ಉತ್ತೇಜನಕಾರಿಯಾಗಿ ತೆಗೆದುಕೊಳ್ಳಲು ದಾರಿದೀಪವಾಗಲಿದೆ ಎಂದು ಪ್ರಧಾನಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕಂಚಿನ ಪದಕದ ಕನಸು ಭಗ್ನ-ಗ್ರೇಟ್ಬ್ರಿಟನ್ ಪಾಲಾದ ಕಂಚಿನ ಪದಕ
Share