‘ಏಳು’ ಪದಕಗಳ ಒಡತಿ: ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ ಎಮ್ಮಾ ಮೇಕಿಯನ್

Share

ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನಲ್ಲಿ ಒಂದಲ್ಲ ಎರಡಲ್ಲ ಬರೊಬ್ಬರಿ 7 ಪದಕಗಳನ್ನು ಪಡೆದು ವಿಶ್ವ ದಾಖಲೆ ಬರೆದಿದದ್ದಾಳೆ ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್.

ಅಷ್ಟೇ ಅಲ್ಲ ಒಲಂಪಿಕ್ಸ್ ಕೂಟದಲ್ಲೂ  ಅತೀ ಹೆಚ್ಚು ಪದಕಗಳನ್ನು ಪಡೆದ ಹೆಗ್ಗಳಿಕೆ ಕೂಡಾ ಇವಳದ್ದು. ಭಾನುವಾರ ನಡೆದ 4*100 ಫ್ರೀ ಸ್ಟೈಲ್ ರೀಲೆಯಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟಿಕ್ ಪಟು ಮರಿಯಾ ಗೊರೋವೋವಿಸ್ಕ 7ಪದಕ ಜಯಿಸಿದ್ದರು. ಇದಾದ ಬಳಿಕ ಈಗ ಎಮ್ಮಾ ಮೇಕಿಯನ್ ಒಂದೇ ಒಲಂಪಿಕ್ಸ್ ನಲ್ಲಿ 7ಪದಕಗಳನ್ನು ಪಡೆದಿದ್ದಾರೆ. 27ವರ್ಷದ ಎಮ್ಮಾ ಈ ಬಾರಿಯ ಟೋಕಿಯೋ ಒಲಂಪಿಕ್ಸ್ ನಲ್ಲಿ ಗೆದ್ದ ಒಟ್ಟು 7ಪದಕಗಳಲ್ಲಿ, 4 ಚಿನ್ನದ ಪದಕ ಹಾಗೂ 3 ಕಂಚಿನ ಪದಕಗಳು ಇವೆ.

ಇನ್ನೂ 2008ರ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ ಮೈಕೆಲ್ ಫೆಲ್ಫ್ಸ್ 8ಪದಕಗಳನ್ನು  ಗೆದ್ದಿದ್ದರು. ಇದೀಗ ಮೇಕೀಯನ್ ಇವರ ಸಾಲಿಗೆ ಸೇರಿಕೊಂಡಿದ್ದಾರೆ.

Girl in a jacket
error: Content is protected !!