Reported By : H.D Savita
ಟೋಕಿಯೋ,ಆ24: ಒಲಂಪಿಕ್ಸ್ ಆತಿಥ್ಯ ವಹಿಸಿಕೊಂಡ ದೇಶವೇ ಪ್ಯಾರಾಲಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಬೇಕು. ಹೀಗಾಗಿ ಒಲಂಪಿಕ್ಸ್ ನಲ್ಲಿ ಯಶಸ್ಸು ಕಂಡಿರುವ ಜಪಾನ್ ಟೋಕಿಯೋ ದಲ್ಲಿ ಇಂದು ಸಂಜೆ 16ನೇಚಾಲನೆ ನೀಲಿದೆ.. ಜಪಾನ್ ನ್ಯಾಷನಲ್‌ಸ್ಟೇಡಿಯಂ ನಲ್ಲಿ ನಿಗದಿಯಾಗಿರುವ ಪ್ಯಾರಾ ಅಥ್ಲೇಟ್ ಗಳ ಜಾಗತಿಕ ಕ್ರೀಡಾಕೂಟವು ಶುಭಾರಂಭಗೊಳ್ಳಲಿದೆ. ದೈಹಿಕ ವೈಕಲ್ಯಗಳನ್ನು ಮೆಟ್ಟಿ ನಿಂತು ಕ್ರೀಡಾ ಸಾಧನೆ ಮಾಡುತ್ತಿರುವವರಿಗಾಗಿ ಆಯೋಜನೆಮಾಡಲಾಗಿದ್ದು, ಬದುಕಿನಾಟದಲ್ಲಿ ಗೆದ್ದವರ ಕ್ರೀಡಾಕೂಟ ಎಂದೇ ಬಣ್ಣಿಸಲಾಗಿದೆ.
ಕೊರೊನಾ ಭೀತಿಯಿಂದ ತಲ್ಲಣ್ಣಿಸಿರುವ ಜನಸಮುದಾಯಕ್ಕೆ ‘ಭಾವನಾತ್ಮಕವಾಗಿ ಜತೆಯಾಗೋಣ’ ಎಂಬ ಘೋಷ್ಯವಾಕ್ಯದೊಂದಿಗೆ ಸ್ವಾಗತ ತೋರುತ್ತಿದೆ ಟೋಕಿಯೋ ಪ್ಯಾರಾ ಒಲಂಪಿಕ್ಸ್ 2020.
ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಲಿದೆ. ಜಪಾನ್ ದೊರೆ ನುರು ಹಿಟೋ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಹೈಜಂಪ್ ಆಟಗಾರ ತಂಗವೇಲು ಮರಿಯಪ್ಪನ್ ಭಾರತದ ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಬಾರಿ ಒಟ್ಟು ಭಾರತದ 54 ಅಥ್ಲೀಟ್ ಗಳು ಭಾಗವಹಿಸಲಿದ್ದು, ಈ ಪೈಕಿ ಈಜು ಪಟು ನಿರಂಜನ್ ಮುಕುಂದನ್ ಮತ್ತು ಪವರ್ ಲಿಫ್ಟರ್ ಸಕಿನಾ ಖಾತುನ್ , ಇಬ್ಬರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.