ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಜಯ
by ಕೆಂಧೂಳಿ
ಪುಣೆ,ಜ,೩೧-ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ೧ಇ-೨೦ ಪಂದ್ಯದಲ್ಲಿ ಬಾರತ ಜಯಸಾಧಿಸಿತು.
ಪುಣೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ೯ ವಿಕೆಟ್ಗಳ ನಷ್ಟಕ್ಕೆ ೧೮೧ ರನ್ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ೨೦ ಓವರ್ಗಳಲ್ಲಿ ೧೬೬ ರನ್ ಗಳಿಸುವ ಮೂಲಕ ೧೫ ರನ್ಗಳ ಅಂತರದಲ್ಲಿ ಸೋಲು ಅನುಭವಿಸಿದೆ.
.ಬ್ಯಾಟಿಂಗ್ಗೆ ಬಂದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಈ ಬಾರಿಯೂ ಆರಂಭಿಕ ಬ್ಯಾಟರ್ ಸಂಜು ಸಾಮ್ಸನ್ ವಿಫಲರಾದರು. ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು. ತಿಲಕರ್ ವರ್ಮಾ, ನಾಯಕ ಸೂರ್ಯಕುಮಾರ್ ಯಾದವ್ ಸೊನ್ನೆ ಸುತ್ತಿದರು,. ಸೂರ್ಯ ಕಳಪೆ ಬ್ಯಾಟಿಂಗ್ ಫಾರ್ಮ್ ಈ ಪಂದ್ಯದಲ್ಲೂ ಮುಂದುವರಿಯಿತು.ಮತ್ತೊಬ್ಬ ಆರಂಭಿಕ ಅಭಿಷೇಕ್ ಶರ್ಮಾ ೨೯ ರನ್ ಬಾರಿಸಿದರು. ಭರವಸೆಯ ಆಟವಾಡುತ್ತಿದ್ದ ರಿಂಕು ೩೦ ರನ್ಗೆ ಔಟಾದರು. ಆರನೇ ವಿಕೆಟ್ಗೆ ಜೊತೆಯಾದ ಶಿವಂ ದುಬೆ ಹಾಗೂ ಹಾರ್ದಿಲಗ ಪಾಂಡ್ಯ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು. ಉಭಯ ಆಟಗಾರರು ಅರ್ಧ ಶಕತ ಬಾರಿಸಿದರು.ಇಂಗ್ಲೆಂಡ್ ಪರ ಶಕೀಬ್ ಮೊಹಮ್ಮದ್ ೩, ಜೆಮಿ ಓವರ್ಟನ್ ೨ ಹಾಗೂ ಆದಿಲ್ ರಶೀದ್, ಬ್ರೈಡನ್ ಕಾರ್ಸ್ ತಲಾ ಒಂದು ವಿಕೆಟ್ ಕಿತ್ತರು. ಇದರಿಂದ ಭಾರತ ಜಯಗಳಿಸಿತು.