Reported By :H.D.Savita
“ಗನ್ ಬೌಲರ್” ಖ್ಯಾತಿಯ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟ್ವಿಟರ್ ನಲ್ಲಿ ಸ್ಟೇನ್ ಎಲ್ಲಾ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ಸೌತ್ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 635 ವಿಕೆಟ್ ಪಡೆದಿರುವ ಸ್ಟೇನ್ ಕಳೆದ ಕೆಲ ವರ್ಷಗಳಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಟಿ-20 ವಿಶ್ವಕಪ್ ಗೂ ಮುನ್ನವೇ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಇನ್ನು ದಕ್ಷಿಣ ಆಫ್ರಿಕಾ ಪರ ಡೇಲ್ ಸ್ಟೇನ್ 93 ಟೆಸ್ಟ್ನಿಂದ 435 ವಿಕೆಟ್ ಪಡೆದಿದ್ದರೆ, 125 ಏಕದಿನ ಪಂದ್ಯಗಳಿಂದ 196 ಮತ್ತು 47 ಟಿ20 ಪಂದ್ಯಗಳಿಂದ 64 ವಿಕೆಟ್ ಕಬಳಿಸಿದ್ದಾರೆ.
ತಮ್ಮ 17 ವರ್ಷಗಳ ವೃತ್ತಿ ಜೀವನದ ನಿವೃತ್ತಿಯನ್ನು ಟ್ವಿಟರ್ ಮೂಲಕ ಘೋಷಿಸಿದ್ದಾರೆ. ಭಾವನಾತ್ಮಕವಾಗಿ ತಮ್ಮ ಪೋಸ್ಟ್ ನಲ್ಲಿ ತಂಡದ ಆಟಗಾರರು, ಎಲ್ಲಾ ಅಭಿಮಾನಿಗಳು, ಪತ್ರಕರ್ತರು, ಸ್ನೇಹಿತರು ಮತ್ತು ಕುಟುಂಬ ಸದಸ್ಯರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.