ಶಿವರಾಣಿ ದೇವಿ ಎಂಬ ಬರೆಹಗಾರ್ತಿ ಮತ್ತು ಪ್ರೇಮ್ ಚಂದ್ ಪತ್ನಿ

ಪ್ರೇಮ್ ಚಂದ್ ಅವರ ಬದುಕು ಬರೆಹಗಳ ಬಿಡಿಸಲಾಗದ ಭಾಗವೇ ಆಗಿ ಹೋಗಿದ್ದರು ಪತ್ನಿ ಶಿವರಾಣಿದೇವಿ. ಪ್ರೇಮ್ ಚಂದ್ ಎರಡನೆಯ ಮದುವೆಯಲ್ಲಿ ಅವರ ಕೈಹಿಡಿದಾಗ ಶಿವರಾಣಿ ಹನ್ನೊಂದು ವರ್ಷ ವಯಸ್ಸಿನ ಬಾಲವಿಧವೆ.’ಕಾಯಸ್ಥ ಬಾಲ ವಿಧವಾ ಉದ್ಧಾರಕ ಪುಸ್ತಿಕಾ’ದಲ್ಲಿ ಅಚ್ಚಾಗಿದ್ದ ಜಾಹೀರಾತನ್ನು ಓದಿ ಶಿವರಾಣಿದೇವಿಯವರ ತಂದೆಗೆ ಪತ್ರ ಬರೆದು ಆಕೆಯನ್ನು ವರಿಸಿದ್ದರು ಪ್ರೇಮ್ ಚಂದ್.
ಪತಿಯ ನಿಧನಾನಂತರ ನಲವತ್ತು ವರ್ಷಗಳ ಕಾಲ ಜೀವಿಸಿದ್ದವರು. ಬರವಣಿಗೆಯಲ್ಲಿ ತೊಡಗಿಕೊಂಡವರು. ಅಂದಿನ ಕಾಲಘಟ್ಟದ ಮಹತ್ವದ ಕತೆಗಾರ್ತಿಯಾಗಿದ್ದರು ಆಕೆ. ಸ್ತ್ರೀ ವಿಮುಕ್ತಿಯ ವಿಷಯದಲ್ಲಿ ಪತಿಗಿಂತ ಹೆಚ್ಚು ಮುಂದೆ ಸಾಗಿದ್ದ ಆಲೋಚನೆ ಅವರದಾಗಿತ್ತು.
ಆಕೆಯ ಕಥಾನಾಯಕಿಯರು ಅನ್ಯಾಯದ ವಿರುದ್ಧ ಸಿಡಿದೇಳುವವರು. ದಿಟ್ಟರೂ ಆತ್ಮವಿಶ್ವಾಸಭರಿತರೂ, ಉದ್ಧಟರೂ ಆಗಿರುತ್ತಿದ್ದರು ಬಾಲವಿಧವೆ ಕಾಂತಿ ತನ್ನ ಗ್ರಾಮದ ಲಂಪಟ ಮೋಹನನ ಮೂಗನ್ನೇ ಕತ್ತರಿಸಿ ಶಿಕ್ಷಿಸುತ್ತಾಳೆ. ನಲವತ್ತರ ವಯಸ್ಸಿನ ನಾಲ್ಕು ಮಕ್ಕಳ ತಂದೆಯನ್ನು ಮದುವೆಯಾಗುವ ಅನಿವಾರ್ಯದ ಕತ್ತರಿಯಲ್ಲಿ ಸಿಕ್ಕಿಹಾಕಿಕೊಳ್ಳುವ ರಾಮ್ ಪ್ಯಾರಿ ಪತ್ರ ಬರೆದು ವರನಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾಳೆ. ಅವನು ಲೆಕ್ಕಿಸುವುದಿಲ್ಲ. ಮದುವೆ ಮಂಟಪದಲ್ಲಿ ಘೂಂಘಟ್ ಕಿತ್ತೆಸೆದು ವರನನ್ನು ಚಪ್ಪಲಿಯಿಂದ ಬಾರಿಸುತ್ತಾಳೆ. ತಂದೆಯತ್ತ ಮತ್ತೊಂದು ಚಪ್ಪಲಿಯನ್ನು ಎಸೆದು ಹೊರ ನಡೆಯುತ್ತಾಳೆ. ಅವರ ಕತೆಗಳು ಎಂಬತ್ತು ವರ್ಷಗಳ ನಂತರ ಹಿಂದೀ ಓದುಗರಿಗೆ ಇದೀಗ ಲಭಿಸತೊಡಗಿವೆ.
ತಮ್ಮ ಪ್ರಸಿದ್ಧ ಪತಿಯ ನೆರಳಿನಲ್ಲಿ ತಾವು ಕಳೆದು ಹೋಗದಂತೆ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳುತ್ತಾರೆ. ಪತ್ನಿಯ ಸಲಹೆಯನ್ನು ಕೇಳಿ ಪಡೆದು ಅದನ್ನು ಗೌರವಿಸುತ್ತಾರೆ ಪ್ರೇಮ್ ಚಂದ್. ನಿನಗೆ ಅರ್ಥವಾಗುವುದಿಲ್ಲವೆಂದು ಪತಿ ಹೇಳುವ ಅನಿಬೆಸೆಂಟ್ ಅವರ ಕೃತಿಯೊಂದನ್ನು ಆರು ತಿಂಗಳ ಕಾಲ ಹಠ ಹಿಡಿದು ಪದ ಪದವನ್ನೂ ಅರಗಿಸಿಕೊಂಡು ಓದುತ್ತಾರೆ.

ಶಿವರಾಣಿಯವರ ಕತೆಗಳನ್ನು ಪ್ರೇಮ್ ಚಂದ್ ಬರೆದುಕೊಡುತ್ತಿದ್ದಾರು ಎಂಬ ಓದುಗರ ಸಂದೇಹ ಕಾಲಕ್ರಮೇಣ ನಿವಾರಣೆಯಾಗುತ್ತದೆ. ಅದನ್ನು ನಿವಾರಿಸಲು ಖುದ್ದು ಪ್ರೇಮ್ ಚಂದ್ ಹೆಣಗುತ್ತಾರೆ. ತಮ್ಮ ಕತೆಗಳು ಪತಿಯ ಕತೆಗಳ ಅನುಕರಣೆ ಆಗದಂತೆ ಪ್ರಜ್ಞಾಪೂರ್ವಕವಾಗಿ ಎಚ್ಚರ ವಹಿಸುತ್ತಾರೆ ಶಿವರಾಣಿ.
1956ರಲ್ಲಿ ಪ್ರಕಟವಾದ ಅವರ ‘ಪ್ರೇಮ್ ಚಂದ್ ಘರ್ ಮೇಂ’ (ಮನೆಯೊಳಗೆ ಪ್ರೇಮ್ ಚಂದ್) ಎಂಬ ಅವರ ಕೃತಿ ಸಾಹಿತ್ಯ ಇತಿಹಾಸಕಾರರ ಪಾಲಿನ ಅಮೂಲ್ಯ ನಿಧಿ. ಪ್ರೇಮ್ ಚಂದ್ ಮತ್ತು ಶಿವರಾಣಿಯವರ ಸುತ್ತ ಸುತ್ತುವ ಈ ಕೃತಿ ಅಲ್ಲಲ್ಲಿ ಶಿವರಾಣಿಯವರ ಸಾಹಿತ್ಯಾಸಕ್ತಿ ಮತ್ತು ಅಂದಿನ ರಾಜಕೀಯ ವಾತಾವರಣ ಕುರಿತು ಬೆಳಕು ಚೆಲ್ಲುತ್ತದೆ.ಪ್ರೇಮ್ ಚಂದ್ ಕುರಿತ ಅವರ ಕೃತಿಯಲ್ಲಿ ಅವರ ಮನಸ್ಸಾಕ್ಷಿ ಮಾತಾಡುತ್ತದೆ.ಜಗತ್ತಿನ ಕಣ್ಣಿಗೆ ಕಾಣದಿರುವ ಪ್ರೇಮ್ ಚಂದ್ ಅವರಿಗೆ ಮಡದಿಯ ಕಣ್ಣಿನ ಕನ್ನಡಿಯನ್ನು ಹಿಡಿಯುತ್ತದೆ.
ಪತಿಯ ಮಾನವೀಯತೆಯನ್ನು ಮೆಚ್ಚುತ್ತಲೇ ಕಟಕಟೆಯಲ್ಲಿ ನಿಲ್ಲಿಸಿ ಆತನ ವಿವಾಹೇತರ ಪ್ರೇಮ ಪ್ರಸಂಗವನ್ನು ಪ್ರಶ್ನಿಸಿದ್ದಾರೆ.
ಮೊದಲ ಪತ್ನಿ ಇದ್ದಾಗಲೇ ಮತ್ತೊಬ್ಬ ಹೆಣ್ಣುಮಗಳ ಸಂಗ ಮಾಡಿದ್ದೆ. ನೀನು ಬಂದ ನಂತರವೂ ಈ ಸಂಬಂಧ ಮುಂದುವರೆದಿತ್ತು ಎಂದು ಶಿವರಾಣಿಯವರ ಮುಂದೆ ಪ್ರೇಮ್ ಚಂದ್ ತಪ್ಪೊಪ್ಪಿಕೊಂಡಿದ್ದರು. ಆದರೆ ತಾವು ಪ್ರೇಮ್ ಚಂದ್ ಬದುಕಿನಲ್ಲಿ ಕಾಲಿಟ್ಟ ನಂತರವೂ ಆತ ಮತ್ತೊಬ್ಬ ಹೆಣ್ಣುಮಗಳ ಸಂಗ ಮುಂದುವರೆಸಿದ್ದ ಶಿವರಾಣಿಯವರಿಗೆ ತಿಳಿದಿತ್ತು. ಆದರೆ ಪತಿಯ ಮುಂದೆ ಆ ಬಗ್ಗೆ ಬಾಯಿ ಬಿಡಲಿಲ್ಲ. ಈ ವಿಷಯ ಪ್ರೇಮ್ ಚಂದ್ ಅವರಿಗೆ ಗೊತ್ತಾಯಿತು. ಹೃದಯವಂತಿಕೆಯಲ್ಲಿ ನೀನು ನನಗಿಂತ ದೊಡ್ಡವಳು ಎಂದು ಪ್ರತಿಕ್ರಿಯಿಸುತ್ತಾರೆ.
ಶಿವರಾಣಿಯವರ ಕತೆಗಳು ಬೇರೆ ಭಾಷೆಗೆ ಅನುವಾದಗೊಂಡರೆ ಪ್ರೇಮ್ ಚಂದ್ ಬಹುವಾಗಿ ಖುಶಿಪಡುತ್ತಿದ್ದರು. ಆಗಾಗ ಪತಿ ಪತ್ನಿ ಇಬ್ಬರ ಕತೆಗಳನ್ನೂ ನಿಯತಕಾಲಿಕಗಳು ಪ್ರಕಟಣೆಗೆ ಕೋರುತ್ತಿದ್ದವು. ಶಿವರಾಣಿಯವರ ‘ಕುರ್ಬಾನಿ’ ಹೆಸರಿನ ಕತೆಯೊಂದು ಭಾರೀ ಜನಮೆಚ್ಚುಗೆ ಗಳಿಸಿತ್ತು.

ಪ್ರೇಮ್ ಚಂದ್ ಕುರಿತ ಶಿವರಾಣಿ ಕೃತಿಯು ಸ್ತ್ರೀವಾದೀ ಕಣ್ಣೋಟವನ್ನು ಕಟ್ಟಿಕೊಡುವ ದಸ್ತಾವೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಸಾಹತು ಕಾಲದ ರಾಜಕೀಯ-ಸಾಮಾಜಿಕ-ಸಾಹಿತ್ಯಕ ಆಂದೋಲನದಲ್ಲಿ ತೊಡಗಿಕೊಂಡ ವಿರಳ ಜೋಡಿಯಿದು.
ನ್ಯಾಯಾಲಯಕ್ಕೆ ಅಲೆದಾಡಬೇಕಿದ್ದ ದಿನಗಳಲ್ಲಿ ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆದು ತಾವು ಓದುತ್ತಿದ್ದ ಇಂಗ್ಲಿಷ್ ಪತ್ರಿಕೆಯ ಬರೆಹಗಳ ಸಾರವನ್ನು ಪತ್ನಿಗೆ ಅನುವಾದಿಸಿ ಹೇಳುತ್ತಾರೆ. ಅವರ ಕತೆಗಳು ಮತ್ತು ಪತ್ರಿಕೆ ವಾಚನವನ್ನು ಆಲಿಸಿದ ಶಿವರಾಣಿ ಕ್ರಮೇಣ ಸಾಹಿತ್ಯ ಕುರಿತು ಒಲವನ್ನು ಬೆಳೆಸಿಕೊಳ್ಳುತ್ತಾರೆ. ಮನೆಯಲ್ಲಿದ್ದಾಗಲೆಲ್ಲ ಪತಿ ತಮಗೆ ಓದಿ ಹೇಳಬೇಕೆಂದು ಆಗ್ರಹಿಸುತ್ತಾರೆ. ಪತಿ ಮನೆಯಿಂದ ಹೊರಗೆ ಹೋದಾಗ ದಿನವಿಡೀ ಓದುತ್ತಾರೆ.
ಪ್ರೇಮ್ ಚಂದ್ ಅವರ ಮೇಲೆ ಆದ ಗಾಂಧೀ ಪ್ರಭಾವ ಶಿವರಾಣಿಯವರನ್ನೂ ತಾಗುತ್ತದೆ. ಗಾಂಧೀ ಆಂದೋಲನದಲ್ಲಿ ಭಾಗವಹಿಸುತ್ತಾರೆ. ಗೋರಖಪುರಕ್ಕೆ ಗಾಂಧೀ ಬಂದ ವರ್ಷ ಒಡವೆ ಧರಿಸುವುದಿಲ್ಲವೆಂದು ಮಾಡಿದ ಪ್ರತಿಜ್ಞೆಯನ್ನು ಆಕೆ ಕಡೆಯುಸಿರ ತನಕ ಪಾಲಿಸುತ್ತಾರೆ.
1930ರ ದಶಕದಲ್ಲಿ ಲಖ್ನೋದ ಮಹಿಳಾ ಆಶ್ರಮದ ಸಭೆಯೊಂದರಲ್ಲಿ 12 ಸಾವಿರ ಮಂದಿಯನ್ನು ಉದ್ದೇಶಿಸಿ ಸುಡುಗೆಂಡದ ಭಾಷಣ ಮಾಡುತ್ತಾರೆ. ವಿದೇಶೀವಸ್ತ್ರ ಸುಟ್ಟಿದ್ದಕ್ಕಾಗಿ ಬಂಧನಕ್ಕೆ ಒಳಗಾಗುತ್ತಾರೆ.
ಪ್ರೇಮ್ ಚಂದ್ ಕುರಿತು ಲೆಕ್ಕವಿಲ್ಲದಷ್ಟು ಜೀವನಚರಿತ್ರೆಗಳು ಬಂದಿರಬಹುದು. ಅವರ ಮಗ ಶ್ರೀಪತ್ ರೈ ಬರೆದಿರುವ ‘ಕಲಮ್ ಕೀ ಸಿಪಾಯಿ’ ಕೂಡ ಇರಬಹುದು. ಆದರೆ ಪತ್ನಿ ಶಿವರಾಣಿ ದೇವಿ ಅವರ ‘ಪ್ರೇಮ್ ಚಂದ್ ಘರ್ ಮೇಂ’ ಕೃತಿಯನ್ನು ಯಾವುವೂ ಸರಿಗಟ್ಟುವುದಿಲ್ಲ. ಈ ಹೊತ್ತಗೆಯು ಕೇವಲ ಪ್ರೇಮ್ ಚಂದ್ ಅವರ ಜೀವನ ಚರಿತ್ರೆಯಲ್ಲ, ಶಿವರಾಣಿಯವರ ಆತ್ಮಕತೆಯೂ ಹೌದು. ಎಂಬ ನಿಷ್ಕರ್ಷೆಗೆ ಬರಲಾಗಿದೆ.
ಮೇಲ್ನೋಟಕ್ಕೆ ಈ ಪುಸ್ತಕ ಮನೆವಾರ್ತೆಯ ನೆನಪುಗಳನ್ನು ಆಧರಿಸಿದ್ದೆಂದು ತೋರಬಹುದು. ಆದರೆ ಪ್ರೇಮ್ ಚಂದ್ ಅವರ ಒಳ-ಹೊರಗುಗಳನ್ನು ಇಣುಕಿ ನೋಡ ಅರ್ಥ ಮಾಡಿಕೊಳ್ಳಲು ಅನುವಾಗುವ ಪ್ರಾಮಾಣಿಕ ಕಿಟಕಿಯಿದು. ಅವರ ಸಾಹಿತ್ಯಕ ಮತ್ತು ಮಾನವೀಯ ಗುಣಗಳ ಮೇಲೆ ಬೆಳಕು ಚೆಲ್ಲುವ ಕಿಟಕಿ. ಪ್ರೇಮ್ ಚಂದ್ ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುವ ಬರೆಹವಿದು. ಇಲ್ಲಿನ ಪ್ರತಿಯೊಂದು ಪದ ಪದದ ಮೇಲೂ ಅವರ ವ್ಯಕ್ತಿತ್ವದ ಛಾಪು ಮೂಡಿದೆ ಎಂದು ವಿಮರ್ಶಕರು ಹೇಳಿದ್ದಾರೆ.
ದಿನನಿತ್ಯದ ಬದುಕು ಬಾಳುವೆಯ ಸಹಜ ಸರಳ ಮಾತುಕತೆಗಳಲ್ಲೇ ಪ್ರೇಮ್ ಚಂದ್ ಅವರನ್ನು ಶಿವರಾಣಿ ಸಾಕಾರಗೊಳಿಸಿದ್ದಾರೆ. ‘ಅವರು ಉಳಿದೆಲ್ಲರಿಗೂ ಮಹಾನ್ ಆಗಿದ್ದಿರಬಹುದು ಆದರೆ ನನ್ನ ಪಾಲಿಗೆ ನನ್ನವರಾಗಿದ್ದರು, ನಾನು ಅವರವಳಾಗಿದ್ದೆ. ನಮ್ಮಿಬ್ಬರ ನಡುವೆ ಮಹಾನತೆಗೆ ಜಾಗವೆಲ್ಲಿಯದು?’ ಇಬ್ಬರ ನಡುವೆ ಅನೇಕ ವಿಷಯಗಳ ಕುರಿತು ಬಿಸಿ ವಾಗ್ವಾದ ನಡೆಯುತ್ತಿತ್ತು. ಶಿವರಾಣಿ ಯಾವ ಕಾರಣಕ್ಕೂ ಹಿಮ್ಮೆಟ್ಟುತ್ತಿರಲಿಲ್ಲ. ಆಕೆಯ ಸಿಟ್ಟಿನ ಮಾತಿಗೆ ಪ್ರೇಮ್ ಚಂದ್ ನಕ್ಕು ಜವಾಬು ಹೇಳುತ್ತಿದ್ದರು. ಆಕೆ ಪತಿಯನ್ನು ಮಂಕುದಿಣ್ಣೆ ಎಂದು ಕರೆದರೆ, ಆಕೆಯನ್ನು ಹುಚ್ಚೀ, ಹುಚ್ಚುರಾಮೀ ಎಂದು ಆತ ಕರೆಯುತ್ತಿದ್ದರಂತೆ. ‘ಈ ಪುಸ್ತಕ ರಚನೆಯ ಉದ್ದೇಶ ಆ ಮಹಾನ್ ಆತ್ಮದ ಕೀರ್ತಿಯನ್ನು ಹರಡಿ ಹಬ್ಬಿಸುವುದಲ್ಲ’ ಎಂದು ಆಕೆ ಆರಂಭದಲ್ಲೇ ಸ್ಪಷ್ಟಪಡಿಸುತ್ತಾರೆ.

ಪತ್ನಿಯಾದ ತಮ್ಮೊಡನೆ ಪ್ರೇಮ್ ಚಂದ್ ಗೆಳೆಯನಂತೆ ನಡೆದುಕೊಳ್ಳುತ್ತಿದ್ದುದನ್ನು ಶಿವರಾಣಿ ಆಪ್ಯಾಯತೆಯಿಂದ ನೆನೆಯುತ್ತಾರೆ. ‘ನನಗಾಗಿ ಅವರು ಯಾವ ಕೆಲಸವನ್ನು ಮಾಡಲೂ ತಯಾರು. ಹೆಣ್ಣು ಗಂಡಿನ ಚಾಕರಿ ಬೇರೆ ಬೇರೆ ಎಂಬ ಭೇದಭಾವ ತೋರುತ್ತಿರಲಿಲ್ಲ. ನಾನು ಅಡುಗೆ ಮುಗಿಸಿದರೆ ನನ್ನನ್ನು ಕೋಣೆಗೆ ಕರೆದೊಯ್ದು ಓದಲು ಒಂದು ಒಳ್ಳೆಯದೇನಾದರೂ ಕೈಗಿಟ್ಟು, ತಾವು ಬರೆಯಲು ಕೂಡುತ್ತಿದ್ದರು. ನಿತ್ಯ ಇಂಗ್ಲಿಷ್ ಪತ್ರಿಕೆ ಓದಿ ಅನುವಾದ ಮಾಡಿ ಕೇಳಿಸುತ್ತಿದ್ದರು. ಉರ್ದು ಕೂಡ ಅಂತೆಯೇ. ಇಂಗ್ಲಿಷ್ ಉರ್ದು ನನಗೆ ತಿಳಿಯದು ಎಂಬ ಕೊರತೆಯೇ ನನ್ನನ್ನು ಎಂದಿಗೂ ಕಾಡಿದ್ದಿಲ್ಲ. ನಾನು ಬಜಾರಕ್ಕೇನಾದರೂ ಹೋಗುವುದಿದ್ದರೆ ತಾವು ಎದ್ದು ಹೊಸ್ತಿಲ ತನಕ ನನ್ನ ಜೊತೆ ನಡೆದು ವಾಪಸಾಗುತ್ತಿದ್ದರು’.
ಮಗಳ ಮದುವೆಯ ಹೊತ್ತಿನಲ್ಲಿ ‘ಕನ್ಯಾದಾನ’ದ ರಿವಾಜನ್ನು ಪ್ರೇಮ್ ಚಂದ್ ಬೀಳುಗಳೆದದ್ದನ್ನು ಶಿವರಾಣಿ ಹೀಗೆ ಬಣ್ಣಿಸುತ್ತಾರೆ- ‘ಕನ್ಯಾದಾನವನ್ನಂತೂ ನೀವೇ ಮಾಡಬೇಕಾಗ್ತದೆ ಎಂದೆ ನಾನು. ನೀವು (ಪ್ರೇಮ್ ಚಂದ್) ಹೇಳಿದಿರಿ- ನಿರ್ಜೀವ ವಸ್ತುಗಳನ್ನು ದಾನ ಮಾಡಲಾಗುತ್ತದೆ. ಜೀವವಿದ್ದವುಗಳ ಪೈಕಿ ಗೋವನ್ನು ಮಾತ್ರವೇ ದಾನ ಮಾಡುತ್ತಾರೆ. ಹೀಗಿದ್ದಾಗ ಮಗಳನ್ನು ದಾನ ಮಾಡುವುದು ಹೇಗೆ? ನನಗೆ ಇಷ್ಟವಿಲ್ಲ….ನೀನು ಬೇಕಾದರೆ ಮಾಡಿಕೋ. ನಾನಂತೂ ಮಾಡಲಾರೆ.’ ಕಡೆಗೆ ಶಿವರಾಣಿಯೇ ಮಗಳ ಕನ್ಯಾದಾನ ಮಾಡುತ್ತಾರೆ.
ಪ್ರಚಂಡ ಪ್ರಸಿದ್ಧ ಜೀವನ ಸಂಗಾತಿಯ ನೆರಳಿನಲ್ಲಿ ಕಳೆದೇ ಹೋದ ಪತ್ನಿಯರು, ಪತಿಯರಿಗೆ ಲೆಕ್ಕವಿಲ್ಲ.
ಆದರೆ ಹಿಂದೀ ಉರ್ದುವಿನಲ್ಲಿ ಬರೆದವರು ಮಾನವತಾವಾದಿ ಲೇಖಕ ಮುನ್ಷಿ ಪ್ರೇಮ್ ಚಂದ್. ಅವರ ಪತ್ನಿ ಶಿವರಾಣಿ ದೇವಿ ಪತಿಯ ಪ್ರಕಾಶಮಯ ಪ್ರಭಾವಳಿಯಲ್ಲೂ ಕಳೆದ ಹೋಗದೆ ಹೊಳೆದವರು. ಸ್ವಂತ ಅಸ್ಮಿತೆ ಉಳಿಸಿಕೊಂಡವರು.
‘ನಮ್ಮ ಕನಸಿನ ರಾಷ್ಟ್ರೀಯತೆಯಲ್ಲಿ ಜನ್ಮಜಾತ ವರ್ಣಗಳ ಗಂಧಗಾಳಿಗೂ ಅವಕಾಶ ಇರದು. ಅದು ಶ್ರಮಿಕರು ಮತ್ತು ರೈತರ ಸಾಮ್ರಾಜ್ಯ. ಬ್ರಾಹ್ಮಣ ಕಾಯಸ್ಥ ಕ್ಷತ್ರಿಯರು ಅಲ್ಲಿರುವುದಿಲ್ಲ. ಸಮಸ್ತರೂ ಭಾರತವಾಸಿಗಳು. ಈ ಎಲ್ಲ ಲಡಾಯಿ ಬೆರಳೆಣಿಕೆಯ ವ್ಯಕ್ತಿಗಳದು. ಇವರಿಂದ ದೂರವಿರುವ ರಾಷ್ಟ್ರದಲ್ಲಿ ಹಿಂದೂಗಳೂ ಇಲ್ಲ, ಮುಸಲ್ಮಾನರೂ ಇಲ್ಲ. ಅಲ್ಲಿರುವವರೆಲ್ಲ ಶ್ರಮಿಕರು ಮತ್ತು ರೈತರು. ಒಬ್ಬರಿಗಿಂತ ಮತ್ತೊಬ್ಬರು ದೀನ ದರಿದ್ರ ದಲಿತರು ಮತ್ತು ಶೋಷಣೆಯ ಗಾಣದಲ್ಲಿ ಅರೆಯಲ್ಪಟ್ಟವರು. ಆರತಿ ನಮಾಜು-ಹಿಂದೀ-ಉರ್ದು ಸಮಸ್ಯೆಗಳು ಇಲ್ಲಿ ಇರುವುದೇ ಇಲ್ಲ’ ಎಂದು 90 ವರ್ಷಗಳ ಹಿಂದೆಯೇ ಹೇಳಿದ್ದವರು ಪ್ರೇಮ್ ಚಂದ್.
ಪ್ರೇಮಚಂದ್ ಅವರ 141ನೆಯ ಜಯಂತಿ ಮೊನ್ನೆ ಜುಲೈ 31ರಂದು ಸರಿದು ಹೋಯಿತು. ಪತ್ನಿ ಶಿವರಾಣಿ ದೇವಿಯವರ ಬರೆಹದ ಬದುಕಿಗೆ ನೀರೆರೆದು ಮನಸಾರೆ ಪ್ರೋತ್ಸಾಹಿಸಿದ ಪತಿಯಾಗಿದ್ದರು ಅವರು.

![]() |
ReplyForward
|