ತರಾಸು ಸಂಭಾಷಣೆ ರಚಿಸಿದ ಶಿವಲಿಂಗ ಸಾಕ್ಷಿ ನಟವರಗಂಗಾಧರಗೀತೆ ರಚಿಸಿದಕರೀಂಖಾನ್

Share


ತರಾಸುಸಂಭಾಷಣೆರಚಿಸಿದ ಶಿವಲಿಂಗ ಸಾಕ್ಷಿ ನಟವರಗಂಗಾಧರಗೀತೆ ರಚಿಸಿದಕರೀಂಖಾನ್

ಶಿವಲಿಂಗ ಸಾಕ್ಷಿ:ಪ್ರಸಿದ್ಧ ಕಾದಂಬರಿಕಾರ ತ.ರಾ.ಸು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ ಕಪ್ಪು-ಬಿಳುಪು ಭಕ್ತಿಪ್ರಧಾನಚಿತ್ರ ಶಿವಲಿಂಗಲಿಂಗ ಸಾಕ್ಷಿ ವೀನಸ್ ಫಿಲಂಎಕ್ಸ್‌ಛೇಂಜ್ ಲಾಂಛನದಲ್ಲಿ ೧೯೬೦೬ಲ್ಲಿ ತೆರೆಗೆ ಬಂದಿತು. ಡಿ.ಶಂಕರ್‌ಸಿಂಗ್ ನಿರ್ಮಾಣ ಮಾಡಿದಚಿತ್ರವನ್ನುಅವರೇಚಂದ್ರಮೋಹನ್ ಹೆಸರಿನಲ್ಲಿ ನಿರ್ದೇಶಸಿದರು. ಪ್ರತಿಮಾದೇವಿ, ರಮಾದೇವಿ, ಅಶ್ವತ್, ಉದಯಕುಮಾರ್, ಬಾಲಕೃಷ್ಣ್ಣ, ಚಿತ್ರದಲ್ಲಿ ಅಭಿನಯಿಸಿದರು.ಚಿತ್ರದ ಹಾಸ್ಯ ಸಂಭಾಷಣೆಯನ್ನು ನಟ ಟಿ.ಎನ್.ಬಾಲಕೃಷ್ಣ ಬರೆದರು. ಪಿ.ಶಾಮಣ್ಣ ಸಂಗೀತ ನೀಡಿದಚಿತ್ರದಲ್ಲಿ ಅಳವಡಿಸಿದ್ದ ೯ ಹಾಡುಗಳನ್ನು ಎಸ್.ಕೆ.ಕರೀಂಖಾನ್ ರಚಿಸಿದರು.ಮೈಸೂರಿನ ಪ್ರೀಮಿಯರ್ ಸ್ಟುಡಿಯೊದಲ್ಲಿಚಿತ್ರಚಿತ್ರೀಕರಣಗೊಂಡಿತು.ಕೈಲಾಸದರುದ್ರಕನ್ಯ ಹಾಗೂ ಅವಳ ಪ್ರಿಯಕರ ಶಿವನಿಂದ ಶಾಪ ಪಡೆದು ಭೂಲೋಕದಲ್ಲಿ ಜನಿಸುವರು.ಈ ಘಟನೆಯನ್ನು ಆಧರಿಸಿ ಚಿತ್ರದಕಥೆ ಹೆಣೆಯಲಾಗಿತ್ತು.

ಎಸ್.ಕೆ.ಕರೀಂಖಾನ್: ಎಸ್.ಕೆ.ಕರೀಂಖಾನ್ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ೧೯೦೮ರಲ್ಲಿ ಜನಿಸಿದರು. ೧೯೦೮-೨೦೦೬. ತಾಯಿಜೈನಬ್ಬಿಅರಬ್ ಮೂಲದವರು.ತಂದೆಅಬ್ದುಲ್‌ರಹಮಾನ್‌ಖಾನ್, ಆಫ್ಘ್‌ನ್‌ಯೋಧ. ಆಚಂಗಿ ನಾರಾಯಣಶಾಸ್ತ್ರಿ ಇವರ ಗುರುಗಳು.ಕನ್ನಡಮತ್ತುಸಂಸ್ಕೃತಅಧ್ಯಯನಮಾಡಿದರು.ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಏಳು ಸಲ ಜೈಲುವಾಸ ಅನುಭವಿಸಿದರು.ಸ್ವಾತಂತ್ರ್ಯಾನಂತರಕರ್ನಾಟಕಏಕೀಕರಣ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸಕಂಡರು.ಗಾಂಧೀಜಿ ವಿಶ್ರಾಂತಿಗೆಂದು ನಂದಿಬೆಟ್ಟಕ್ಕೆ ಬಂದಾಗಅವರನ್ನು ಭೇಟಿಯಾಗಿದ್ದರು. ಹಿಂದು ಮುಸ್ಲಿಂ ಏಕತೆಗೆ ಪೂರಕವಾಗುವ ಕಥೆಗಳನ್ನು ರಚಿಸಿದರು.ಬಲಿದಾನಿ ಹುಸೇನ್ ಎಂಬ ಚಾರಿತ್ರಿಕಕಾದಂಬರಿಯರಚನೆಕಾರರೂ ಹೌದು. ಮಾತೃಶಾಪ ಪೌರಾಣಿಕಕಾದಂಬರಿ. ನಿರ್ದೋಷಿ, ಶ್ರೀ ಕೃಷ್ಣ್ಣಲೀಲೆ, ಹುಮಾಯುನ್, ಅಂಬರನಾಥ, ಮಹಾಪ್ರಭುಮಾಗಡಿಕೆಂಪೇಗೌಡಐತಿಹಾಸಿಕಹಾಗೂ ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ. ಧಾರವಾಡದ ಲೋಕಮಿತ್ರ, ಉಡುಪಿಯಅಂತರಂಗ ಪತ್ರಿಕೆಗಳ ಸಂಪಾದಕರಾಗಿದ್ದರು.ರಾಯಲ್‌ಇಂಡಿಯನ್ ನೇವಿಯಲ್ಲಿ ನೌಕರಿ ಮಾಡಿದ್ದರು. ಬಹಳ ಶ್ರಮವಹಿಸಿ ಅಜ್ಞಾತ ಕವಿಗಳ ನೂರಾರುಜಾನಪದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದರು.ಸರ್ಕಾರಇವರನ್ನುಕರ್ನಾಟಕಜಾನಪದಅಕಾಡೆಮಿಅಧ್ಯಕ್ಷರಾಗಿ ನೇಮಿಸಿತು.ಆ ಸಮಯದಲ್ಲಿಕಾಲ್ನಡಿಗೆಯಲ್ಲಿಯೇ ಹಳ್ಳಿಹಳ್ಳಿ ತಿರುಗಿ ನೂರಾರುಜಾನಪದ ಗೀತೆಗಳನ್ನು ಸಂಗ್ರಹಿಸಿದರು. ಸುಮಾರು ೮ ಸಾವಿರ ಕಿ.ಮೀ. ದೂರ ಸುತ್ತಿಜಾನಪದ ಪ್ರದರ್ಶನ ಕಲೆಗಳ ಕುರಿತು ೨೪೦ ಗಂಟೆಗಳ ಅವಧಿಯ ವಿಡಿಯೋಚಿತ್ರೀಕರಣ ಮಾಡಿದರು.

ಕರೀಂಖಾನ್‌ಅವರನ್ನುಪ್ರಸಾದ್‌ಮೂವೀಸ್‌ನಆರ್. ನಾಯ್ಡು ಮದರಾಸಿಗೆ ಬರಮಾಡಿಕೊಂಡರು. ೧೦ ವರ್ಷಗಳ ಕಾಲಹಲವಾರು ಚಿತ್ರಗಳಿಗೆಕಥೆ, ಸಂಭಾಣೆ, ಹಾಡುಗಳನ್ನುಬರೆದರು.ಶಿವಲಿಂಗ ಸಾಕ್ಷಿ, ಸ್ವರ್ಣಗೌರಿ, ಜೀವನತರಂಗ, ಬೇವುಬೆಲ್ಲ, ಚಂದ್ರಕುಮಾರ, ದೇವಮಾನವ, ದೊಂಬರಕೃಷ್ಣರಾಜೇಶ್ವರಿ, ಪತಿತಪಾವನಿ, ಸೂಪರ್‌ನೋವ ೪೪೫ ಮುಂತಾದಹದಿನೈದು ಚಿತ್ರಗಳಿಗೆಇವರುಸಾಹಿತ್ಯನೀಡಿದ್ದಾರೆ.ರಂಭಾಪುರಿ, ಕೂಡ್ಲಿ, ಶೃಂಗೇರಿ, ಉಡುಪಿ, ಧರ್ಮಸ್ಥಳ, ಆದಮಾರುಸ್ವಾಮಿಗಳನ್ನುಕುರಿತಂತೆಸ್ವಾಗತ ಗೀತೆಗಳನ್ನು ರಚಿಸಿದ್ದಾರೆ.ಚಲನಚಿತ್ರಗಳಿಗಾಗಿ ನಟವರಗಂಗಾಧರಉಮಾಶಂಕರ, ನುಡಿಮನ ಶಿವಗುಣ ಸಂಕೀರ್ತನ, ಬಾರೇ ನೀ ಚೆಲುವೆ ಮುಂತಾದ ಮಧುರ ಗೀತೆಗಳನ್ನು ರಚಿಸಿದರು.

ಕರೀಂಖಾನ್‌ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ೧೯೮೯ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯಗೌರವಡಾಕ್ಟರೇಟ್ ನೀಡಿ ಗೌರವಿಸಿತು.೨೦೦೪ರಲ್ಲಿ ಕರ್ನಾಟಕರಾಜ್ಯ ಸರ್ಕಾರರಾಜ್ಯೋತ್ಸವ ಪ್ರಶಸ್ತಿ ನೀಡಿತು.೧೯೯೭ರಲ್ಲಿ ನಾಡೋಜ, ೧೯೯೫ರಲ್ಲಿ ಜಾನಪದಶ್ರೀ, ಜೀಶಂಪ ಪ್ರಶಸ್ತಿ, ೨೦೦೦ರಲ್ಲಿ ಚಿ.ಉದಯಶಂಕರ್‌ಚಿತ್ರ ಸಾಹಿತ್ಯ ಪ್ರಶಸ್ತಿ, ೧೯೮೯ರಲ್ಲಿ ಜಾನಪದಅಕಾಡೆಮಿಗೌರವ, ಹಂಸರತ್ನ, ಜಾನಪದಜಂಗಮ ಹಾಗೂ ಚಲನಚಿತ್ರರಂಗದಜೀವಮಾನದ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.ಡಾ. ಕರೀಂಖಾನರಗೌರವಾರ್ಥವಾಗಿ ಬೆಂಗಳೂರಿನ ಇಂದಿರಾನಗರ ೧೦೦ ಅಡಿ ರಸ್ತೆಗೆಅವರ ಹೆಸರಿಇರಿಸಲಾಗಿದೆ.ಸ್ವಾತಂತ್ರ್ಯಯೋಧರ ಪಿಂಚಣಿಯನ್ನೂ ತಿರಸ್ಕರಿಸಿ ಸ್ವಾಭಿಮಾನ ಮೆರೆದಿದ್ದರು.ಎಸ್.ಕೆ.ಕರೀಂಖಾನ್‌ಅವರುಜುಲೈ ೨೯, ೨೦೦೬ರಂದು ತಮ್ಮ ೯೮ನೆಯ ವಯಸ್ಸಿನಲ್ಲಿ ಬೆಂಗಳೂರಿನ ಭಗವಾನ್ ಮಹಾವೀರ್‌ಜೈನ್‌ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

 

Girl in a jacket
error: Content is protected !!