ಬೆಡ್ ಬ್ಲಾಕಿಂಗ್; ವಾರ್‌ ರೂಮ್‌ ಇಬ್ಬರು ನೌಕರರ ಬಂಧನ

Share

ಬೆಂಗಳೂರು,ಮೇ27: ಬೆಡ್ ಬ್ಲಾಕಿಂಗ್ ಮಾಡಿಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ವಾರ್‌ ರೂಮ್ ನ ಇಬ್ಬರು ನೌಕರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆರೊನಾ ಸೋಂಕಿತರ ಹೆಸರಲ್ಲಿ ಬೆಡ್ ಬ್ಲಾಕ್ ಮಾಡಿ ಇತರರಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದರು ಈ ಆರೋಪದಡಿ ವಾರ್‌ ರೂಮ್ ನೌಕರ ವರುಣ್ ಹಾಗೂ ಆತನ ಸ್ನೇಹಿತ ಯಶವಂತ ನನ್ನು ಬಂಧಿಸಲಾಗಿದೆ.

ಗುಣಮುಖವಾಗುತ್ತಿದ್ದ ಹಾಗೂ ಮೃತರಾಗುತ್ತಿದ್ದ ಕೊರೊನಾ ಸೋಂಕಿತರ ಹಾಸಿಗೆಗಳ ಬಗ್ಗೆ ವರುಣ್ ಮಾಹಿತಿ ಪಡೆಯುತ್ತಿದ್ದ. ಜೊತೆಗೆ, ಹಾಸಿಗೆ ಬೇಕೆಂದು ಹೇಳಿ ವಾರ್ ರೂಮ್‌ಗೆ ಕರೆ ಮಾಡುತ್ತಿದ್ದ ಸೋಂಕಿತರ ಮಾಹಿತಿಯನ್ನೂ ದಾಖಲಿಸಿಕೊಳ್ಳುತ್ತಿದ್ದ

ಅದೇ ಮಾಹಿತಿಯನ್ನು ವರುಣ್, ಯಶವಂತ್‌ಗೆ ನೀಡುತ್ತಿದ್ದ. ಬಳಿಕ, ರೋಗಿಗಳನ್ನು ಸಂಪರ್ಕಿಸುತ್ತಿದ್ದ ಯಶವಂತ, ವಾರ್ ರೂಮ್‌ನಿಂದ ನಿಮಗೆ ಹಾಸಿಗೆ ಸಿಗಲು ಹೆಚ್ಚಿನ ಸಮಯವಾಗುತ್ತದೆ. ಹಣ ಕೊಟ್ಟರೆ ಬೇಗನೆ ಹಾಸಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳುತ್ತಿದ್ದ.

ಜೀವ ಉಳಿದರೆ ಸಾಕು ಎಂಬ ಪರಿಸ್ಥಿತಿಯಲ್ಲಿದ್ದ ಸೋಂಕಿತರು ಹಾಗೂ ಅವರ ಸಂಬಂಧಿಕರು, ಆರೋಪಿ ಕೇಳಿದಷ್ಟು ಹಣವನ್ನು ಬ್ಯಾಂಕ್‌ ಖಾತೆಗೆ ಹಾಕುತ್ತಿದ್ದರು. ಹಣ ಬಂದ ನಂತರ ಆರೋಪಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಸಿಗೆ ಕೊಡಿಸುತ್ತಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

Girl in a jacket
error: Content is protected !!