ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಪಡೆದು ಹೋಗಿದ್ದ ೧೧ ಖೈದಿಗಳು ನಾಪತ್ತೆ?

Share

ಬೆಂಗಳೂರು, ಜು,18: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಗಾಗ ಪೆರೋಲ್ ಮೇಲೆ ಹೊರಗೆ ಹೋದವರು ಪರಾರಿಯಾಗುವುದು ಇದ್ದೆ ಇರುತ್ತದೆ.
ಈಗ ಮತ್ತೆ ೧೧ ಮಂದಿ ಖೈದಿಗಳು ಪೆರೋಲ್ ಮೇಲೆ ಹೋದವರು ನಾಪತ್ತೆಯಾಗಿದ್ದಾರೆ.ಇದು ಪೊಲೀಸರಿಗೆ ತಲೆನೋವಾಗಿ ಪರಿಷಮಿಸಿದೆ.
ಸಜಾ ಬಂಧಿಗಳಿಗೆ ವರ್ಷಕ್ಕೆ ಮೂರು ತಿಂಗಳು ಪೆರೋಲ್ ಪೆರೋಲ್ ಮೇಲೆ ರಜೆಗೆ ಹೋಗಲು ಅವಕಾಶವಿದೆ . ವರ್ಷಕ್ಕೆ 90 ದಿನಗಳು ಹೊರಗೆ ಇರಬಹುದು ಒಂದೇ ಬಾರಿ ಮೂರು ತಿಂಗಳು ಸಿಗದಿದ್ದರೂ ಹಂತ ಹಂತವಾಗಿ ಪೆರೋಲ್ ರಜೆ ಪಡೆಯಬಹುದು. ಹೀಗಾಗಿ ಕಾರಗೃಹ ಅಧಿಕಾರಿಗಳು ಅನೇಕ ಕೈದಿಗಳಿಗೆ ಪೆರೋಲ್ ಮೇಲೆ ಹೊರಗೆ ಹೋಗಲು ಅವಕಾಶ ನೀಡಿದ್ದರು. ಆದರೆ ಈ ಪೈಕಿ ಜೀವಾವಧಿ ಶಿಕ್ಷೆ ,ಕಾರಗೃಹ ಶಿಕ್ಷೆಗೊಳಪಟ್ಟಿರುವ 11 ಜನ ಸಜಾಬಂಧಿಗಳು ಪರಾರಿಯಾಗಿದ್ದಾರೆ.
ಪೆರೋಲ್ಗೆ ಹೋದರವ ಬಗ್ಗೆ ಕಾರಾಗೃಹ ಇಲಾಖೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಖೈದಿಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಲಾಗುತ್ತದೆ. ಪೆರೋಲ್ ಮೇಲೆ ರಜೆಗೆ ಹೋದರೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಹಿ ಮಾಡಬೇಕು.ಈ ಮೂಲಕ ತಮ್ಮ ಇರುವಿಕೆಯನ್ನ ತೋರಿಸಿಕೊಳ್ಳ ಬೇಕು.
ಆದರೆ ಸದ್ಯ ಎಸ್ಕೇಪ್ ಆದ 11 ಜನರ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲ ಎನ್ನುವುದು ಕಾರಗೃಹ ಇಲಾಖೆಗೆ ತಲೆನೋವಾಗಿದೆ.
ಇನ್ನು ಪೆರೋಲ್ಗೆ ಹೋಗಿ ಬಾರದ ಖಯದಿಗಳ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದೆ. ಎಫ್‌ಐಆರ್ ದಾಖಲಾಗಿ ಸಿಕ್ಕಿಬಿದ್ದರೆ ಉಳಿದ ಸೌಲಭ್ಯಗಳು ಅಲಭ್ಯವಾಗುತ್ತದೆ.

Girl in a jacket
error: Content is protected !!