ನಕ್ಸಲೇಟ್ ಕೋಟೆ ಹೊಂಡ ರವಿ ಶರಣಾಗತಿ
by-ಕೆಂಧೂಳಿ
ಬೆಂಗಳೂರು,ಫೆ,011-ಕೊನೆಗೂ ಭೂಗತ ನಕ್ಸಲ್ ಕೋಟೆ ಹೊಂಡ ರವಿ ಪೊಲೀಸರಿಗೆ ಶರಣಾಗಿದ್ದಾನೆ.
ಚಿಕ್ಕಮಗಳೂರು ಸಮೀಪ ನೆಮ್ಮೂರು ಪಾರೆಸ್ಟ್ ಐಬಿಯಲ್ಲಿ ಶರಣಾಗಿದ್ದಾನೆ ಎಂದಿರುವ ಪೊಲೀರು ಶರಣಾಗಿರುವ ರವಿಯನ್ನು ಚಿಕ್ಕಮಗಳೂರಿಗೆ ಕರೆತಂದುಎಸ್ ಪಿ ಮುಂದೆ ನಾಳೆ ಮಧ್ಯಾಹ್ನ 12 ಗಂಟೆಗೆ ಶರಣಾಗತಿ ಪ್ರಕ್ರಿಯೆ ಮಾಡುವುದಾಗಿ ತಿಳಿಸಿದ್ದಾರೆ.
ಕಳೆದ ತಿಂಗಳು ಆರು ಮಂದಿ ನಕ್ಸಲೀಯರು ಶರಣಾಗಿದ್ದರು ,ಆದರೆ ರವೀ ನಾಪತ್ತೆಯಾಗಿದ್ದರು,ಕೊನೆಘಳಿಗೆಯಲ್ಲಿ ಶರಣಾಗತಿ ತಂಡದಿಂದ ನಾಪತ್ತೆಯಾಗಿದ್ದರು.ಅಂದಿನಿಂದ ಪೊಲೀಸರು ಈತನ ಪತ್ತೆಗಾಗಿ ಶೋಧಿಸುತ್ತಿದ್ದರು,ನಿನ್ನೆ ರವೀ ಪೊಲೀಸರಗೆ ಶರಣಾಗಿದ್ದಾನೆ.
ಈ ಮೂಲಕ ರಾಜ್ಯದಲ್ಲಿ ನಕ್ಸಲ್ ಮುಕ್ತ ರಾಜ್ಯ ಎನ್ನಲಾಗುತ್ತಿದೆ,ನಕ್ಸಲ್ ಚಟುವಟಿಕೆಗಳಲ್ಲಿದ್ದ ಎಲ್ಲರೂ ಈಗ ಶರಣಾಗುವ ಮೂಲಕ ಸರ್ಕಾರಕ್ಕೆ ನಿರಾಳವಾದಂತಾಗಿದೆ.
ಪೊಲೀಸ್ ಅಧಿಕಾರಿ ಅಲೋಕ್ ಮೋಹನ್, ಅವರ ನೇತೃತ್ವದಲ್ಲಿ; ರಾಜ್ಯ ಗುಪ್ತಚರ ಇಲಾಖೆ, ಕರ್ನಾಟಕ ರಾಜ್ಯವು ಸಂಪೂರ್ಣವಾಗಿ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಖಚಿತಪಡಿಸಿದೆ.
ಕರ್ನಾಟಕವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಅವಿರತ ಶ್ರಮಿಸಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕಘೋಷಿಸಿದ್ದಾರೆ.