ಬೆಂಗಳೂರು,ಸೆ,02: ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಸಾರ್ಜನಿಕರಿಗೆ ವಂಚಿಸುತ್ತಿದ್ದ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ನಿಪುಣ್(30) ಬಂಧಿತ ಆರೋಪಿಯಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ. ಕೇರಳದ ತ್ರಿಸೂರ್ ಜಿಲ್ಲೆಯವನಾದ ನಿಪುಣ್, ಕೇರಳದ ವಿದ್ಯಾರ್ಥಿಗಳನ್ನು ಯಾಮಾರಿಸಲು ಮುಂದಾಗಿದ್ದ.
ಹುಳಿಮಾವು ಬಳಿಯ ನ್ಯಾನಪ್ಪನಹಳ್ಳಿಯ ಆವನಿ ಶ್ರಂಗೇರಿನಗರದ ಮನೆಯಲ್ಲಿ ಈ ನಕಲಿ ಪಾಸ್ ಪೋರ್ಟ್ ದಂದೆ ನಡೆಸುತ್ತಿದ್ದ. ಕೇರಳ ಮೂಲದ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದ ಕೋವಿಡ್ ನೆಗೆಟಿವ್ ವರದಿಗಳನ್ನ ಹಣಕ್ಕಾಗಿ ತಯಾರಿಸಿ ಕೊಡುವುದರ ಜೊತೆಗೆ ಮುಖ್ಯವಾಗಿ ವಿದೇಶಗಳಿಗೆ ಎಡತಾಕುವ ವಿದ್ಯಾರ್ಥಿಗಳಿಂದ ಲಕ್ಷ-ಲಕ್ಷ ಹಣ ಪಡೆದು ನಕಲಿ ಪಾಸ್ ಪೋರ್ಟ್ ಸೃಷ್ಟಿಸಿಕೊಟ್ಟು ಯಾಮಾರಿಸುತ್ತಿದ್ದ ಈತನ ಬಳಿ
ಕೇರಳದ ಬಡ ವಿದ್ಯಾರ್ಥಿಗಳು ಮನೆಯಲ್ಲಿದ್ದ ಚಿನ್ನವನ್ನೂ ಮಾರಿ ನಕಲಿ ಪಾಸ್ ಪೋರ್ಟ್ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಬೆಂಗಳೂರಿನ ಹುಳಿಮಾವು ಪೊಲೀಸರು ಆರೋಪಿ ನಿಪುಣ್ ನನ್ನು ಬಂಧಿಸುವವರೆಗೂ ತಾವು ಪಡೆದಿರುವುದು ನಕಲಿ ಪಾಸ್ ಪೋರ್ಟ್ ಎಂದು ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ! ಅದಲ್ಲದೆ ಈತ
ಪ್ರತಿಷ್ಟಿತ ಕಾಲೇಜುಗಳಿಗೆ ದಾಖಲಾತಿ ಮಾಡಿಸುವ ದಲ್ಲಾಳಿಯಾಯೂ ಕುಖ್ಯಾತಿ ಪಡೆದಿದ್ದನೆನ್ನಲಾಗಿದೆ!
ಕೇವಲ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿರುವ ನಕಲಿ ದಾಖಲಾತಿ ದಂಧೆ ಕೋರ ನಿಪುಣ್ ಸಂಪಾದನೆಗೆ ಅಡ್ಡದಾರಿ ಹಿಡಿದಿದ್ದಾನೆ.
ಕೋವಿಡ್ ಲಾಕ್ಡೌನ್ ನಲ್ಲಿ ಹಣ ಸಂಪಾದನೆಯಿಲ್ಲದೆ ಅಲೆಯುತ್ತಿದ್ದಾಗ. ಈತ ಈ ನಕಲಿ ವರದಿ ಸೃಷ್ಟಿಸಿ ಮಾರಾಟ ಮಾಡಿ ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ.
ಫೇಸ್ಬುಕ್-ವಾಟ್ಸಪ್ ಮೂಲಕವೇ ಗ್ರಾಹಕರ, ವಿದ್ಯಾರ್ಥಿಗಳ ವಿವರ ಪಡೆದು ಆನ್ಲೈನ್ ಮೂಲಕವೇ ಹಣ ಪಡೆಯುತ್ತಿದ್ದನಂತೆ ಭೂಪ.
ಈತ ಕೋವಿಡ್ ನಕಲಿ ವರದಿಗೆ 2000-5000 ರೂ ನಿಗದಿಮಾಡಿದ್ದನಂತೆ. ಹಾಗೆಯೇ
ನಕಲಿ ಪಾಸ್ಪೋರ್ಟ್ ಗೆ 5000-ಲಕ್ಷದವರೆಗೆ ಆರೋಪಿ ನಿಪುಣ್ ಬೇಡಿಕೆಯಿಟ್ಟು ಹಣ ಪಡೆದಿರುವುದು ಸಾಬೀತಾಗಿದೆ!
ಆರೋಪಿಯಿಂದ ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ನಿಪುಣ್ನನ್ನು ಬಂಧಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಲ್ಲಿ ಹುಳಿಮಾವು ಪೊಲೀಸರು ಯಶಸ್ವಿಯಾಗಿದ್ದಾರೆ.