ಕಿಚ್ಚಾ ಸುದೀಪ್ ಉಪೇಂದ್ರ ಜೋಡಿಯ ‘ಕಬ್ಜಾ’ ಪೋಸ್ಟರ್ ಬಿಡುಗಡೆ

Share

ಸುದೀಪ್ ಮತ್ತು ಉಪೇಂದ್ರ ಅವರು ಕಾತುರದಿಂದ ಕಾಯುತ್ತಿದ್ದ ಇಬ್ಬರು ನಾಯಕರ ಜೋಡಿಯ ‘ಕಬ್ಜಾ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಲಾಗಿದೆ.
ಇಂದು(ಜೂನ್೨೭) ಬಿಡುಗಡೆಗೊಳಿಸಿದ್ದು ಈ ಚಿತ್ರ ಪ್ರಮುಖವಾಗಿ ಭೂಗತ ಲೋಕದ ಕರಾಳ ಕತೆಯನ್ನು ಪ್ರತಿಬಿಂಬಿಸುತ್ತದೆ .ಹಾಗಾಗಿ ಈ ಇಬ್ಬರು ನಾಯಕರ ಅಭಿಮಾನಿಗಳಿಗೆ ಒಂದು ರೀತಿಯ ಕುತೂಹಲಕ್ಕೆ ಈ ಪೋಸ್ಟ್ ಹಲವು ಕತೆಯನ್ನು ಹೇಳುತ್ತಿದೆ.


’ಐ ಲವ್ ಯು’ ಬಳಿಕ ಉಪೇಂದ್ರ ಮತ್ತು ನಿರ್ದೇಶಕ ಆರ್ ಚಂದ್ರು ಅವರ ಸಹಯೋಗದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ೧೯೪೦ ಮತ್ತು ೧೯೮೦ರ ನಡುವಿನ ಪಾತಕಲೋಕದ ಕಥೆಹಂದರವು ಚಿತ್ರದಲ್ಲಿದೆ. ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ. ಅನೂಪ್ ರೇವಣ್ಣ. ಕಾಮರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Girl in a jacket
error: Content is protected !!