ಲಂಡನ್‌ನಲ್ಲಿ ಪ್ರದರ್ಶನಗೊಂಡ ನಾಂದಿ

Share


ಲಂಡನ್‌ನಲ್ಲಿ ಪ್ರದರ್ಶನಗೊಂಡ ನಾಂದಿ

ಶ್ರೀ ಭಾರತಿಚಿತ್ರ ಲಾಂಛನದಲ್ಲಿ ವಾದಿರಾಜ್ ಹಾಗೂ ಜವಹರ್ ಸೋದದರು ನಿರ್ಮಾಣ ಮಾಡಿದ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರನಾಂದಿ ೧೯೬೪ರಲ್ಲಿ ಬಿಡುಗಡೆಗೊಂಡಿತು.ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕಎನ್.ಲಕ್ಷ್ಮಿನಾರಾಯಣ್ ಮೊದಲ ಚಿತ್ರಇದಾಗಿತ್ತು. ಆರ್.ನಾಗೇಂದ್ರರಾವ್ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾರಾಯಣ್ ‘ನಾಂದಿಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು.

ರಾಜಕುಮಾರ್, ಹರಿಣಿ, ಕಲ್ಪನಾ, ಬಾಲಕೃಷ್ಣ, ವಾದಿರಾಜ್, ದಿನೇಶ್, ಗಣಪತಿಭಟ್, ಶೈಲಶ್ರೀ, ಉದಯಕುಮಾರ್, ಸೋರಟ್‌ಅಶ್ವತ್ಥ್, ಹನುಮಂತಾಚಾರ್, ಜಯಶ್ರೀ ಮುಂತಾದವರು ಅಭಿನಯಿಸಿರುವ ಈ ಚಿತ್ರಕ್ಕೆಎನ್.ಲಕ್ಷ್ಮಿನಾರಾಯಣ್‌ಅವರೇಕಥೆ, ಹಾಗೂ ಚಿತ್ರಕಥೆ ರಚಿಸಿದರು. ಕೆ.ಎನ್.ನಾಗಭೂಷಣಚಿತ್ರದ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು. ಆರ್.ಎನ್.ಜಯಗೋಪಾಲ್ ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದ್ದಾರೆ.

ವಿಜಯಭಾಸ್ಕರ್ ಸಂಗೀತ ನೀಡಿರುವಚಿತ್ರದಲ್ಲಿ ನಿರ್ದೇಶನದಷ್ಟೇಜಾಣ್ಮೆ ಸಂಗೀತದಲ್ಲಿಇರುವುದೊಂದು ವೈಶಿಷ್ಟ್ಯ. ‘ಉಡುಗೊರೆಯೊಂದಾತಂದಾ, ಎನ್ನಯ ಮನಕಾನಂದಾ, ಕೈ ಹಿಡಿದಾ, ಬರಸೆಳೆದಾ…; ಚಂದ್ರಮುಖೀ, ಪ್ರಾಣಸಖೀ, ಚತುರೆಯೇ ನೀಕೇಳೇ…; ನಮ್ಮತಾಯಿ ಭಾರತಿ, ನಮ್ಮ ನಾಡು ಭಾರತ…; ನಮ್ಮ ಪಾಪಾ, ನಮ್ಮ ಪಾಪ…; ಹಾಡೊಂದ ಹಾಡುವ ನೀಕೇಳು ಮಗುವೆ, ಬರಿದಾದ ಮನೆ ಬೆಳಗೆ ನೀ ಎಂದೂ ಬರುವೇ… ಈ ಚಿತ್ರದಲ್ಲಿ ಅಳವಡಿಸಲಾಗಿರುವ ಜನಪ್ರಿಯ ಗೀತೆಗಳು.ಗೋವಿನ ಹಾಡನ್ನು ಆಧರಿಸಿ ರಚಿಸಲಾಗಿರುವಗೀತೆಗೆ ಮಕ್ಕಳು ಪ್ರಾಣಿ-ಪಕ್ಷಿಗಳ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ.ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಲತಾ, ಜಯದೇವ್ ಹಾಗೂ ಎಲ್.ಆರ್.ಈಶ್ವರಿ ಗೀತೆಗಳನ್ನು ಹಾಡಿದ್ದಾರೆ.ಶಾಲಾ ಮಕ್ಕಳನ್ನು ನಂದಿ ಬೆಟ್ಟಕ್ಕೆ ಪ್ರವಾಸಕರೆದೊಯ್ದಾಗ ನಂದಿ ಬೆಟ್ಟದ ಬಗ್ಗೆ ಸಮಗ್ರವಾಗಿ ಪರಿಚಯ ಮಾಡಿಕೊಡಲಾಗುತ್ತದೆ.ಉದಯಕುಮಾರ್‌ಗೆಒಂದೆರಡುಕ್ಷಣ ಬಂದು ಹೋಗುವ ಅತಿಥಿ ಪಾತ್ರವಿದೆ.ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಕಾಣಿಸಿಕೊಂಡಿದ್ದಾರೆ.

ಮಾತೇಇಲ್ಲದ ‘ಬ್ಲಿಸ್ ಎಂಬ ಕಿರುಚಿತ್ರವನ್ನು ಮೊದಲು ತಯಾರಿಸಿದ್ದ ಲಕ್ಷ್ಮಿನಾರಾಯಣ್‌ಅವರಿಗೆಕಿವುಡು-ಮೂಗರ ಬಗ್ಗೆ ಬೆಳಕು ಚೆಲ್ಲುವಕಥೆಯೊಂದನ್ನುರಚಿಸುವಯೋಚನೆ ಬಂದಿತು.ಹೀಗೆ ಬರೆದಕಥೆಯೇ ‘ನಾಂದಿಚಿತ್ರವಾಯಿತು.ರಾಜಕುಮಾರ್‌ಈ ಚಿತ್ರದಲ್ಲಿ ಮೈಸೂರು ಪೇಟಾ, ಕಚ್ಚೆಪಂಚೆ ಧರಿಸಿ ಶಾಲಾ ಉಪಾಧ್ಯಾಯರಾಗಿ ನೀಡಿದಅಭಿನಯ ಸ್ಮರಣೀಯವಾಯಿತು. ಮೂಕಿ ಪಾತ್ರದಲ್ಲಿ ಹರಿಣಿ ಸಹಜಅಭಿನಯ ನೀಡಿರುವುದೊಂದು ವಿಶೇಷ.ಈ ಚಿತ್ರತಯಾರಿಸುವಾಗ ಪಾತ್ರಧಾರಿಗಳು ಹಾಗೂ ತಂತ್ರಜ್ಞರು ಮೂಕ-ಕಿವುಡರ ಶೈಕ್ಷಣಿಕತಜ್ಞೆ ಬೆಲ್ಜಿಯಂನ ಮೇರಿ ಬಾಪುರವರ ಸಲಹೆಯನ್ನು ಪಡೆದುಕೊಂಡರು.

ಮೂಕ ಪತ್ನಿಯಜೊತೆಅಭಿನಯಿಸಬೇಕಾಗಿದ್ದರಾಜಕುಮಾರ್‌ಕಿವುಡ-ಮೂಕರ ಶಾಲೆಗೆ ಹಲವಾರು ಬಾರಿ ಹಾಜರಾಗಿ, ಅವರ ನಡುವೆ ಕುಳಿತು ಅಭ್ಯಾಸ ಮಾಡಿದ ನಂತರವೇ ಅಭಿನಯಿಸಿದರು. ಹಾಡುಗಳನ್ನು ಹೊರಾಂಗಣದಲ್ಲಿ ಉಳಿದ ಎಲ್ಲಾಕಥಾ ಭಾಗವನ್ನು ಸ್ಟುಡಿಯೋ ಒಳಗೂ ಚಿತ್ರೀಕರಿಸುತ್ತಿದ್ದ ಆ ಕಾಲದಲ್ಲಿಅರ್ಧಕ್ಕೂ ಹೆಚ್ಚು ಭಾಗವನ್ನು ಹೊರಾಂಗಣದಲ್ಲಿಯೇಚಿತ್ರೀಕರಿಸಲಾಯಿತು. ಕಿವುಡು-ಮೂಗರ ಶಾಲೆ, ಸಂಭಾಂಗಣ, ಆಸ್ಪತ್ರೆ ಮುಂತಾದವುಗಳನ್ನು ಸಹಜವಾಗಿ ಚಿತ್ರೀಕರಿಸಿಕೊಳ್ಳಲಾಗಿದೆ.‘ನಾಂದಿ ಲಂಡನ್‌ನಲ್ಲಿ ನಡೆದಕಾಮನ್‌ವೆಲ್ತ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿತು.ವಿದೇಶದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡಚಿತ್ರಇದಾಯಿತು.ಕಿವುಡ-ಮೂಕರಿಗೆ ಪುನರ್ವಸತಿ ನೀಡುವ ಮೊದಲ ಭಾರತೀಯಚಿತ್ರವೂಇದಾಗಿತ್ತು.ಪಿ.ಎನ್.ಮೂರ್ತಿಚಿತ್ರಕ್ಕೆ ಸಂಕಲನ ಕೆಲಸ ಮಾಡಿದ್ದಾರೆ.ಚಿತ್ರ. ಎಲ್ಲಅರ್ಹತೆಯಿದ್ದೂರಾ?ಪ್ರಶಸ್ತಿಯಿಂದವಂಚಿತವಾದುದಕ್ಕೆಜನತೆಯೇ ಪ್ರತಿಭಟಿಸಿತ್ತು.

ಮೂರ್ತಿ ಶಾಲಾ ಉಪಾಧ್ಯಾಯ, ಉತ್ತಮ ನಡವಳಿಕೆ, ಸಜ್ಜನಿಕೆಯ ವ್ಯಕ್ತಿ, ನಿರ್ಮಲ ಮೆಚ್ಚಿನ ಮಡದಿ, ನಿರ್ಮಲ ಗಂಡು ಮಗುವಿಗೆ ತಾಯಿಯಾಗಿ ಹೆರಿಗೆ ಸಮಯದಲ್ಲಿ ಸಾಯುತ್ತಾಳೆ.ಮಗು ಒಮ್ಮೆಜ್ವರಕ್ಕೆತುತ್ತಾದಾಗಕಿವುಡಾಗುತ್ತದೆ.ಮಾತಿನ ಶಕ್ತಿ ಕಳೆದುಕೊಳ್ಳುತ್ತದೆ.ಮೂರ್ತಿ ಕೊನೆಗೆ ಆ ಮಗುವಿಗೆ ತಾಯಾಗಲು ಮರು ವಿವಾಹ ಮಾಡಿಕೊಳ್ಳಲು ನಿರ್ಧರಿಸುತ್ತಾನೆ.ಕಿವುಡ ಮಗುವಿನ ತಂದೆಯನ್ನು ವಿವಾಹವಾಗಲು ಯಾರೂಒಪ್ಪದಿದ್ದಾಗಒಮ್ಮೆ ನಂದಿ ಬೆಟ್ಟದಲ್ಲಿಕಂಡಿದ್ದ ಮೂಕಿ ಗಂಗಾಳನ್ನೇ ಮೂರ್ತಿ ವಿವಾಹವಾಗುತ್ತಾನೆ.ಕಿವುಡು-ಮೂಗರ ಶಾಲೆಗೆ ಹೋಗಿ ಅಲ್ಲಿನ ಶಿಕ್ಷಣ ವೈಖರಿಕಲಿತು ಬಂದುತನ್ನ ಪತ್ನಿ ಹಾಗೂ ಮಗುವಿಗೆ ಮೂರ್ತಿ ಮಾತು-ಪಾಠ ಕಲಿಸುತ್ತಾನೆ.ಮಗು ಒಮ್ಮೆ ಬೆಂಕಿ ಆಘಾತಕ್ಕೆತುತ್ತಾಗಿಅತ್ತರೂ ಕೇಳಿಸದೇ ಹೋದ್ದರಿಂದ ಮಗು ಸಾಯುತ್ತದೆ.ಮೂರ್ತಿ ಹಾಗೂ ಗೋಪಾಲರಾಯ ಸೇರಿಕಿವುಡ-ಮೂಕರ ಶಾಲೆಯನ್ನೇಆರಂಭಿಸುತ್ತಾರೆ.ಗಂಗಾ ಗರ್ಭಿಣಿಯಾಗಿ ಹೆಣ್ಣು ಮಗುವಿನ ತಾಯಿಯಾಗುತ್ತಾಳೆ. ಆ ಮಗುವಿಗೆ ಮಾತು ಬರುವ ಮೂಲಕ ಚಿತ್ರ ಮುಗಿಯುತ್ತದೆ

Girl in a jacket
error: Content is protected !!