ಕನ್ನಡದ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರಗಳ ಮೂಲಕ ಚಿತ್ರರಂಗ ಪ್ರವೇಪ್ರವೇಶಿಸಿ ಬಹುಭಾಷಾ ಚಿತ್ರಗಳಲ್ಲಿ ನಟಿಸುವ ಮೂಲಕ ಈಗ ದೇಶಾದ್ಯಂತ ಜನಪ್ರಿಯತೆ ಹೊಂದಿರುವ ಅವರು ಈಗ ತಮಿಳು ಚಿತ್ರದ ನಟನೊಬ್ಬನನ್ನು ವಿವಾಹವಾಗುವ ಕುರಿತ ಗಾಸಿಪ್ಗಳು ಹರಿದಾಡುತ್ತಿವೆ.
ಕನ್ನಡದ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ನಂತರ ಇತರೆ ಭಾಷೆಗಳ ಚಿತ್ರಗಳಲ್ಲೂ ಬ್ಯೂಜಿಯಾಗಿದ್ದು ಈಗ ಬಾಲಿವುಡ್ ಚಿತ್ರದಲ್ಲೂ ಬ್ಯೂಜಿಯಾಗಿದ್ದಾರೆ ಆದರೆ ಈ ಹೊತ್ತಿನಲ್ಲಿ ಅವರು ತಮಿಳು ಯುವಕನ ಜೊತೆಯಲ್ಲಿ ವಿಹಾವಾಗುವ ಕುರಿತು ಸುದ್ದಿಗಳು ಹರಿದಾಡುತ್ತಿವೆ. ಸ್ವತಃ ರಶ್ಮಿಕಾನೆ ನಾನು ತಮಿಳು ರಾಜ್ಯದ ಸೊಸೆಯಾಗಲು ಭಯಸುತ್ತೇನೆ ಎಂದು ಹೇಳಿದ್ದಾರೆ ಎನ್ನುವ ಸುದ್ದಿಗಳು ಈಗ ಎಲ್ಲೆಲ್ಲೂ ಹರಿದಾಡುತ್ತಿವೆ.
ಕಾರ್ತಿ ನಟನೆಯ ‘ಸುಲ್ತಾನ್’ ಸಿನಿಮಾ ಮೂಲಕ ರಶ್ಮಿಕಾ ಅವರು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಆ ಸಿನಿಮಾ ತೆರೆಕಂಡ ಬಳಿಕ ಅವರು ತಮಿಳುನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಅಲ್ಲದೆ ಅವರು ಅಲ್ಲಿನ ಸಂಸ್ಕೃತಿಗೆ ಮಾರು ಹೋಗಿದ್ದಾರಂತೆ. ಈ ಎಲ್ಲ ವಿಚಾರಗಳ ಕುರಿತಂತೆ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಹಲವೆಡೆ ವರದಿ ಆಗಿದೆ
‘ತಮಿಳುನಾಡಿನ ಸಂಸ್ಕೃತಿ ನನಗೆ ಹೆಚ್ಚು ಇಷ್ಟವಾಗಿದೆ. ಅದರಲ್ಲೂ ಇಲ್ಲಿನ ಅಡುಗೆ ತುಂಬ ಇಷ್ಟ. ತಮಿಳುನಾಡಿನ ಊಟ ತುಂಬ ರುಚಿಯಾಗಿರುತ್ತದೆ. ನಾನು ತಮಿಳು ಹುಡುಗನನ್ನೇ ಮದುವೆ ಆಗಿ ತಮಿಳುನಾಡಿನ ಸೊಸೆ ಆಗುತ್ತೇನೆ ಎನಿಸುತ್ತದೆ’ ಎಂದು ರಶ್ಮಿಕಾ ಹೇಳಿದ್ದಾರೆ ಎಂಬುದಾಗಿ ಕೆಲವು ವೆಬ್ಸೈಟ್ಗಳು ವರದಿ ಮಾಡಿವೆ. ಹಾಗಾದರೆ ರಶ್ಮಿಕಾರನ್ನು ಕೈ ಹಿಡಿಯಲಿರುವ ಆ ಲಕ್ಕಿ ತಮಿಳು ಹುಡುಗ ಯಾರಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ ರಕ್ಷಿತ್ ಶೆಟ್ಟಿ ಜೊತೆ ರಶ್ಮಿಕಾಗೆ ಎಂಗೇಜ್ಮೆಂಟ್ ಆಗಿತ್ತು. ಆದರೆ ಅದು ಮದುವೆಯವರೆಗೆ ಬರಲೇ ಇಲ್ಲ. ಇಬ್ಬರ ಮಧ್ಯೆ ವೈಮನಸ್ಸು ಉಂಟಾದ ಕಾರಣ ಅವರು ಬ್ರೇಕಪ್ ಮಾಡಿಕೊಂಡರು. ನಂತರ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ತಳುಕು ಹಾಕಿಕೊಂಡಿತು. ಆದರೆ ನಾವಿಬ್ಬರು ಕೇವಲ ಬೆಸ್ಟ್ ಫ್ರೆಂಡ್ಸ್ ಎನ್ನುವ ಮೂಲಕ ಅವರು ಎಲ್ಲ ವದಂತಿಗಳನ್ನು ತಳ್ಳಿ ಹಾಕಿದರು.