ಕಿರಿಕ್ ಪಾರ್ಟಿ ಹಿಂದಿ ರಮೇಕ್‌ನಲ್ಲಿ ನಟಿಸಲ್ಲ ಎಂದ ರಶ್ಮಿಕಾ

Share

ಕಿರಿಕ್ ಪಾರ್ಟಿ ಸಿನಿಮಾ ಕನ್ನಡದಲ್ಲಿ ಅತ್ಯಂತ ಯಶಸ್ಸು ಕಂಡ ಚಿತ್ರ ಈ ಚಿತ್ರದ ಮೂಲಕ ರಶ್ಮಿಕ ಮಂದಣ್ಣ ಪರಿಚಯವಾಗಿದ್ದು ಈ ಮೂಲಕ ಈಗ ಬಾಲಿವುಡ್‌ವರೆಗೂ ಸಿನಿಪ್ರಯಾಣ ಬೆಳಸಿದ್ದಾರೆ.
ಆದರೆ ಈಗ ಅದೇ ಕಿರಿಕ್ ಪಾರ್ಟಿ ಹಿಂದಿ ರಿಮೇಕ್‌ನಲ್ಲಿ ನಟಿಸುವುದಿಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ.


ಕಿರಿಕ್ ಪಾರ್ಟಿ ಚಿತ್ರದ ಸಕ್ಸಸ್ ನಂತರ ಟಾಲಿವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಏನಾದರೂ ಹಿಂದಿಯಲ್ಲಿ ರಿಮೇಕ್ ಆದರೆ ನೀವು ನಟಿಸುತ್ತೀರಾ ಎಂಬ ಪ್ರಶ್ನೆಗೆ ನೋ ಎಂದಿದ್ದಾರೆ.
ನಾನು ಕಿರಿಕ್ ಪಾರ್ಟಿ ರಿಮೇಕ್‌ನಲ್ಲಿ ಖಂಡಿತಾ ನಟಿಸುವುದಿಲ್ಲ. ಒಂದು ಬಾರಿ ನಾನು ಆ ಪಾತ್ರದಲ್ಲಿ ಅಭಿನಯಿಸುವ ಮೂಲಕ ಅದರ ಅನುಭವವನ್ನು ಫೀಲ್ ಮಾಡಿದ್ದೇನೆ. ಮತ್ತೆ ಅದರಲ್ಲಿಯೇ ನಟಿಸಿದರೆ ಹೊಸತನ ನೀಡಲು ಸಾಧ್ಯವಿಲ್ಲ. ಹೊಸ ಕಥೆಗಳ ಮೂಲಕ ಹೊಸ ಅನುಭವ ಪಡೆಯುವ ಅವಕಾಶ ಇರುವಾಗ ಮತ್ತೆ ನಾನೇಕೆ ಹಳೇ ಪಾತ್ರದಲ್ಲಿ ನಟಿಸಲಿ. ಒಮ್ಮೆ ಆ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ನಾನು ಮುಂದುವರಿಯುತ್ತೇನೆ. ನಾನು ನನ್ನದೇ ಸಿನಿಮಾಗಳ ರಿಮೇಕ್‌ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ.


ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್‌ನ ಪುಷ್ಪ ಸಿನಿಮಾದಲ್ಲಿ ನಟ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಮಜ್ನು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ.

Girl in a jacket
error: Content is protected !!