ಕಾನ್ಸ್ ಚಿತ್ರೋತ್ಸವದಲ್ಲಿ ಸೀರೆಯಲ್ಲಿ ಗಮನಸೆಳೆದ ಚಾಂದಿನಿ

Share

ಫ್ರಾನ್ಸ್ ದೇಶದ ಕಾನ್ಸ್ ನಗರದಲ್ಲಿ ಇತ್ತೀಚೆಗಷ್ಟೇ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವವು ಮುಕ್ತಾಯಗೊಂಡಿದೆ. ಈ ಚಿತ್ರೋತ್ಸವದಲ್ಲಿ ಭಾರತದ ಹಲವು ನಟಿಯರು ಭಾಗವಹಿಸಿದ್ದು, ಕನ್ನಡದ ‘ಎ’ ಚಿತ್ರದಲ್ಲಿ ನಟಿಸಿದ್ದ ಚಾಂದಿನಿ ಸಹ ರೆಡ್‍ ಕಾರ್ಪೆಟ್‍ ಮೇಲೆ ಕ್ಯಾಟ್‍ ವಾಕ್‍ ಮಾಡಿದ್ದು ವಿಶೇಷವಾಗಿತ್ತು.

ಈ ಚಿತ್ರೋತ್ಸವದ ರೆಡ್‍ ಕಾರ್ಪೆಟ್ ವಿಭಾಗದಲ್ಲಿ ಭಾರತದ ಹಲವು ನಟಿಯರು ಭಾಗವಹಿಸಿದ್ದರೂ, ಅವರೆಲ್ಲರೂ ಆಧುನಿಕ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದರು. ನಟಿ ಚಾಂದಿನಿ ರೆಡ್‍ ಕಾರ್ಪೆಟ್‍ ಮೇಲೆ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಭಾರತದ ಸಂಪ್ರದಾಯ ಮತ್ತು ಪರಂಪರೆಯ ಝಲಕ್‍ ನೀಡಿದರು. ಚಾಂದಿನಿ ಅಲ್ಲದೆ, ಬಾಲಿವುಡ್‍ ನಟಿ ಐಶ್ವರ್ಯ ರೈ ಸಹ ಬನಾರಸ್‍ ಸೀರೆಯಲ್ಲಿ ಕಂಗೊಳಿಸಿದರು.

ಇಂಥದ್ದೊಂದು ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಸೀರೆ ಧರಿಸುವುದರ ಮೂಲಕ ಕಾರ್ಪೆಟ್ ಗ್ಲಾಮರ್ ಅನ್ನು ಚಾಂದಿನಿ ಮರುವ್ಯಾಖ್ಯಾನಿಸಿದ್ದಾರೆ. ಶತಮಾನಗಳಷ್ಟು ಹಳೆಯದಾದ ಸೀರೆ ಉಡುವ ಸಂಪ್ರದಾಯವನ್ನು ಜಾಗತಿಕ ವೇದಿಕೆಗೆ ತರುವುದರ ಜೊತೆಗೆ, ಅಂತರರಾಷ್ಟ್ರೀಯ ವಿನ್ಯಾಸಕರಿಗೆ ಸೀರೆಯ ಪ್ರಾಮುಖ್ಯತೆ ಮತ್ತು ಆಕರ್ಷಣೆಯನ್ನು ಅನ್ವೇಷಿಸಲು ಪ್ರೇರೇಪಿಸಿದ್ದಾರೆ.

Girl in a jacket
error: Content is protected !!