ಧಾರವಾಡ,ಅ,06: ಜ್ಞಾನಪೀಠ ಪ್ರಶಸ್ತಿ ಯಾರಿಗೆ ಸಿಕ್ಕರೂ ನನಗೆ ಸಂತೋಷ ಎಂದು ಹಿರಿಯ ಕವಿ ಚನ್ನವೀರ ಕಣವಿ ಹೇಳಿದ್ದಾರೆ.
ಜ್ಞಾನಪೀಠ ಪ್ರಶಸ್ತಿಗೆ ಹೆಸರು ಶಿಫಾರಸ್ಸು ಮಾಡಿರುವ ವಿಚಾರವಾಗಿ ಧಾರವಾಡದಲ್ಲಿ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿದ್ದು, ನನ್ನ ಹೆಸರು ಶಿಫಾರಸ್ಸು ಮಾಡಿದ್ದಕ್ಕೆ ನನಗೆ ಪ್ರಶಸ್ತಿ ಸಿಗುತ್ತೆ ಅಂತಾ ಅಲ್ಲ ಎಂದಿದ್ದಾರೆ.
ಹೆಸರು ಶಿಫಾರಸ್ಸು ಮಾಡಿರುತ್ತಾರೆ. ಯಾರಿಗಾದರೂ ಒಬ್ಬರಿಗೆ ಪ್ರಶಸ್ತಿ ಕೊಡುತ್ತಾರೆ. ಶಿಫಾರಸ್ಸು ಮಾಡಿದ್ದಕ್ಕೆ ಪ್ರಶಸ್ತಿ ಬರುತ್ತದೆ ಅಂತಾ ಅಲ್ಲಾ. ಇನ್ನು ಪ್ರಶಸ್ತಿ ನನಗೆ ಬಂದರೂ ಸಂತೋಷ ಹೇಳಬಹುದು, ವೀರಪ್ಪ ಮೊಯ್ಲಿ ಹಾಗೂ ಎಸ್ ಎಲ್ ಭೈರಪ್ಪ ಯಾರಿಗೆ ಸಿಕ್ಕರೂ ಸಂತೋಷ. ನನಗೆ ಸಿಗಬೇಕು ಅಂತಾ ಏನಿಲ್ಲ. ಜನರು ಪ್ರಶಸ್ತಿ ನನಗೆ ಸಿಗಬೇಕು ಎನ್ನುವ ಮಾತಿನಲ್ಲಿ ಹುರುಳಿಲ್ಲ ಎಂದಿದ್ದಾರೆ