ಶ್ರೀಧರ್.ಡಿ
ಬೆಂಗಳೂರು ದಕ್ಷಿಣ
ತಿಳಿದು ಬಾಳು ಮಾನವಾ..!
ಮಾನವ ನಿನ್ನ ಚಂಚಲವಾದ
ನಾಲಿಗೆ ಸದಾಕಾಲವೂ
ಒದ್ದೆಯಾದ ಸ್ಥಳದಲ್ಲೇ
ಇರುವುದರಿಂದ
ಸುಲಭವಾಗಿ ಮಾತುಗಳು
ಜಾರುತ್ತದೆ
ಎಚ್ಚರಿಕೆ ಯಿಂದ ನುಡಿ-
ಮುತ್ತಿನಂತೆ ಮಾತನು
ಮತ್ತೊಬ್ಬರನ್ನು ನೋಯಿಸದಂತೆ ಮಾನವಾ..
ಬೆಣ್ಣೆಯು ಮೃತುವೆಂದು
ಹೇಳುವರು ಆದರೆ
ಸಜ್ಜನನ ಹೃದಯವು
ಅದಕ್ಕಿಂತಲೂ ಮೃದುವಾದದು
ಅಗ್ನಿಯು ಮಾತಾಡದೆ
ಅನ್ನಬೇಯಿಸುವಂತೆ
ಸೂರ್ಯನು ಸದ್ದು ಮಾಡದೇ
ಲೋಕವನೆ ಬೆಳಗುವಂತೆ
ಸಜ್ಜನರ ಸಂಘ
ನಿನ್ನ ದುರ್ಬುದ್ಧಿಯನು
ಹೋಗಲಾಡಿಸುವುದು
ಜ್ಞಾನ ಸಂಪತ್ತಿನ ಕಡೆ
ನಡೆ ಮಾನವಾ..
ಸಕಲ ವೇದಗಳ ಓದಿದರೆ
ಏನು ಫಲ
ದಾನ ಧರ್ಮಗಳ ಮಾಡಿದರೇನು ಫಲ
ನಿನ್ನಲ್ಲೇ ಇರುವ ಜ್ಞಾನ ದೇಗುಲವನು ಶುದ್ಧಿಮಾಡು
ದ್ವೇಷಾಂಕಾರ-ಹೊಟ್ಟೆಕಿಚ್ಚು
ಕೆಟ್ಟ ಮನಸ್ಸನ್ನು ತೊರೆದು
ಒಳ ಅಂತರಂಗ ಶುದ್ಧಿ ಮಾಡೋ ಮಾನವಾ..
ಸಂಪತ್ತಿನಲಿ ವಿಪತ್ತಿನಲಿ
ಒಂದೇ ಮನಸಿನ ಗುಣವಂತನಾಗು
ವಿದ್ಯೆ ಕಮ್ಮಿಯಿದ್ದರೂ
ವಿವೇಕವನು ರೂಪಿಸಿಕೋ
ಮೋಸವೇ ಜೀವನವಲ್ಲ
ಒಳ್ಳೇಯ ಜ್ಞಾನ ಬುದ್ಧಿಯಲಿ
ಎಲ್ಲರಿಗೂ ಪ್ರೀತಿ ಸ್ನೇಹವನು
ಕೊಡು ಮಾನವಾ..
ಜಾತಿ ಜಾತಿಯೆಂದು ಕೂಗಬೇಡ
ನಾವೆಲ್ಲಾ ಮಾನವ ಜಾತಿಯೆಂಬುದ ಮರೆಯಬೇಡ
ಭ್ರಷ್ಟರ ಮಾತಿಗೆ ಮರುಳಾಗಬೇಡ
ಹಣ ಇದೆಯೆಂದು ಮೆರೆಯಬೇಡ
ನೀರಿನ ಅಲೆಯಂತೆ
ಐಶ್ವರ್ಯವೂ
ನಿನ್ನಲ್ಲೇ ಇದೆ ಒಳ್ಳೆಯ ಜ್ಞಾನ ಗುಣ ತಿಳಿದು ಬಾಳು ಮಾನವಾ..