ಇಂದಿನಿಂದ ಬೆಂಗಳೂರಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

Share

ಇಂದಿನಿಂದ ಬೆಂಗಳೂರಿನ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

 by-ಕೆಂಧೂಳಿ
ಬೆಂಗಳೂರು,ಫೆ,೧೦-ಎಲ್ಲರಿಗೂ ಕುತೂಹಲ ಬಾನಂಗಳದಲ್ಲಿ ಹಕ್ಕಿಯಂತೆ ಹಾರುತ್ತ ಬಣ್ಣ ಬಣ್ಣದ ರಂಗು ಚೆಲ್ಲಿ ನೋಡುಗರನ್ನು ಬೆರಗುಗೊಳಿಸುವ ಆ ದ್ಯಶ್ಯಕ್ಕೆ ದೇಶದ ಜನ ಕಾತುರವಾಗಿದ್ದಾರೆ,, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಕ್ಕಿಗಳಂತೆಯೇ ಹಾರಾಡಿ ನೋಡುಗರ ಕಣ್ಣಿಗೆ ಮನಸೆಳೆಯಲಿವೆ..
ಹೌದು ಇಂದಿನಿಂದ ಬೆಂಗಳೂರಿನಲ್ಲಿ ೨೦೨೫ನೇ ಸಾಲಿನ ಏರೋ ಇಂಡಿಯಾ ಶೋ ಆರಂಭವಾಗಲಿದೆ.. ಆರಂಭದಲ್ಲಿ ವಿಮಾನಗಳು ಆಕಾಶದಿಂದ ಪುಷ್ಟ ಚಿಮ್ಮಿಸಿ ಚಾಲನೆ ನೀಡಿ ಬಾನಂಗಳದಲ್ಲಿ ರಂಗು ಚೆಲ್ಲಿ ರಂಗೋಲಿ ಬಿಡಿಸಿ ತಿರಂಗದಂತೆ ತಿರುಗತ್ತ ನೋಡುಗರನ್ನು ಬೆರಗುಗೊಳಿಸಲು ಸನ್ನದ್ದವಾಗಿವೆ..


ಇಂದು ಬೆಳಿಗ್ಗೆ ೯-೩೦ಕ್ಕೆ ಆರಂಭವಾಗಲಿರುವ ಈ ಶೋ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ
ಏರೋ ಇಂಡಿಯಾ ಶೋ ಭಾರತದ ಶಕ್ತಿ, ದೇಶದ ಆತ್ಮವಿಶ್ವಾಸದ ಪ್ರತೀಕ. ಸಿಲಿಕಾನ್ ಸಿಟಿಯ ನೀಲಿ ಆಗಸದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಅಬ್ಬರಿಸಲಿವೆ. ವಿಶ್ವವೇ ತಿರುಗಿ ನೋಡುವಂಥ ಫೈಟರ್ ಜೆಟ್‌ಗಳ ಅದ್ಭುತ ಸ್ಟಂಟ್‌ಗಳಿಗೆ ಹೈಟೆಕ್ ಸಿಟಿ ಸಾಕ್ಷಿಯಾಗಲಿದೆ.
ಇದು ಏಷ್ಯಾದ ಅತಿದೊಡ್ಡ ಏರ್ ಶೋ. ಇವತ್ತಿನಿಂದ ನಭದಲ್ಲಿ ಲೋಹದ ಹಕ್ಕಿಗಳು ವರ್ಣ ರಂಜಿತ ಚಿತ್ತಾರ ಕಾಣಲಿದ್ದು, ನೋಡುಗರ ಮೈ ರೋಮಾಂಚನಗೊಳಿಸಲಿದೆ. ಯಲಹಂಕದ ಏರ್‌ಬೇಸ್‌ನಲ್ಲಿ ಇಂದಿನಿಂದ ಫೆಬ್ರವರಿ ೧೪ರ ತನಕ ೨೦೨೫ನೇ ಏರ್ ಶೋಗೆ ಚಾಲನೆ ನೀಡಲಾಗುತ್ತದೆ.


ಏರ್ ಶೋ ಹಿನ್ನೆಲೆ ರಾಜಧಾನಿಗೆ ಬಂದಿಳಿದಿರೋ ಕೇಂದ್ರ ರಕ್ಷಣಾ ಸಚಿವ ರಾಜನಾಥ್? ಸಿಂಗ್ ನಿನ್ನೆ, ಕರ್ಟನ್ ರೈಸರ್ಸ್ ಸುದ್ದಿಗೋಷ್ಠಿ ನಡೆಸಿದರು. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬರೀ ಏರ್ ಶೋ ಅಷ್ಟೇ ಅಲ್ಲ ಎಂದ ರಾಜನಾಥ್, ಏರೋ ಇಂಡಿಯಾ ದೇಶದ ಆರ್ಥಿಕತೆ, ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಉತ್ತಮ ವೇದಿಕೆ ಅಂತ ಬಣ್ಣಿಸಿದರು.
ಭಾರತೀಯ ರಕ್ಷಣಾ ವಲಯದ ಅಭಿವೃದ್ಧಿ ಆತ್ಮ ನಿರ್ಭರ್ ಭಾರತದ ಮಾದರಿಗಳು ಏರ್‌ಶೋನಲ್ಲಿ ಗಮನ ಸೆಳೆಯಲಿವೆ. ತಂತ್ರಜ್ಞಾನದ ಪ್ರದರ್ಶನಕ್ಕೆ ಅತಿದೊಡ್ಡ ವೇದಿಕೆ ಬೆಂಗಳೂರು ಸಜ್ಜಾಗಿದ್ದು, ವಿವಿಧ ಯುದ್ಧ ವಿಮಾನಗಳು, ರಫೆಲ್, ಚಾಪರ್‌ಗಳು ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ ಮೂಡಿಸಲಿವೆ. ಒಟ್ಟು ೫ ದಿನಗಳ ಕಾಲ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಅಬ್ಬರವೇ ಕೇಳಿಸಲಿದೆ.

Adavatigement

Girl in a jacket
error: Content is protected !!