ನವದೆಹಲಿ,ಮೇ,೨೭: ಕಳೆದ ಎರಡು ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿರಲಿಲ್ಲ ಇಂದು ಮತ್ತೇ ದಿಡೀರ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ಗೆ ೨೫ ಪೈಸೆ , ಡೀಸೆಲ್ ೩೦ ಪೈಸೆ ಎರಿಕೆ ಕಂಡಿದೆ
ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ೧೦೦ ರೂ ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ ೬ನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ.
ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ೯೩.೭೪ರೂ ಮತ್ತು ಡೀಸೆಲ್ ೮೪.೬೭ರೂ ಗೆ ಏರಿಕೆಯಾಗಿದೆ. ಅಂತೆಯೇ ಕೋಲ್ಕತಾದಲ್ಲಿ ಪೆಟ್ರೋಲ್ ೯೩.೭೮ರೂ, ಡೀಸೆಲ್ ೮೭.೫೧ ರೂಗೆ ಏರಿಕೆಯಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ೯೯.೯೮ರೂ, ಡೀಸೆಲ್ ೯೧.೯೩ರೂಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ ೯೫.೩೩ರೂ ಮತ್ತು ಡೀಸೆಲ್ ೮೯.೪೪ರೂ ಗೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ೯೬.೮೬ರೂ- ಡೀಸೆಲ್ ೮೯.೭೫ರೂಗೆ ಏರಿಕೆಯಾಗಿದೆ. ಅಂತೆಯೇ ಹೈದರಾಬಾದ್ ನಲ್ಲಿ ಪೆಟ್ರೋಲ್ ೯೭.೪೩ರೂ ಮತ್ತು ಡೀಸೆಲ್ ೯೨.೩೦ರೂಗೆ ಏರಿಕೆಯಾಗಿದೆ.
ಮತ್ತೇ ತೈಲೋತ್ಪನ್ನಗಳ ದರ ಏರಿಕೆ
Share