ಹಳ್ಳಿಹುಡುಗ ರಾಷ್ಟ್ರಪತಿ ಹುದ್ದೆಗೇರಿದ್ದೇನೆ ಎಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣ: ಕೋವಿಂದ್

Share

ಕಾನ್ಪುರ,ಜೂ,27:ಇಂಥ ಚಿಕ್ಕ ಹಳ್ಳಿಯಲ್ಲಿ ‌ಜನಸಿದ‌ನಾನು ಈ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಲ್ಲಿ ಕೂರುತ್ತೇನೆ  ಎಂದು ಕನಸಲ್ಲೂ ಕಂಡಿರಲಿಲ್ಲ ಇದಕ್ಕೆ ಈ ದೇಶದ ಪ್ರಜಾಪ್ರಭುತ್ವ ವೇ ಕಾರಣ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಅವರು ಭಾನುವಾರ ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದ ದೇಹತ್ ಜಿಲ್ಲೆಯ ಪರಾಂಖ್ ಗ್ರಾಮದಲ್ಲಿ ಅಭಿನಂದನೆ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳು, ಕನಸು ಕಂಡಿದ್ದು, ಮುಂದೆ ಬೆಳೆದ ರೀತಿಯನ್ನು ಬಣ್ಣಿಸಿದರು. ನನ್ನಂತಹ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ ಇಂದು ದೇಶದ ಅತ್ಯುನ್ನತ ಹುದ್ದೆ ವಹಿಸಿಕೊಂಡಿದ್ದಾರೆಂದರೆ ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸಾಧ್ಯವಾಯಿತು.

ಇಂದು ಈ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸಂವಿಧಾನವನ್ನು ರಚಿಸಿದವರಿಗೆ ಅವರ ತ್ಯಾಗ-ಬಲಿದಾನಗಳಿಗೆ ಶಿರಬಾಗಿ ವಂದಿಸುತ್ತೇನೆ. ಇಂದು ನನ್ನ ಯಶಸ್ಸಿಗೆ ಈ ಗ್ರಾಮದ ಮಣ್ಣು, ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ಕಾರಣ ಎಂದು ಸ್ಮರಿಸಿಕೊಂಡರು.

ಇದಕ್ಕೂ ಮುನ್ನ ರಾಷ್ಟ್ರಪತಿಗಳು ತಾವು ಹುಟ್ಟಿದ ಗ್ರಾಮಕ್ಕೆ ವಿಮಾನದಲ್ಲಿ ಹೆಲಿಪ್ಯಾಡ್ ನಿಂದ ಬಂದಿಳಿದಾಗ ನೆಲಕ್ಕೆ ತಲೆಬಾಗಿ ನೆಲಕ್ಕೆ ನಮಸ್ಕರಿಸಿದರು.

Girl in a jacket
error: Content is protected !!