ಇನ್ನೂ ಮುಂದೆ ವಾಹನಗಳ ಪಾಸ್ಟ್ಯಾಗ್ ವಾರ್ಷಿಕ 3000. ರೂ ಪಾಸ್ – ಗಡ್ಕರಿ

Share

ಹೊಸದಿಲ್ಲಿ,ಜೂ,28-ಹೆದ್ದಾರಿಗಳಲ್ಲಿ ಸರಾಗ ಪ್ರಯಾಣಕ್ಕಾಗಿ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್‌ನ್ನು ಪರಿಚಯಿಸುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದು,ವಾರ್ಷಿಕ ಪಾಸ್‌ಗೆ 3,000 ರೂ.ದರವನ್ನು ನಿಗದಿಗೊಳಿಸಲಾಗಿದ್ದು, 2025,ಆ.15ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಹೊಸ ಫಾಸ್ಟ್‌ಟ್ಯಾಗ್ ಪಾಸ್ ಕಾರು,ಜೀಪ್ ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಅದನ್ನು ಪಡೆದುಕೊಂಡ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟ್ರಿಪ್‌ಗಳವರೆಗೆ,ಇವುಗಳಲ್ಲಿ ಯಾವುದು ಮೊದಲು ಬರುತ್ತದೆಯೋ ಅಲ್ಲಿಯವರೆಗೆ ಸಿಂಧುವಾಗಿರುತ್ತದೆ.

ಇದುಟೋಲ್‌ಗೆಸಂಬಂಧಿಸಿದಕುಂದುಕೊರತೆಗಳನ್ನು,ವಿಶೇಷವಾಗಿ 60 ಕಿ.ಮೀ.ವ್ಯಾಪ್ತಿಯಲ್ಲಿನ ಟೋಲ್ ಪ್ಲಾಝಾಗಳ ಸಮೀಪದ ನಿವಾಸಿಗಳ,ನಿವಾರಿಸುವ ಗುರಿಯನ್ನುಹೊಂದಿದೆ.

ಪಾಸ್ ಪಡೆಯುವುದು ಹೇಗೆ?

ವಾರ್ಷಿಕ ಪಾಸ್ ರಾಜಮಾರ್ಗ ಮೊಬೈಲ್ ಆ್ಯಪ್, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ಗಳ ಮೂಲಕ ಲಭ್ಯವಾಗಲಿದೆ.

ಗಡ್ಕರಿಯವರ ಪ್ರಕಾರ ನೂತನ ವ್ಯವಸ್ಥೆಯು ಇಡೀ ವರ್ಷಕ್ಕಾಗಿ ಒಂದು ಬಾರಿ ಹಣವನ್ನು ಪಾವತಿಸಲು ಬಳಕೆದಾರರಿಗೆ ಅವಕಾಶ ಕಲ್ಪಿಸುವ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸಲು ಉದ್ದೇಶಿಸಿದೆ. ಕಡಿಮೆ ದೂರದ ಪ್ರಯಾಣಗಳ ಸಂದರ್ಭದಲ್ಲಿ ಆಗಾಗ ಟೋಲ್ ಕಡಿತ ಕುರಿತು ದೀರ್ಘಕಾಲಿಕ ಸಾರ್ವಜನಿಕ ಕಳವಳಗಳನ್ನೂ ಇದು ಪರಿಹರಿಸಲಿದೆ.

ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಬಳಕೆದಾರರ ಅನುಕೂಲವನ್ನು ಹೆಚ್ಚಿಸುವ ಜೊತೆಗೆ ಮೂಲಸೌಕರ್ಯ ಸೇವೆಗಳನ್ನು ಡಿಜಿಟಲೀಕರಿಸುವ ಮತ್ತು ಆಧುನೀಕರಿಸುವ ವ್ಯಾಪಕ ಪ್ರಯತ್ನಗಳ ಭಾಗವಾಗಿ ಸರಕಾರವು ಈ ಉಪಕ್ರಮವನ್ನು ಕೈಗೊಂಡಿದೆ ಎಂದು ಸಚಿವಾಲಯವು ತಿಳಿಸಿದೆ.

Girl in a jacket
error: Content is protected !!