ನವದೆಹಲಿ,ಮೇ,22: ಅಲೋಪತಿ ವೈದ್ಯ ಪದ್ಧತಿಯನ್ನು ಅವಿವೇಕಿ ವಿಜ್ಞಾನ ಪದ್ದತಿ ಎಂದು ಹೇಳಿಕೆ ನೀಡುತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗ್ರಹಿಸಿದೆ.
ಬಾಬಾ ರಾಮ್ ದೇವ್ ವಿರುದ್ಧ ಎಪಿಡೆಮಿಕ್ ಡಿಸೀಸಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು, ಬಾಬಾ ರಾಮ್ ದೇವ್ ಅಲೋಪತಿ ಬಗ್ಗೆ ತಿಳಿವಳಿಕೆ ಇಲ್ಲದೇ ನೀಡುತ್ತಿರುವ ಹೇಳಿಕೆಗಳು ಸುಶಿಕ್ಷಿತ ಜನರಿಗೆ, ಅವರ ಬಲೆಗೆ ಬೀಳುತ್ತಿರುವ ಜನರಿಗೆ ಅಪಾಯವಿದೆ ಎಂದು ಐಎಂಎ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಾಬಾ ರಾಮ್ ದೇವ್ ಅವರು ಅಲೋಪತಿ ಅವಿವೇಕಿ ವೈದ್ಯಕೀಯ ವಿಜ್ಞಾನ ವಿಡಿಯೋವನ್ನು ಉಲ್ಲೇಖಿಸಿದ್ದು ಬಾಬಾ ರಾಮ್ ದೇವ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.
ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈ ವರೆಗೂ ಸಾವನ್ನಪ್ಪಿದ್ದಾರೆ, ಡಿಸಿಜೈ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ ಎಂದು ಬಾಬಾ ರಾಮ್ ದೇವ್ ಅವರು ಹೇಳಿರುವುದನ್ನು ಐಎಂಎ ಉಲ್ಲೇಖಿಸಿದೆ
ಸ್ವತಃ ವೈದ್ಯರಾಗಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಸವಾಲು ಆರೋಪಗಳನ್ನು ಸ್ವೀಕರಿಸಿ, ಆಧುನಿಕ ವೈದ್ಯಕೀಯ ಸೌಲಭ್ಯವನ್ನು ವಿಸರ್ಜನೆ ಮಾಡಲಿ ಅಥವಾ ಬಾಬಾ ರಾಮ್ ದೇವ್ ಅವರ ವಿರುದ್ಧ ಎಪಿಡೆಮಿಕ್ ಕಾಯ್ದೆಯಡಿ ಪ್ರಕರಣ ದಾಖಲಿಸಲಿ ಎಂದು ಐಎಂಎ ಆಗ್ರಹಿಸಿದೆ.
ಜನರಲ್ಲಿ ಭಯ ಮೂಡಿಸಿ ಪರಿಸ್ಥಿತಿಯ ಲಾಭವನ್ನು ಪಡೆಯುವುದಕ್ಕೆ ಯತ್ನಿಸುತ್ತಿದ್ದಾರೆ, ಜನರಲ್ಲಿ ಭಯ, ಹತಾಶೆ ಮೂಡಿಸುವ ಮೂಲಕ ತಮ್ಮ ಅಕ್ರಮ ಹಾಗೂ ಅನುಮೋದನೆ ಇಲ್ಲದ ಔಷಧಗಳನ್ನು ಮಾರಾಟ ಮಾಡಿ ಹಣಗಳಿಸಬೇಕೆಂಬ ಉದ್ದೇಶವಿದೆ ಎಂದು ಐಎಂಎ ಆರೋಪಿಸಿದೆ.
 
                                         
					
										
												
				
 
									 
									