ಅತ್ಯಾಚಾರ ಆರೋಪ;ತಮಿಳುನಾಡು ಮಾಜಿ ಸಚಿವ ಮಣಿಕಂದನ್ ಬಂಧನ

Share

ಬೆಂಗಳೂರು,ಜೂ.೨೦: ಎಐಡಿಎಂಕೆ ಪಕ್ಷದ ಮಾಜಿ ಸಚಿವ ಮಣಿಕಂದನ್ ಅವರನ್ನು ಅತ್ಯಾಚಾರ ಆರೋಪದ ಮೇಲೆ ಇಂದು ಬೆಂಗಳೂರಿನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರ ಆರೋಪ ಹೊತ್ತಿರುವ ಮಾಜಿ ಸಚಿವ ಮಣಿಕಂದನ್ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು ತಮಿಳುನಾಡು ಪೊಲಿಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು ಇಂದು ಬೆಂಗಳೂರಿನಲ್ಲಿ ಇರುವುದು ಖಾತ್ರಿಯಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದಾರೆ
ಆರೋಪಿ ಮಣಿಕಂದನ್ ಮಲೇಷ್ಯಾ ಮೂಲದ ನಟಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ೨೦೧೭ರಲ್ಲಿ ಮಣಿಕಂದನ್ ಐಟಿ ಸಚಿವರಾಗಿದ್ದಾಗ ನಟಿಯ ಪರಿಚಯವಾಗಿತ್ತು. ಮಲೇಷಿಯಾದಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ನಟಿಯನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಮಣಿಕಂದನ್ ನಟಿಯನ್ನು ಮದುವೆಯಾಗುವುದಾಗಿ ನಂಬಿಸಿ, ಲಿವಿಂಗ್ ಇನ್ ರಿಲೇಶನ್ ಇದ್ದರು ಎಂದು ತಿಳಿದು ಬಂದಿದೆ.


ಮದುವೆಯಾಗುವುದಾಗಿ ನಂಬಿಸಿದ್ದಲ್ಲದೇ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಜೊತೆಗೆ ಮೂರು ಬಾರಿ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದರು ಎಂಬ ಆರೋಪವೂ ಸಹ ಕೇಳಿ ಬಂದಿದೆ. ಇಷ್ಟೇ ಅಲ್ಲದೇ, ಮಲೇಷಿಯಾದ ಸಂತ್ರಸ್ತ ನಟಿ ಕುಟುಂಬಸ್ಥರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಅದ್ಯಾರ್ ಆಲ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಹೈಕೋರ್ಟ್ ಮಣಿಕಂದನ್‌ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನಲೆ ಆರೋಪಿ ಮಣಿಕಂದನ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಆನೇಕಲ್‌ನ ತಮ್ಮನಾಯಕನಹಳ್ಳಿಯಲ್ಲಿ ಆರೋಪಿ ಮಣಿಕಂದನ್‌ನ್ನು ತಮಿಳುನಾಡು ಪೊಲೀಸರು ಇಂದು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಮಣಿಕಂದನ್ ಜೆಡಿಎಸ್ ಮುಖಂಡ ತಮ್ಮನಾಯಕನಳ್ಳಿ ಶ್ರೀನಿವಾಸ್ ಅವರಿಗೆ ಸೇರಿದ ವಿಲ್ಲಾ ಒಂದರಲ್ಲಿ ಕಳೆದ ೧೦ ದಿನಗಳಿಂದ ಉಳಿದುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಕಳೆದ ರಾತ್ರಿ ಚೆನ್ನೈ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಮೊದಲು ಪೊಲೀಸರು ತಮ್ಮನಾಯಕನಹಳ್ಳಿ ಶ್ರೀನಿವಾಸ್ ಅವರನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಇಂದು ಮುಂಜಾನೆ ಮೂರು ಗಂಟೆಗೆ ಅತ್ಯಾಚಾರ ಪ್ರಕರಣದ ಆರೋಪಿ ಮಣಿಕಂದನ್‌ನ್ನು ಪೊಲೀಸರು ಬಂಧಿಸಿದ್ದಾರೆ.

Girl in a jacket
error: Content is protected !!