ಬೆಂಗಳೂರು,ಜ,28: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು 6 ತಿಂಗಳ ಸಂಭ್ರಮವಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ 6 ತಿಂಗಳ ಸಾಧನೆ ಪುಸ್ತಕ ಬಿಡುಗಡೆಗೊಳಿಸಿದರು.
ವಿಧಾನ ಸೌಧದಲ್ಲಿ ಬಸವಕಲ್ಯಾಣಸಮಾರಂಭಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ 6 ತಿಂಗಳ ಸಾಧನೆ ಪುಸ್ತಕ ಭವ್ಯಭವಿಷ್ಯದ ಭರವಸೆಯ ಹೆಜ್ಜೆಗಳು ಎಂಬ ಪುಸ್ತಕ ಬಿಡುಗಡೆ ಮಾಡಿದರು. ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ ಭೈರತಿ ಬಸವರಾಜ್, ಉಮೇಶ್ ಕತ್ತಿ, ಡಾ.ಕೆ. ಸುಧಾಕರ್ ಗೋಪಾಲಯ್ಯ,ಕೆಎಸ್ ಈಶ್ವರಪ್ಪ ಎಂಟಿಬಿ ನಾಗರಾಜ್ ಎಸ್. ಟಿ ಸೋಮಶೇಖರ್, ಬಿಸಿ ನಾಗೇಶ್ ಸಂಸದ ಪಿಸಿ ಮೋಹನ್ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು.