ಯಾವುದೇ ನಿರ್ಣಯ ಕೈಗೊಳ್ಳದ ವಿಶೇಷ ಸಚಿವ ಸಂಪುಟ ಸಭೆ-ಜಾತಿ ಗಣತಿ ಸಭೆ ಅಪೂರ್ಣ

Share

ಬೆಂಗಳೂರು,ಏ.೧೮– ಗುರುವಾರ ನಡೆದ ಜಾತಿಗಣತಿ ವರದಿ ಅಭಿಪ್ರಾಯ ಸಂಗ್ರಹಣೆಯ ಸಚಿವ ಸಂಪುಟ ಸಭೆಯಲ್ಲಿ ನಡೆದ ಅಸಮಾಧಾನ ಮತ್ತು ಭಾವುಕ ನುಡಿಗಳಿಂದ ಸಭೆ ಅಪೂರ್ಣವಾಗಿದ್ದು ಯಾವುದೇ ನಿರ್ಧಾರ ಕೈಗೊಳ್ಳದೆ ಸಂಪುಟ ಸಭೆಯನ್ನು ಮುಂದೂಡಲಾಗಿದೆ.
ಇದರಿಂದ ಸದ್ಯಕ್ಕೆ ಜಾತಿ ಗಣತಿಯ ಈ ವರದಿಯು ಮಂಡನೆ ಅಷ್ಟು ಸುಲಭ ಅಲ್ಲ ಎನ್ನುವುದು ಗೊತ್ತಾಗಿದ್ದು ಇದು ಮುಂದೆ ಪಕ್ಷಕ್ಕೆ ದೊಡ್ಡ ಅಘಾತವಾಗಲಿದೆ ಎನ್ನುವ ಮಾತುಗಳು ಕೂಡ ಈ ಸಭೆಯಲ್ಲಿ ಚರ್ಚೆಯಾಗಿದ್ದು ಕೆಲವ ನಡುವೆ ಮಾತಿನ ಚಕಮುಕಿಯೂ ಆದ ಪ್ರಸಂಗ ನಡೆದಿದೆಯಂತೆ
ಹಾಗಾಗಿ ಬಹುತೇಕ ಮೇ ೨ರಂದು ಮತ್ತೊಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಸಚಿವರ ಆಕ್ಷೇಪ ಹಾಗೂ ಅಭಿಪ್ರಾಯಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ.
ಗುರುವಾರ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಪ್ರವರ್ಗವಾರು ಜಾತಿ ವಿಂಗಡಣೆ, ಆರ್ಥಿಕ ಸ್ಥಿತಿ ಬಗ್ಗೆ ನಿರ್ಣಯ ಮಾಡಿರುವ ಮಾನದಂಡಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಮುಸ್ಲಿಂ ಸಮುದಾಯದ ಉಪ ಪಂಗಡಗಳನ್ನು ಪರಿಗಣಿಸದೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಉಪ ಜಾತಿಗಳನ್ನು ಪ್ರವರ್ಗವಾರು ಪ್ರತ್ಯೇಕಿಸಿರುವ ಬಗ್ಗೆ ಸಭೆಯ ಗಮನ ಸೆಳೆದರು.

ಇಂತಹ ಲೋಪವಿರುವ ವರದಿಯನ್ನು ಯಥಾವತ್ ಒಪ್ಪಿದರೆ ಪ್ರಮುಖ ಸಮುದಾಯಗಳು ಪಕ್ಷದ ಬಗ್ಗೆಯೂ ಬೇಸರಗೊಳ್ಳಬಹುದು ಎಂಬ ಎಚ್ಚರಿಕೆಯನ್ನು ನೀಡಿದರು ಎನ್ನಲಾಗಿದೆ. ಈ ಬಗ್ಗೆ ಚರ್ಚೆ ತೀವ್ರಗೊಳ್ಳುವ ಲಕ್ಷಣ ಕಂಡ ಬೆನ್ನಲ್ಲೇ ಮುಖ್ಯಮಂತ್ರಿಯವರು ಜಾತಿ ಗಣತಿ ವಿಚಾರದಲ್ಲಿ ತರಾತುರಿ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಬಗೆಗಿನ ನಿಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡಿ, ಅದನ್ನು ಅಂತಿಮವಾಗಿ ನಾನು ಮತ್ತು ಉಪ ಮುಖ್ಯಮಂತ್ರಿಯವರು ಕ್ರೋಢೀಕರಿಸುತ್ತೇವೆ ಎಂದು ತಿಳಿಸುವ ಮೂಲಕ ವಿಷಯಕ್ಕೆ ತೆರೆ ಎಳೆದರು ಎಂದು ತಿಳಿದುಬಂದಿದೆ.
ಸಭೆಯ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರದಿ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಷಯವಾದರೂ ಯಾರೂ ಉದ್ವೇಗದಲ್ಲಿ ಮಾತನಾಡುವ ಅಗತ್ಯವಿಲ್ಲ. ಎಲ್ಲರಿಗೂ ಎಲ್ಲಾ ವಿಷಯದ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗುವುದು. ಹೀಗಾಗಿ ಒಬ್ಬೊಬ್ಬರೇ ವಿಷಯ ಪ್ರಸ್ತಾಪಿಸಿ ಎಂದು ಸೂಚಿಸಿದರು.

ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಲಿಂಗಾಯತ ಸಮುದಾಯದ ಪ್ರವರ್ಗವಾರು ವಿಂಗಡಣೆ ಹಾಗೂ ಜನಸಂಖ್ಯೆ ಬಗ್ಗೆ ತೀವ್ರ ಆಕ್ಷೇಪವಿದೆ. ಚಿನ್ನಪ್ಪರೆಡ್ಡಿ ಆಯೋಗದಲ್ಲಿ ಹಿಂದುಳಿದ ಲಿಂಗಾಯತ ಶೇ.೧೭.೪೩ ರಷ್ಟಿತ್ತು. ಈ ವರದಿಯಲ್ಲಿ ಶೇ.೧೧.೦೯ ರಷ್ಟು ಮಾತ್ರ ತೋರಿಸಿದ್ದು, ಶೇ.೬.೩೨ ರಷ್ಟು ಕಡಿಮೆ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಇನ್ನು ಲಿಂಗಾಯತರು ಕಸುಬು, ಆರ್ಥಿಕ ಹಾಗೂ ಸಾಮಾಜಿಕ ಹೀಗೆ ಹಿಂದುಳಿದಿರುವಿಕೆ ಮಾನದಂಡಗಳ ಪ್ರಕಾರ ವಿವಿಧ ಒಬಿಸಿ ಪ್ರವರ್ಗಗಳಲ್ಲಿ ಇದ್ದರು. ಪ್ರವರ್ಗ ೧, ೨-ಎ ಹೀಗೆ ವಿವಿಧ ಪ್ರವರ್ಗದಲ್ಲಿದ್ದವರನ್ನು ೩-ಬಿಯಲ್ಲಿ ಸೇರಿಸಲಾಗಿದೆ. ಲಿಂಗಾಯತ ಎಂದಾಕ್ಷಣ ಅವರ ಕಸುಬು ಹಾಗೂ ಆರ್ಥಿಕ ಮಾನದಂಡ ಪರಿಗಣಿಸದೆ ಹೇಗೆ ೩-ಬಿಗೆ ಸೇರಿಸಲು ಸಾಧ್ಯ? ಎಂದು ಪ್ರಶ್ನಿಸಿದರು ಎನ್ನಲಾಗಿದೆ.
ಜತೆಗೆ ಮುಸ್ಲಿಮರ ಜನಸಂಖ್ಯೆಯನ್ನು ಒಟ್ಟಾಗಿ ತೋರಿಸಿ ಲಿಂಗಾಯತ ಜನಸಂಖ್ಯೆಯನ್ನು ಪ್ರತ್ಯೇಕವಾಗಿ ವಿಂಗಡಿಸಿ ಕಡಿಮೆ ಮಾಡಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಚಿವರಾದ ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಉಳಿದ ಕೆಲ ಲಿಂಗಾಯತ ಸಚಿವರು ದನಿಗೂಡಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಒಕ್ಕಲಿಗ ಸಮುದಾಯದ ವಿಚಾರದಲ್ಲೂ ಪ್ರವರ್ಗವಾರು ವಿಂಗಡಣೆಯಲ್ಲಿ ತೀರಾ ವ್ಯತ್ಯಾಸವಾಗಿದೆ. ಪ್ರವರ್ಗಗಳ ನಿಗದಿಗೆ ಅನುಸರಿಸಿರುವ ಮಾನದಂಡಗಳ ಬಗ್ಗೆಯೇ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪ್ರವರ್ಗಗಳ ಬಗ್ಗೆ ಮತ್ತಷ್ಟು ಸ್ಪಷ್ಟನೆ ಬೇಕು ಎಂದು ಒತ್ತಾಯಿಸಿದರು.
ಈ ವಾದಕ್ಕೆ ಒಬ್ಬೊಬ್ಬರಾಗಿ ದನಿಗೂಡಿಸಲು ಆರಂಭಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವ ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿ ಪ್ರವರ್ಗವಾರು ವಿಂಗಡಣೆ ಮಾಡಿದೆ ಎಂಬುದು ನಿಮ್ಮ ಪ್ರಶ್ನೆ. ಈ ಬಗ್ಗೆ ಸಚಿವ ಸಂಪುಟ ಸಭೆಗೆ ಹಿಂದುಳಿದ ವರ್ಗಗಳ ಇಲಾಖೆ ಮಂಡಿಸಿರುವ ಟಿಪ್ಪಣಿಯಲ್ಲಿ ಪೂರ್ಣ ವಿವರಣೆ ಇಲ್ಲ. ಹೀಗಾಗಿ ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಸಂಪೂರ್ಣ ವಿವರ ಸಲ್ಲಿಸಲು ಸೂಚಿಸುತ್ತೇನೆ.

Girl in a jacket
error: Content is protected !!