ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ ಅಂಕಿತಕ್ಕೆ ರಾಜ್ಯಪಾಲರ ಅಂಗಳಕ್ಕೆ
by -ಕೆಂಧೂಳಿ
ಬೆಂಗಳೂರು, ಫೆ,04-ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್ ಹಾಕುವ ನಿರ್ಧಾರಕ್ಕೆ ಬಂದಿರುವ ಸರ್ಕಾರ ಇದೀಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಅಸ್ತು ಅಂದಿದ್ದು, ರಾಜ್ಯಪಾಲರಿಗೂ ಇದರ ಕರಡು ಪ್ರತಿಯನ್ನು ರವಾನಿಸಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯನ್ನು ಮುಟ್ಟುಗೋಲು ಹಾಕಲು ಸರ್ಕಾರ ನಿರ್ಧರಿಸಿದ್ದು, ಇದೀಗ ಮೈಕ್ರೋ ಫೈನಾನ್ಸ್ ಬಿಲ್ ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ಪ್ರತಿಯನ್ನು ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಳಿಕ ಸುಗ್ರೀವಾಜ್ಞೆ ಅನುಮತಿಗಾಗಿ ರಾಜ್ಯಪಾಲರ ಕರುಡು ಪ್ರತಿಯನ್ನು ಕಳುಹಿಸಿದ್ದಾರೆ.
ಮೈಕ್ರೋ ಫೈನಾನ್ಸ್ ಟಾರ್ಚರ್‌ಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದ್ದು, ಕೆಲದಿನಗಳ ಹಿಂದಷ್ಟೆ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಸಿಎಂ ಸಿದ್ದರಾಮಯ್ಯ ಅವರಿಗೆ ಸುಗ್ರೀವಾಜ್ಞೆ ಪ್ರತಿಯನ್ನು ನೀಡಲಾಗಿತ್ತು. ಆದ್ರೆ ಇದೀಗ ಸರ್ಕಾರ ಅಸ್ತು ಅಂದಿದ್ದು, ಸುಗ್ರೀವಾಜ್ಞೆ ಅನುಮತಿಗಾಗಿ ಸರ್ಕಾರ ರಾಜ್ಯಪಾಲರ ಅಂಗಳಕ್ಕೆ ಸುಗ್ರೀವಾಜ್ಞೆ ಪ್ರತಿಯನ್ನು ಕಳುಹಿಸಲಾಗಿದೆ.
ಸುಗ್ರೀವಾಜ್ಞೆಯಲ್ಲಿ ಏನಿದೆ..?
> 10 ವರ್ಷ ಜೈಲು, 5 ಲಕ್ಷದ ತನಕ ದಂಡ
> ನೋಂದಣಿರಹಿತ ಮತ್ತು ಪರವಾನಗಿರಹಿತ ಸಂಸ್ಥೆ, ಲೇವಾದೇವಿದಾರರ ಸಾಲ, ಬಡ್ಡಿ ಮನ್ನಾ
> ಸಾಲಗಾರರ ಮೇಲೆ ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ
> ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ನೋಂದಣಿ ಕಡ್ಡಾಯ
> ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಕಡ್ಡಾಯ
> ಸಾಲಗಾರರ ಸಂಪೂರ್ಣ ಮಾಹಿತಿ, ಸಾಲದ ಮೊತ್ತ, ಬಡ್ಡಿ ದರ ಪ್ರಕಟಿಸಬೇಕು
> ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಲಿಖಿತ ಮುಚ್ಚಳಿಕೆ ನೀಡಬೇಕು
> ನೋಂದಣಿ ಅವಧಿ ಒಂದು ವರ್ಷ ಮಾತ್ರ, ಅವಧಿ ಮುಗಿಯುವ 60 ದಿನಗಳ ನವೀಕರಣಕ್ಕೆ ಅರ್ಜಿ
> ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರ
> ಸಾಲಗಾರರಿಂದ ಭದ್ರತೆಯಾಗಿ ಯಾವುದೇ ವಸ್ತು ಅಥವಾ ಆಸ್ತಿ ಅಡಮಾನ ಇಟ್ಟುಕೊಳ್ಳುವಂತಿಲ್ಲ
ದೂರು ಸಲ್ಲಿಸುವುದು ಹೇಗೆ?
> ಸಾಲಗಾರರು ಕಿರುಕುಳಕ್ಕೆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನೀಡಬಹುದು
> ಪೊಲೀಸರು ಪ್ರಕರಣ ದಾಖಲಿಸಲು ಯಾವುದೇ ಕಾರಣಕ್ಕೂ ನಿರಾಕರಿಸಬಾರದು
> ಡಿವೈಎಸ್‌ಪಿ ರ‍್ಯಾಂಕ್‌ಗಿಂತ ಮೇಲಿನ ಅಧಿಕಾರಿಗಳಿಗೆ ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶ
> ವಿವಾದಗಳನ್ನು ಇತ್ಯರ್ಥಪಡಿಸಲು ಮಧ್ಯವರ್ತಿಯಾಗಿ ಒಂಬುಡುಮನ್ ನೇಮಕಕ್ಕೂ ಅವಕಾಶ
* ಸಾಲ ವಸೂಲಿ ಹೇಗಿರಬೇಕು?
> ಸಾಲಗಾರರು, ಕುಟುಂಬದವರ ಮೇಲೆ ಒತ್ತಡ ಹೇರಬಾರದು, ಅವಮಾನ, ಹಿಂಸೆ ಮಾಡಬಾರದು
> ಸಾಲಗಾರರು, ಕುಟುಂಬದವರನ್ನ ನಿರಂತರವಾಗಿ ಹಿಂಬಾಲಿಸಬಾರದು, ಸ್ವತ್ತು ಅಡಮಾನ ಇಟ್ಟುಕೊಳ್ಳುವಂತಿಲ್ಲ
> ಬಲವಂತದಿಂದ ಸಾಲ ವಸೂಲಿ ಮಾಡುವಂತಿಲ್ಲ, ಹೊರಗುತ್ತಿಗೆ ಸಿಬ್ಬಂದಿ, ರೌಡಿಗಳ ಬಳಕೆ ಇಲ್ಲ
> ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಕಿತ್ತುಕೊಳ್ಳುವಂತಿಲ್ಲ.