ಬೆಂಬಲ ಬೆಲೆಯಲ್ಲಿ ಶೀಘ್ರ ಹಿಂಗಾರು ಸೂರ್ಯಕಾಂತಿ ಖರೀದಿ: ಶಿವಾನಂದ ಪಾಟೀಲ

Share

ಬೆಂಗಳೂರು,ಮೇ,16-ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿ ಖರೀದಿ ಆರಂಭ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಎಫ್‌ಎಕ್ಯು ಗುಣಮಟ್ಟದ ಸೂರ್ಯಕಾಂತಿಗೆ ಪ್ರತಿ ಕ್ವಿಂಟಾಲ್‌ಗೆ 7,280 ರೂ. ನಿಗದಿಪಡಿಸಲಾಗಿದ್ದು, ಬಾಗಲಕೋಟ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು.

ಕೇಂದ್ರ ಸರ್ಕಾರ ನಾಫೆಡ್‌ ಹಾಗೂ ಎನ್‌ ಸಿ ಸಿ ಎಫ್‌ ಸಂಸ್ಥೆಗಳನ್ನು ಹಾಗೂ ರಾಜ್ಯ ಸರ್ಕಾರ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿಯನ್ನು ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಿವೆ. ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಟಾಸ್ಕ್‌ ಪೋರ್ಸ್‌ ಸಮಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್‌ನಂತೆ (ಗರಿಷ್ಠ 20 ಕ್ವಿಂಟಾಲ್‌) ಖರೀದಿ ಮಾಡಲಿದ್ದು, ಖರೀದಿ ಪ್ರಕ್ರಿಯೆ ಆದೇಶ ಹೊರಡಿಸಿದ ದಿನದಿಂದ 90 ದಿನಗಳವರೆಗೆ ನಡೆಯಲಿದೆ. ರೈತರು ತಮ್ಮ ಸಮೀಪದ ಪ್ಯಾಕ್ಸ್‌, ಎಫ್‌ಪಿಒ ಮತ್ತು ಟಿಎಪಿಸಿಎಂಎಸ್‌ಗಳಲ್ಲಿ ರೈತರು ತಮ್ಮ FID ಸಂಖ್ಯೆ ನೀಡಿ ನೋಂದಣಿ ಮಾಡಿಸಿಕೊಂಡು ಸೂರ್ಯಕಾಂತಿ ಮಾರಾಟ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ.

Girl in a jacket
error: Content is protected !!