ಬೆಂಗಳೂರು, ಜೂ, 26-ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಇಂದು ಯಲಹಂಕ ತಾಲ್ಲೂಕಿನ ಪ್ರಮುಖ ಬಡಾವಣೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಪರಿಶೀಲನೆ ನಡೆಸಿದರು.
ನ್ಯಾಯಮೂರ್ತಿ ನಾಗಮೋಹನದಾಸ್ ರವರ ಏಕಸದಸ್ಯ ಆಯೋಗದ ನಿರ್ದೇಶನ ದಂತೆ ಸರ್ಕಾರವು ನಿರ್ದಿಷ್ಟ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಯ 101 ಜಾತಿಗಳ ಮೂಲಜಾತಿಗಳನ್ನು ಮೇ 6 ರಿಂದ ಸಮೀಕ್ಷೆ ನಡೆಸುತ್ತಿದ್ದು ಜೂನ್ 30ಕ್ಕೆ ಅಂತ್ಯ ಗೊಳ್ಳುತ್ತಿದ್ದು, ಸಚಿವರು ಇಂದು ಖುದ್ದಾಗಿ ಯಲಹಂಕ ತಾಲ್ಲೂಕಿನ ಅರಕೆರೆ ಬಡಾವಣೆ, ಸುರದೇನಪುರ,ಎಂ.ಎಸ್ ಪಾಲ್ಯ, ಬೆಟ್ಟಹಳ್ಳಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮೂಲ ಜಾತಿಗಳನ್ನು ನಮೂದಿಸಲು ನಾಗರಿಕರಿಗೆ ಮನವಿ ಮಾಡಿದರು.
ಎಲ್ಲಾ ಪರಿಶಿಷ್ಟ ಜಾತಿಯ 101 ಸಮುದಾಯದವರು ತಪ್ಪದೇ ಮೂಲಜಾತಿಯನ್ನು ನಮೂದಿಸುವ ಮೂಲಕ ಅವಕಾಶಗಳಿಂದ ವಂಚಿತರಾಗದಿರಲು ಮನವಿ ಮಾಡಿದರು.