ಉಡುಪಿ,ಜು,೨೬-ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿರುವ ಎಸ್ಐಟಿ ತಂಡ ಇಂದು ವಿಚಾರಣೆ ಆರಂಭಿಸಿತು, ಈ ನಡುವೆ ಮುಸುಕು ದಾರಿವ್ಯಕ್ತಿಯೊಬ್ಬನನ್ನು ವಿಚಾರಣೆ ಮಾಡುವ ವೇಳೆ ಅನಾಮಿಕನೊಬ್ಬ ತಂದ ಕೊಟ್ಟ ಬರುಡೆ ಸುತ್ತ ಈಗ ತನಿಖೆ ಆರಂಬಿಸಿದೆ.
೩೦ ವರ್ಷಗಳ ಹಿಂದಿನ ಈ ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಂಡಿದೆ ಎಸ್ಐಟಿ ತಂಡ ಇಂದು ಬೆಳಗಿನಿಂದಲೇ ವಿಚಾರಣೆ ಆರಂಭಿಸಿದ್ದು ,ಇದಕ್ಕಾಗಿ ಹಲವಾರು ಪ್ರಶ್ನೆಗಳನ್ನು ಸಿದ್ದತೆ ಮಾಡಿಕೊಂಡು ಮಾಹಿತಿಗಾಗಿ ಸನ್ನದ್ಧವಾಗಿದೆ ,ಅಲ್ಲದೆ ದೂರದಾರನಿಂದಲೂ ಮಾಹಿತಿ ಪಡೆದುಕೊಳ್ಳುತ್ತಿದ್ದು ಅತನ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದೆ
ಇದರ ನಡುವೆ ಅನಾಮಿಕ ತಂದುಕೊಟ್ಟ ಬುರುಡೆ ಸುತ್ತ ಎಸ್ಐಟಿ ಚಿತ್ತ ಹೊರಳಿದೆ. ಹಲವು ಸಮಯದಿಂದ ಅನಾಮಿಕ ಒಪ್ಪಿಸಿದ್ದ ಬುರುಡೆ ಕುರಿತು ಎಸ್ಐಟಿ ತನಿಖೆ ಮಾಡುತ್ತಿದೆ. ಒಪ್ಪಿಸಿರುವ ಬುರುಡೆಯ ಸತ್ಯಾಸತ್ಯತೆ ತಿಳಿಸುವಂತೆ ಎಸ್ಐಟಿ ಪಟ್ಟು ಹಿಡಿದಿದೆ.
ಬುರುಡೆ ಹೊರ ತೆಗಯುವಾಗ ಜೊತೆಗೆ ಯಾರಿದ್ರು? ಎಂದು ಪ್ರಶ್ನೆ ಮಾಡಿದ್ದು, ಈ ರೀತಿ ಹೊರ ತೆಗೆಯಲು ಪ್ರೇರಣೆ ನೀಡಿದ್ದು ಯಾರು? ನೂರಾರು ಸ್ಥಳದಲ್ಲಿ ಶವ ಹೂತಿರುವಾಗ ನಿರ್ದಿಷ್ಟ ಅದೇ ಜಾಗದ ಬುರುಡೆ ತಂದಿದ್ದು ಯಾಕೆ? ಆ ಬುರುಡೆಯ ಅಸ್ಥಿ ಪಂಜರ ಯಾರದ್ದು ಎಂದು ತಿಳಿದಿದ್ಯಾ ಯಾವ ಜಾಗದಲ್ಲಿ ಯಾವ ಇಸವಿಯಲ್ಲಿ ಶವ ಹೂತು ಹಾಕಲಾಗಿತ್ತು ಆ ಶವ ಪುರುಷನದ್ದೋ ಮಹಿಳೆಯದ್ದೋ ಅಸ್ಥಿ ಪಂಜರ ಹೊರತೆಗೆಯುವ ವೇಳೆ ಜೊತೆಗೆ ಯಾರಿದ್ದರು ಏಕಾಏಕಿ ಮಣ್ಣಿನಿಂದ ಹೊರತೆಗೆಯುವ ಬದಲು ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲ? ಈ ರೀತಿ ಶವ ಹೊರತೆಗೆಯೋದು ಕಾನೂನಾತ್ಮಕವಾಗಿ ಅಪರಾಧ ಎಂದು ಗೊತ್ತಿಲ್ವಾ?ಇದರ ಪರಿಣಾಮ ಏನಾಗುತ್ತೆ ಎಂದು ತಿಳಿದಿದ್ಯಾ? ಎಂದು ಪ್ರಶ್ನೆ ಮಾಡಿದೆ.
ನನ್ನ ಆರೋಪವನ್ನ ಸಾಬೀತುಪಡಿಸಲು ನನಗೆ ಇದೊಂದೇ ದಾರಿ ಎಂದು ಮುಸುಕುಧಾರಿ ವ್ಯಕ್ತಿ ಹೇಳಿದ್ದು, ಸತ್ತ ವ್ಯಕ್ತಿಗಳಿಗೆ ನ್ಯಾಯ ಸಿಗಲಿ ಯಾವ ಕಾನೂನು ಕ್ರಮಕ್ಕೂ ನಾನು ಸಿದ್ಧ ಎಂದು ಹೇಳಿದ್ದಾನೆ.
ಬೆಳ್ತಂಗಡಿ ಮತ್ತು ಧರ್ಮಸ್ಥಳ ಠಾಣೆಯಿಂದ ತನಿಖಾಧಿಕಾರಿ ಜೀತೇಂದ್ರ ಕೇಸ್ ಫೈಲ್ ಪಡೆದುಕೊಂಡಿದ್ದಾರೆ. ಹಿಂದಿನ ಮಿಸ್ಸಿಂಗ್ ಮತ್ತು ಅನುಮಾನಾಸ್ಪದ ಸಾವು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಕೆಲಸವಾಗುತ್ತಿದೆ. ಕಳೆದ ರಾತ್ರಿ ಕೇಸ್ ಫೈಲ್ ಬಗ್ಗೆ ಮಾಹಿತಿ ಸಂಗ್ರಹ ಮಾಡಿರುವ ಜಿತೇಂದ್ರ ದಯಾಮ್. ಕೋರ್ಟು, ಪೊಲೀಸರ ಮುಂದೆ ಮತ್ತು ಎಸ್ಐಟಿ ಮುಂದೆ ಹೇಳಿಕೆ ದಾಖಲು ಮಾಡಲಾಗುತ್ತಿದೆ. ಮೂರು ಹೇಳಿಕೆಗಳನ್ನು ಎಸ್ಐಟಿ ಒಂದಕ್ಕೊಂದು ತುಲನೆ ಮಾಡಲಿದೆ. ಹೇಳಿಕೆಗಳು ತಾಳೆಯಾದರೆ ಮುಂದಿನ ಹಂತಕ್ಕೆ ತನಿಖಾ ಪ್ರಕ್ರಿಯೆ ಹೋಗಲಿದೆ.
ದೂರುದಾರನ ಹೇಳಿಕೆಯು ಆ ಸಮಯದ ಜೊತೆ ಸಂಬಂಧ ಹೊಂದಿದೆಯಾ? ಎನ್ನುವ ಪರಿಶೀಲನೆಯೂ ನಡೆಯುತ್ತಿದೆ. ಹೂತ ಶವಗಳ ಸ್ಥಳ, ಸಮಯ ಮತ್ತು ಪರಿಸ್ಥಿತಿಗಳ ನಿಖರ ವಿವರಗಳ ಆಧಾರದಲ್ಲಿ ಪ್ರಾಥಮಿಕ ಪರಿಶೀಲನೆ ನಡೆಯಲಿದೆ.