ಶಿಕಾರಿಪುರ,ಆ,೦೬: ರಾಜಕೀಯ ನಾಯಕ ಆರ್ಶೀವಾದಿಂದ ದಬ್ಬಾಳಿಕೆ ನಡೆಸುತ್ತಿರುವ ನಿಗಧಿಗಿಂತ ಹೆಚ್ಚು ಹಣ ಸಂಗ್ರಹಿಸುತ್ತಿರುವ ಶರಾವತಿ ಗ್ಯಾಸ್ ಏಜೆನ್ಸಿಯನ್ನು ರದ್ದು ಮಾಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿಮಾಲತೇಶ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ರವರ ಬೆಂಬಲದಿಂದ ಭಾರತ್ ಗ್ಯಾಸ್ ಕಂಪನಿಯ ಶರಾವತಿ ಗ್ಯಾಸ್ ಏಜೆನ್ಸಿ ಮಾಲೀಕ ಮರಿ ಸ್ವಾಮಿಯವರು ತಾಲೂಕಿನ ಮತ್ತಿ ಕೋಟೆ .ನಿಂಬ್ಬೇ ಗೊಂದಿ ಹಾಗೂ ಇತರೆ ಗ್ರಾಮಗಳಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಗದಿತ ದರ ಕಿಂತ ಹೆಚ್ಚಿಗೆ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ನಾಯಕರ ಕೃಪಾಕಟಾಕ್ಷದಿಂದ ದಬ್ಬಾಳಿಕೆ ಮಾಡಿ ಜನ ಸಾಮಾನ್ಯರಿಗೆ ವಚನ ಮಾಡುತ್ತಿದ್ದಾರೆ, ಇದಕ್ಕೆ ಅಧಿಕಾರಿಗಳು ನಿರ್ಲಕ್ಷ ಧೋರಣೆಯೂ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇತ್ತೀಚಿನ ಸಿಲೆಂಡರ್ ಬೆಲೆ ಎಂಟುನೂರು ನಲವತ್ತೆಂಟು ಆಗಿದ್ದು ಈ ಗ್ಯಾಸ್ ಏಜೆನ್ಸಿ ಒಂಬೈನುರಾ ಹತ್ತು ರೋಗಳನ್ನು ಪಡೆಯುತ್ತಿದ್ದಾರೆ, ಇಲ್ಲಿಯವರೆಗೆ ಎರಡು ಕೋಟಿ ಹಣ ಲೂಟಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆ, ಇಲ್ಲವಾದರೆ ಶಾಸಕರ ಮನೆ ಮುಂದೆ ಹಾಗೂ ತಾಲೂಕ್ ಕಚೇರಿಯ ಮುಂದೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಂಡಾರಿ ಮಾಲ ತೆ ಶ.ಮಾತನಾಡಿ ನಿಂಬೆ ಗೊಂಡಿ ಹಾಗೂ ಮತ್ತಿ ಕೋಟೆ ಗಳಲ್ಲಿ ಗ್ಯಾಸ್ ವಾಹನ ತಡೆದು ನ್ಯಾಯ ಕೇಳಲು ಮುಂದಾದಾಗ ಕೆಲವು ಬಿಜೆಪಿ ಮುಕಂಡರು ಗ್ಯಾಸ್ ಏಜೆನ್ಸಿ ಮೇಲೆ ದಬ್ಬಾಳಿಕೆ ಮಾಡಿದ್ದೇವೆ ಎಂದು ವೃತಾ ಆರೋಪಿಸಿ ಅವರ ಅವರನ್ನು ದೇವಸ್ಥಾನದಲ್ಲಿ ಕೂಡಿಹಾಕಿದ್ದರು ಎಮದು ತಿಳಿಸಿದರು
ಮಹಿಳೆಯರಿಗೆ ಕೇಂದ್ರ ಸರ್ಕಾರ ನೀಡುವ ಉಚಿತ ಗ್ಯಾಸ್ ನಲ್ಲಿ ಅರ್ಧ ಹಣ ಸಂಗ್ರಹ ದ್ದಾರೆ ಎಂದು ಆರೋಪಿಸಿದರು ಈ ಕೂಡಲೇ ಮರಿ ಸ್ವಾಮಿ ಬಂಧಿಸುವಂತೆ ಒತ್ತಾಯಿಸಿದರು.
ಶರವಾತಿ ಗ್ಯಾಸ್ ಏಜೆನ್ಸಿ ರದ್ದತಿಗೆ ಒತ್ತಾಯ
Share