ಆಲಮಟ್ಟಿ,ಸೆ,17: ವಿವಿಧ ಉದ್ಯಾನಗಳಲ್ಲಿ ದಿನಗೂಲಿಗಳಾಗಿ ಕರ್ತವ್ಯನಿರ್ವಹಿಸುತ್ತಿರುವವರಿಗೆ ಕಳೆದ ೫ತಿಂಗಳಿನಿಂದ ಸಂಬಳ ನೀಡದೇ ಇರುವದರಿಂದ ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆನ್ನೆಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘದವತಿಯಿಂದ ಮುಖ್ಯ ಅಭಿಯಂತರರ ಕಚೇರಿಯ ಮುಂದೆ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ, ಮಾರುಕಟ್ಟೆಯಲ್ಲಿ ನಿತ್ಯ ಬಳಸುವ ಸಾಮಗ್ರಿಗಳ ದರ ಏರಿಕೆಯಾಗುತ್ತಿದೆ ಆದ್ದರಿಂದ ದಿನಗೂಲಿ ಕಾರ್ಮಿಕರಿಗೆ ಪ್ರತಿ ತಿಂಗಳೂ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಕೆಬಿಜೆನ್ನೆಲ್ ಅರಣ್ಯ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಪಿ.ಕೆ.ಪೈ ಅವರು ತಾಂತ್ರಿಕ ತೊಂದರೆಯಿಂದ ವೇತನ ನೀಡುವಲ್ಲಿ ವಿಳಂಬವಾಗಿದೆ. ಕಾರ್ಮಿಕರಿಗೆ ಸಕಾಲಕ್ಕೆ ವೇತನ ನೀಡುತ್ತಾ ಬಂದಿದ್ದೇವೆ. ತಾಂತ್ರಿಕ ತೊಂದರೆ ಶೀಘ್ರವಾಗಿ ಬಗೆಹರಿಯಲಿದೆ, ತ್ವರಿತವಾಗಿ ವೇತನ ನೀಡಲು ಕ್ರಮಕೈಗೊಳ್ಳಲಾಗುವದು. ಆದ್ದರಿಂದ ಧರಣಿಯನ್ನು ಕೈಬಿಟ್ಟು ಕೆಲಸಕ್ಕೆ ತೆರಳಬೇಕು ಎಂದರು.
ಇದಕ್ಕೆ ಸ್ಪಂಧಿಸಿದ ದಿನಗೂಲಿ ಕಾರ್ಮಿಕರು ಧರಣಿಯನ್ನು ಹಿಂಪಡೆದರು.
ವೇತನ ನೀಡುವಂತೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ
Share