ಬೆಂಗಳೂರು,ಜೂ,04:ಕೊರೊನಾ ಮಹಾಮಾರಿ ಇಡೀ ಜನಜೀವನವನ್ನೇ ತಲ್ಲಣಗೊಳಿಸಿದೆ. ಜನತೆ ಸ್ವಾರ್ಥ ತ್ಯಜಿಸಿ ಮಾನವೀಯತೆ ಮೆರೆಯಬೇಕು. ಹಸಿದವರಿಗೆ ಅನ್ನದಾನದಂಥ ನೆರವಿಗೆ ಧಾವಿಸಬೇಕು ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಇಂದು ಕೆಂಗೇರಿಯ ಕೋಟೆ ಬೀದಿಯಲ್ಲಿ ದೇಶಭಕ್ತಿ ಫೌಂಡೇಶನ್, ಕಲಾ ಕದಂಬ ಆರ್ಟ್ ಸೆಂಟರ್ ಹಾಗೂ ಒಳಿತಿಗಾಗಿ ಮಿಡಿಯುವ ಮನಸುಗಳ ತಂಡ ಇವುಗಳ ಸಹಯೋಗದಲ್ಲಿ ನಡೆದ ಅನ್ನಗಂಗಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಕೆಂಗೇರಿಯಲ್ಲಿ ಈ ಯೋಜನೆ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿದ್ದು ಪ್ರತಿದಿನ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಉಚಿತ ಊಟವನ್ನು ವಿತರಿಸಲಾಗುತ್ತಿದ್ದು ಇದೀಗ ಜನರು ಪ್ರತಿದಿನದ ಪ್ರಾಯೋಜನೆಗೆ ಮುಂದಾಗುತ್ತಿರುವುದು ಸಂತಸ ತಂದಿದೆ ಎಂದು ಶ್ರೀಮತಿ ಪಾರ್ವತಿ ತಿಳಿಸಿದರು. ಈ ದಿನ ಚಿತ್ರದುರ್ಗದ ಶ್ರೀಮತಿ ಭಾಗೀರಥಿ, ಕೆಂಗೇರಿಯ ತಾರೇಶ್ ಹಾಗೂ ದುರ್ಗಾ ಅವರು ಪ್ರಾಯೋಜನೆ ನೀಡಿದ್ದರು. ಈ ಸಂದರ್ಭದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ಡಾ ರಾಧಾಕೃಷ್ಣ ಉರಾಳ್, ನಿತ್ಯಾನಂದ ನಾಯಕ್, ದೇಶಭಕ್ತಿ ಫೌಂಡೇಶನ್ ನ ಭರತ್, ಒಳಿತಿಗಾಗಿ ಮಿಡಿಯುವ ಮನಸ್ಸಿನ ಸಿದ್ದು ಬಹಾದ್ದೂರ್, ಹೆಚ್ ಕೆ ಕುಮಾರ್, ಗೋವರ್ಧನ, ಎನ್ ಮುನಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.