ಬೆಂಗಳೂರು,ಏ,19: ಆರಂಭದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವುದು ಉತ್ತಮವೇ? ಇದಕ್ಕೆ ನೂತನ ಚಿಕಿತ್ಸಾ ವಿಧಾನ ಈ ಕುರಿತು “ಸರ್ಜಿಕಲ್ ಕಾರ್ಯಾಗಾರ”ವನ್ನು ಫೊರ್ಟಿಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಆಯೋಜಿಸಿತ್ತು.
ಈ ಕಾರ್ಯಾಗಾರವನ್ನು ನಟಿ ರಾಚೆಲ್ ಡೇವಿಟ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಫೊರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ನಿರ್ದೇಶಕ ಡಾ. ಸಂದೀಪ್ ನಾಯಕ್, ಸ್ತನ ಕ್ಯಾನ್ಸರ್‌ನನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದು ಅನಿವಾರ್ಯ. ಸ್ತನ ಕ್ಯಾನ್ಸರ್‌ಗೆ ಪ್ರಾರಂಭದಲ್ಲಿ ಸರ್ಜಿಕಲ್ ಚಿಕಿತ್ಸೆ ನೀಡುವುದು ಅನಿವಾರ್ಯ. ಇಂಟ್ರಾ ಆಪರೇಟಿವ್ ರೇಡಿಯೇಶನ್ ಥೆರಪಿ (ಐಒಆರ್‌ಟಿ) ಹೊಸ ಸುಧಾರಿತ ಚಿಕಿತ್ಸೆಯು ಸನ್ತಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ಉಪಯುಕ್ತ. ೩೦ ನಿಮಿಷಗಳಂತೆ ಕೇವಲ ೩೦ ದಿನಗಳಲ್ಲಿ ರೇಡಿಯೇಷನ್‌ನ್ನು ನೋಡಬಹುದು. ಈ ಮೊದಲು ಈ ಚಿಕಿತ್ಸೆಯು ತಿಂಗಳಾನುಗಟ್ಟಲೆ ತೆಗೆದುಕೊಳ್ಳುತ್ತಿತ್ತು ಎಂದರು.
ಫ್ಲೋರಸೆನ್ಸ್ ಟೆಕ್ನಾಲಜಿ ಬಳಸಿ ಸೆಂಟಿನೆಲ್ ಲಿಂಫ್ ನೋಡ್ ಬಯಾಪ್ಸಿ ಮೂಲಕ ರೇಡಿಐೋ ಆಕ್ಟಿವ್ ಅಂಶಗಳನ್ನು ದೂರ ಇಡಬಹುದು. ಈ ಎಲ್ಲಾ ವಿಧಾನಗಳು ಸ್ತನಕ್ಯಾನ್ಸರ್‌ನನ್ನು ಶೀಘ್ರವೇ ಗುಣಮುಖ ಮಾಡಲು ಸಹಕಾರಿಯಾಗಿದೆ. ಈ ಸರ್ಜರಿಯು ಆಯ್ದ ಆಸ್ಪತ್ರೆಗಳನ್ನ ಮಾತ್ರ ಲಭ್ಯ. ಈ ನೂತನ ಸರ್ಜರಿಯ ಕುರಿತು ನಡೆದ ಕಾರ್ಯಾಗಾರದಲ್ಲಿ ೧೦೦ ಕ್ಯಾನ್ಸರ್ ಸ್ಪೆಷಲಿಸ್ಟ್ ಹಾಗೂ ಸರ್ಜನ್‌ಗಳು ಪಾಲ್ಗೊಂಡಿದ್ದರು.