ಆನೇಕಲ್ ;ಬೆಡ್ ಬುಕಿಂಗ್, ಮಿನಿ ವಾರ್ ರೂಂ ಸೇವೆಗಳಿಗೆ ಚಾಲನೆ

Share

ಪರಶಿವ ಧನಗೂರು.

ಬೆಂಗಳೂರು,ಮೇ17:ಎರೆಡನೇ ಅಲೆಯ ರೂಪಾಂತರಿ ಡಬಲ್ ಮ್ಯುಟೆಂಟ್ ವೈರಸ್ ಆನೇಕಲ್ ತಾಲೂಕಿಗೆ ವಿಶೇಷ ಶಾಪವಾಗಿ ಪರಿಣಮಿಸಿದ್ದು ಈವರೆಗೆ ಬೆಡ್ ಬುಕಿಂಗ್, ಆಮ್ಲಜನಕ ಕೊರತೆ ವೆಂಟಿಲೇಷನ್ ಆಸ್ಪತ್ರೆಗಳ ಅಲಭ್ಯತೆ ಸೋಂಕಿತರನ್ನು ಸಾಕಷ್ಟು ಕಾಡಿತ್ತು. ಬೆಂಗಳೂರಿನ ಬೊಮ್ಮನಹಳ್ಳಿ ವಾರ್ ರೂಂ ಅಕ್ಷರಶಃ ಆನೇಕಲ್ ಜನತೆಗೆ ಮರೀಚಿಕೆಯಾಗಿತ್ತು. ಸಾಕಷ್ಟು ಸಾವುಗಳನ್ನು ಕಂಡ ಜನತೆಗೆ ಬೆಂಗಳೂರು ನಗರ ಜಿಲ್ಲಾದಿಕಾರಿಗಳು ರಾಜ್ಯ ಸರ್ಕಾರದ ಆದೇಶದಂತೆ ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿಯೇ ಕೋವಿಡ್-19 ಚಿಕಿತ್ಸೆಯ ಸರಧಿ ತೀರ್ಮಾನ ಕೇಂದ್ರ (ಟ್ರೈಯಾಗಿಂಗ್ ಸೆಂಟರ್) ವನ್ನು ಚಾಲನೆಗೊಳಿಸಿದರು. ಅಲ್ಲದೆ ಸೋಂಕಿತರಿಗೆ ತಕ್ಷಣವೇ ಆಮ್ಲಜನಕ ಸಿಗುವಂತೆ ಅನುಕೂಲ ವಾಗಲೆಂದು ವಿವಿಧ ಖಾಸಗಿ ದಾನಿಗಳ ಸಹಕಾರದಲ್ಲಿ 29 ಆಮ್ಲಜನಕ ಕಾನ್ಸಿಟ್ರೇಟರ್ಸ್ ನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು. ಇದರಿಂದ ತೀವ್ರ ಸೋಂಕಿಗೆ ಒಳಗಾದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ತುರ್ತು ಸಂದರ್ಭದಲ್ಲಿ ಈ ಟ್ರೈಯಾಗಿಂಗ್ ಸೆಂಟರ್ ಬಳಸಬಹುದು ಎಂದು ಜಿಲ್ಲಾಧಿಕಾರಿ ಜೆ .ಮಂಜುನಾಥ್ ತಿಳಿಸಿದ್ದಾರೆ.

ಈವರೆಗೆ ಅನೇಕ ಗೊಂದಲಗಳು ಆನೇಕಲ್ ಭಾಗದಲ್ಲಿ ಕೇಳಿ ಬಂದಿತ್ತು. ಒಂದು ಸೋಂಕು ತಗುಲಿದ ವ್ಯಕ್ತಿಯ ನಿಖರ ಸ್ಯಾಚುರೇಷನ್ ಪ್ರಮಾಣ ಸುಳ್ಳು ಹೇಳಿ ಆಮ್ಲಜನಕ ವೆಂಟಿಲೇಷನ್ ಯುಕ್ತ ಬೆಡ್ ಪಡೆಯುವುದು, ಎರಡನೆಯದಾಗಿ ಒಬ್ಬೇ ಸೋಂಕಿತ ನಾಲ್ಕು ಬಾರಿ ಬೆಡ್ ಬುಕ್ಕಿಂಗ್ ಮಾಡಿ ಗೊಂದಲ ಪಡಿಸುವುದು. ರೋಗಿಗಳು ಆನೇಕಲ್ ಕಡೆಯವರಾದರೆ ಬೊಮ್ಮನಹಳ್ಳಿ ಭಾಗದಲ್ಲಿನ ವಾರ್ ರೂಂ ಸಿಬ್ಬಂದಿ ಸ್ಪಂದಿಸದೆ ಇದ್ದದ್ದು ಮತ್ತು ಇರುವ ಆನ್ಲೈನ್ ವ್ಯವಸ್ಥೆ ಸಮರ್ಪಕವಾಗಿರದೆ ಆನೇಕಲ್ ಭಾಗದ ಸೋಂಕಿತರು ಪರದಾಡುವಂತಾಗಿತ್ತು. ಇವೆಲ್ಲವನ್ನು ಮನಗಂಡು ರಾಜ್ಯ ಸರ್ಕಾರ ನಿನ್ನೆಯೇ ಪ್ರತಿ ತಾಲೂಕಿನಾಧ್ಯಂತ ಟ್ರೈಯಾಗಿಂಗ್ ಸೆಂಟರ್ ತೆರೆದು ಪಾರದರ್ಶಕವಾಗಿ ಬೆಡ್ ಲಭ್ಯತೆ ಬಗ್ಗೆ ಸೋಂಕಿತರಿಗೆ ಸ್ಪಷ್ಟ ಮಾಹಿತಿ ಮತ್ತು ನಿಖರವಾದ ಸ್ಯಾಚುರೇಷನ್ ಸ್ಟೇಟಸ್ ಪಡೆದು ಸೋಂಕಿನ ಪ್ರಮಾಣಕ್ಕೆ ತಕ್ಕ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಇಂದಿನಿಂದ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆನೇಕಲ್ ಸರ್ಕಾರಿ ಆಸ್ಪತ್ರೆಯ ಅಂಗಳಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಶ್. ತಾಲೂಕು ಆರೋಗ್ಯ ವೈಧ್ಯಾಧಿಕಾರಿ ನಿರ್ಮಲಾ, ವೈಧ್ಯರಾದ ನಳಿನಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್ ರೆಡ್ಡಿ ಉಪಸ್ಥಿತರಿದ್ದರು.

ಸೋಂಕು ಕಂಡೊಡನೆ ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿನ ಮಿನಿ ವಾರ್ ರೂಂ ಸಹಾಯವಾಣಿ ಮೊಬೈಲ್ ಸಂಖ್ಯೆ: 8431753204 ಗೆ ಸಂಪರ್ಕಿಸಿ ಮಾಹಿತಿ ನೀಡಿ

Girl in a jacket
error: Content is protected !!