ಬೆಂಗಳೂರು,ಜೂ,14:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ಕೇಂದ್ರ ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ
ನಡೆದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
kuwj ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ನಾಡಿನ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಹಿರಿಯ ಪತ್ರಕರ್ತರಾದ ಸುರೇಶ್ ಚಂದ್ರ, ದವಡಬೆಟ್ಟ ನಾಗರಾಜ್, ದಾವಣಗೆರೆಯ ಹೆಚ್.ಎನ್.ಮುನೇಶ್ ರವರಿಗೂ, ರಾಷ್ಟ ಪ್ರಶಸ್ತಿ ವಿಜೇತರಾದಂತ ಚಲನ ಚಿತ್ರನಟರಾದ ಸಂಚಾರಿ ವಿಜಯ್, ಕೆ.ಸಿ.ಎನ್.ಚಂದ್ರು ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸೋಮಶೇಖರ್ ಗಾಂಧಿ, ಪ್ರ.ಕಾರ್ಯದರ್ಶಿಗ ದೇವರಾಜ್ ಹಾಗೂ ನಗರ ಕಾರ್ಯದರ್ಶಿ ಜಿಕ್ರಿಯಾ ಹಾಜರಿದ್ದರು.