ಶಿಕಾರಿಪುರ,ಜು,೧೯:ನಾನು ಊಹೇ ಕೂಡ ಮಾಡಿರಲಿಲ್ಲ ಬಹುಶಃ ಕೋಮು ಸೌಹಾರ್ದಯುತ ಸಂಸ್ಥೆ ಇದಾಗಿರಬೇಕೆಂದು ಕೊಂಡಿದ್ದೆ.ಆದರೆ ಸಂಸ್ಕಾರ ಬಾವೈಕ್ಯತೇ ಸಾರುವ ಅಪರೂಪದ ವಿದ್ಯಾಸಂಸ್ಥೆ ಎಂದು ಕಾರ್ಯನಿರತ ಪತ್ರಕರ್ತರ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬಣ್ಣಿಸಿದರು.
ಅವರು ನಗರದ ಜುಬೇದ ವಿದ್ಯಾ ಸಂಸೆ ಹಮ್ಮಿಕೊಂಡಿದ್ದ ವಿಶೇಷ ಸನ್ಮಾನ ಸಮಾರಂಭ ದಲ್ಲಿ ಬಾಗಿವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು. ಇಲ್ಲಿ ಕಾಯಕದ ವಿದ್ಯಾ ಸಂಸ್ಥೆ ಇರುವುದು ಬಹಳ ಹೆಮ್ಮೆಯ ಸಂಗತಿ.ಸುಮಾರು ಹದಿನೇಳು ಎಕರೆ ಪ್ರದೇಶದಲ್ಲಿ ಜಾತಿಭೇದ ವಿಲ್ಲದೆ ಸಮಾಜ ಮುಖಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೀರ್ತಿಗೆ ಅಹಮ್ಮದ್ ಹುಸೇನ್ ಹಾಫೀ ಜೀ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಹೆಸರಿಗೆ ಮುಸ್ಲಿಂ ಸಂಸ್ಥೆಯಾಗಿದ್ದಿರೂ ಇಲ್ಲಿ ಕೆಲಸ ಮಾಡುವ ಆಡಳಿತ ನಡೆಸುವವರು ಅನ್ಯ ಜಾತೀಯವರು. ಸಹಾಯ ಕೇಳಿ ಬಂದವರಿಗೆ ಸಹಾಯ ನೀಡುವ ಸಹೃದಯಿ ಅವರು.ಅವರ ಕೆಲಸ ಭಗವಂತನಿಗೆ ಪ್ರಿಯವಾದದ್ದು .ಜಾತಿ -ವಿಚಾರವಾಗಿ ಕಿತ್ತಾಡುವವರಿಗೆ ಇದೊಂದು ಅರಿವಿನ ಸಂದೇಶದ ವಿದ್ಯಾ ದೇವಾಲಯ ಎಂದು ವಿಶ್ಲೇಷಿಸಿದರು.
ಬಾಲ ಸಾಹಿತ್ಯಕ್ಕೆ ಅವರಿಗೆ ಸಿಕ್ಕ ಗೌರವ ದೊಡ್ಡದು ಅನ್ಯರಿಗೆ ಆಶ್ರಯ ನೀಡುವ .ಪರರ ಸಂಕಷ್ಟ್ಟಕ್ಕೆ ನೆರವು ನೀಡುವ ಅವರ ಗುಣ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಸಂಸ್ಥೆಯ ಪಯಾಜ್ ಅಹಮದ್.ಹುಚ್ರಯಪ್ಪ ಇತರರು ಉಪಸ್ಥಿತರಿದ್ದರು.
ಬಾವೈಕ್ಯತೆ ಸಾರುವ ಅಪರೂಪದ ವಿದ್ಯಾಸಂಸ್ಥೆ-ಶಿವಾನಂದ ತಗಡೂರು
Share