ಬಸವಾದಿ ಶರಣರ ಅಭಿವೃದ್ಧಿಗೆ 500 ಕೋಟಿ ರೂ.ಬಿಡುಗಡೆಗೆ ನಿರ್ಣಯ

Share

ಬಸವಾದಿ ಶರಣರ ಅಭಿವೃದ್ಧಿಗೆ 500 ಕೋಟಿ ರೂ.ಬಿಡುಗಡೆಗೆ ನಿರ್ಣಯ

ವರದಿ;ರುದ್ರಮೂರ್ತಿ.  ಎಂ.ಜೆ.

ಚಿತ್ರದುರ್ಗ,ಜ,19-  ಇಲ್ಲಿ  ಎರಡು ದಿನಗಳ ಕಾಲ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ  ಶರಣ ಸಾಹಿತ್ಯ ಮತ್ತು ಬಸವಾದಿ ಶರಣರ ಜೀವನ ಮೌಲ್ಯಗಳ ಕುರಿತಿ ಚರ್ಚಿಸಲಾಯಿತು.. ಕೊನೆಗೆ ಸಮ್ಮೇಳನದಲ್ಲಿ ಐದು ನಿರ್ಣಯಗಳನ್ನು ತಗೆದುಕೊಳ್ಳಲಾಯಿತು.

ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿದ ಸರ್ಕಾರ 500 ಕೋಟೆಯನ್ನು ಹಂತ ಹಂತವಾಗಿ ಬಿಡುಗಡೆಗೊಳಿಸುವುದು ಸೇರಿದಂತೆ ಐದು ನಿರ್ಣಯಗಳನ್ನು ತಗೆದುಕೊಂಡಿದೆ.

ನಿರ್ಣಯಗಳು;

1) ಸಾಂಸ್ಕೃತಿಕ ನಾಯಕ ಬಸವಣ್ಣ ಘೋಷಣೆ ಅಡಿಯಲ್ಲಿ ಹಂತ ಹಂತವಾಗಿ 500 ರೂ ಕೋಟಿಗಳನ್ನು 5 ಕಂತುಗಳಲ್ಲಿ ಸರ್ಕಾರ ಬಿಡುಗಡೆ ಮಾಡುವುದು.
2) ಬಸವಾದಿ ಶರಣರ ಎಲ್ಲಾ ಸ್ಮಾರಕಗಳನ್ನು ಬಸವಕಲ್ಯಾಣದ ಅನುಭವ ಮಂಟಪದ ವ್ಯಾಪ್ತಿಗೆ ತಂದು
ಪುನರಜ್ಜಿವನಗೊಳಿಸುವುದು.
3) ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರ ನಾಯಕ ಶ್ರೀ.ಎಸ್ ನಿಜಲಿಂಗಪ್ಪನವರ ಹೆಸರಿಡಲು ಶಿಫಾರಸ್ಸು ಮಾಡುವುದು.
4) ಚಿತ್ರದುರ್ಗದ ಶ್ರೀ ಜಗದ್ಗುರು ಮರುಘರಾಜೇಂದ್ರ ಬೃಹನ್ ಮಠದ ಮುಂಭಾಗದ ಕೆರೆಯಮಧ್ಯ ಭಾಗ ದಲ್ಲಿ ನಾಡಿನ ಮಹಾನ್ ಸನ್ನಿದಿ ತ್ರಿವಿಧ ದಾಸೋಹಿ ಶ್ರೀ ಜಯದೇವ ಜಗದ್ಗುರುಗಳವರ 150ನೇ ಜಯಂತೋತ್ಸವದ ಹಿನ್ನೆಲೆಯಲ್ಲಿ 150 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವುದು.
5) ಒಂದರಿಂದ 12ನೇ ತರಗತಿವರೆಗೆ ಪಠ್ಯ ದಲ್ಲಿ ಬಸವಾದಿ ಶರಣರ ವಿಚಾರಧಾರೆಗಳನ್ನ ಅಳವಡಿಸುವುದು.

Girl in a jacket
error: Content is protected !!