ಒಬ್ಬರ ಮನಸ್ಸು ನೋಯಿಸುವ ಪ್ರವೃತ್ತಿ ತೊಲಗಬೇಕು-ಬಸವಕುಮಾರಶ್ರೀಗಳು

Share

ಒಬ್ಬರ ಮನಸ್ಸು ನೋಯಿಸುವ ಪ್ರವೃತ್ತಿ ತೊಲಗಬೇಕು-ಬಸವಕುಮಾರಶ್ರೀಗಳು

ಚಿತ್ರದುರ್ಗ, ಜ.೧೫ – ಒಳ್ಳೆಯ ಮಾತು, ಮಾರ್ಗದರ್ಶನ ಇವತ್ತು ಜನರನ್ನು ತಲುಪುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ಕೆಟ್ಟಮಾತು ಇನ್ನೊಬ್ಬರ ಬಗ್ಗೆ ನಾವು ನಡೆದುಕೊಳ್ಳುವ ವಿಚಾರ, ಹಾಗೆ ಸರಿದಾರಿಯಲ್ಲಿ ಸಾಗುವುದರಿಂದ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿ ಮಾನಸಿಕ ಹಿಂಸೆ ಕೊಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ನುಡಿದರು.


ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತಿವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ನಡೆದ ಕಾಯಕಯೋಗಿ, ಕರ್ಮಯೋಗಿ ಶೂನ್ಯಪೀಠದ ತೃತೀಯಾಧ್ಯPರಾದ ಸಿದ್ದರಾಮೇಶ್ವರರ ಜಯಂತಿಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಒಬ್ಬರ ಮನವ ನೋಯಿಸಿ, ಘಾತವ ಮಾಡಿ, ಗಂಗೆಯ ಮುಳುಗಿದಡೇನು? ಚಂದ್ರನ ತಡಿಯಲ್ಲಿದ್ದರೂ ಕಳಂಕ ಬಿಡದು ಎನ್ನುವ ಸಿದ್ದರಾಮೇಶ್ವರರ ವಚನದ ಸಾಲು ಅದೊಂದು ಬಹುದೊಡ್ಡ ಮಾತು. ನಾವು ನಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರನ್ನು ಮನಸ್ಸನ್ನು ಮನೆಯನ್ನು ಹಾಳು ಮಾಡುವ ಪ್ರವೃತ್ತಿ ತೊಲಗಬೇಕೆನ್ನುವ ವಿಚಾರಗಳನ್ನು ಆಗಾಗ ಜನರ ಮನಸ್ಸಿಗೆ ಕೇಳಿಸುವ ಹಿನ್ನೆಲೆಯಲ್ಲಿ ಶ್ರೀಮಠವು ಬಸವಾದಿ ಶಿವಶರಣರ ಜಯಂತಿಯನ್ನು ಹಿಂದಿನಿಂದಲೂ ಹಮ್ಮಿಕೊಳ್ಳುತ್ತಿದೆ ಎಂದರು.
ಒಬ್ಬ ಕಡುಬಡತನದಲ್ಲಿ ಹುಟ್ಟಿ, ಮಠ, ಆಶ್ರಮಗಳಲ್ಲಿ ಶಿPಣ ಪಡೆದು, ಪದವಿ ಗಳಿಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಇದರಿಂದ ಒಳ್ಳೆಯ ಉದ್ಯೋಗ ಹಿಡಿದು ಅಧಿಕಾರ ಇದ್ದೂ ಸಾರ್ವಜನಿಕ ಜೀವನದಲ್ಲಿ ಜನಪರವಾಗಿ ಕೆಲಸ ಮಾಡಿದ ನಿಷ್ಠಾವಂತ ಅಧಿಕಾರಿಗೆ ಕೆಲವರು ತಮ್ಮ ಸ್ವಾರ್ಥಪರ ಕೆಲಸ ಆಗದ ಕಾರಣ ಅವರ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ತಂದು ಅವರ ಇಡೀ ಕುಟುಂಬ ಸಂಕಷ್ಟಕ್ಕೀಡಾಯಿತು. ಅಂತಹ ಅನಾರೋಗ್ಯಕರ ಆಲೋಚನೆ, ದ್ವೇಷ ಮಾತ್ಸ್ಯರ್ಯ ಬಿಟ್ಟು ಸನ್ಮಾರ್ಗದ ಹಾದಿಯಲ್ಲಿ ಸಾಗುವುದೇ ನಾವು ಈ ಶರಣರ ಜಯಂತಿ ಮಾಡುವ ಮತ್ತು ಶಿವಶರಣರಿಗೆ ಸಲ್ಲಿಸುವ ನಿಜವಾದ ಗೌರವ. ಆ ನಿಟ್ಟಿನಲ್ಲಿ ಸಾಗಬೇಕೆಂದು ಕರೆ ನೀಡಿದರು.
ಬಸವಣ್ಣನವರು ಸ್ವರ್ಗ ನರಕ ಕಲ್ಪನೆಯನ್ನು ನಮ್ಮ ನಾಲಿಗೆ ಮೇಲೆ ಇಟ್ಟಿದ್ದಾರೆ. ಇಂತಹ ಆದರ್ಶ ೧೨ನೇ ಶತಮಾನದ ಶರಣ ಕೊಡುಗೆ. ಇಂದು ಸಿದ್ದರಾಮೇಶ್ವರ ಜಯಂತಿಯು ಬಂದಿರುವುದು ವಿಶೇಷ. ಅವರು ಸಹ ಇನ್ನೊಬ್ಬರ ಮನ ನೋಯಿಸಿ ಯಾವುದೇ ಗಂಗೆಯಲಿ ಮಿಂದರು ಪಾಪ ಪರಿಹಾರವಾಗುವುದಿಲ್ಲ. ಅದಕ್ಕಾಗಿ ನಮ್ಮ ನಡೆ ಪರಿಶುದ್ಧವಾಗಿರಬೇಕು ಎಂದು ಸಿದ್ಧರಾಮೇಶ್ವರರು ಪ್ರತಿಪಾದಿಸಿದ್ದಾರೆ. ಅವರು ದೇವರನ್ನು ಹರಸಿ ಹೊರಟ ಬಗ್ಗೆ, ಅದರಿಂದ ಅವರಿಗಾದ ಅನುಭವ, ಮಾರ್ಗದರ್ಶನ ಅವರು ಕೈಕೊಂಡ ಕಾರ್ಯಗಳು ಮುಂದೆ ಅವರು ಅನೇಕ ಜನೋಪಯೋಗಿ ಕೆಲಸ ಮಾಡುತ್ತಾ ಅಲ್ಲಿಂದ ಅಲ್ಲಮರ ಸಂಗ, ಸಂಪರ್ಕದಿಂದ ಕಲ್ಯಾಣ್ಕಕೆ ಬಂದು, ಅನೇಕ ಸಿದ್ಧಿ ಪಡೆದು, ಶೂನ್ಯ ಪೀಠದ ತೃತೀಯಾಧ್ಯಕ್ಷರಾದ ಬಗೆಯನ್ನು ವರ್ಣಿಸಿದರು.


ಈ ಸಂದರ್ಭದಲ್ಲಿ ಗುರುಮಠಕಲ ಖಾಸಮಠದ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮಿಗಳು, ಶರಣ ಸಾಹಿತ್ಯ ಪರಿಷತ್ ಜಿಧ್ಯಕ್ಷ ಕೆ.ಎಂ.ವೀರೇಶ್, ವೀರಶೈವ ಸಮಾಜದ ಎಸ್. ಷಣ್ಮುಖಪ್ಪ, ಬೃಹನ್ಮಠ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆಶಾರಾಣಿ, ಗಂಗಾಧರ್, ಸುನೀತಾ, ಜ್ಯೋತಿ, ನವೀನ್‌ಮಸ್ಕಲ, ಕೆ.ಎಂ. ರಮೇಶ್, ಪಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

 

Girl in a jacket
error: Content is protected !!