ಬೆಂಗಳೂರು,ಜೂ,೨೬: ನಾಯಕತ್ವ ಬದಲಾವಣೆಯ ಪ್ರಶ್ನೆಯೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರ್ಯದಲ್ಲಿ ಹಲವಾರು ಬೆಳವಣಿಗೆಗಳು ತೆರೆಮರೆಯಲ್ಲಿ ನಡೆಯುತ್ತಲೇ ಇವೆ.
ಹೌದು ಇದಕ್ಕೆ ಪುಷ್ಟಿ ಕೊಡುವಂತೆ ಮೊನ್ನೆಯಷ್ಟೆ ಸಿಎಂ ಪುತ್ರ ವಿಜಯೇಂದ್ರ ಮತ್ತು ರಾಘವೇಂದ್ರ ದೆಹಲಿಗೆ ದೌಡಾಯಿಸಿದ್ದರು ಈಗ ನಿನ್ನೆ ರಾತ್ರಿ ದಿಡೀರ್ ಸಿ.ಪಿ.ಯೋಗೇಶ್ವರ್ ದೆಹಲಿಗೆ ತೆರಳುವ ಮೂಲಕ ಬಿಜೆಪಿಯ ಆಂತರ್ಯದಲ್ಲಿ ಎದ್ದಿರುವ ಬಿಸಿ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಗೋಚಿರಿಸುತ್ತಿವೆ.
ನಿನ್ನೆಯಷ್ಟೆ ಸಿ.ಪಿ.ಯೋಗೇಶ್ವರ್ ಅವರು ಸಿ.ಎಂ.ನಾಯಕತ್ವ ಕುರಿತಂತೆ ಇದೀಗ ಪರೀಕ್ಷೆ ಬರೆದಿದ್ದೇವೆ ಫಲಿತಾಂಶ ಬರಬೇಕಲ್ಲ ಎಂದು ಮಾರ್ಮಿಕವಾಗಿ ನುಡಿದ ತಕ್ಷಣ ದೆಹಲಿಗೆ ಹಾರಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ಹೋಗಿ ಬಂದಿದ್ದರು. ಇದೀಗ ನಿನ್ನೆ ಸಿಪಿ ಯೋಗೇಶ್ವರ್ ಅವರು ದಿಢೀರ್ ದೆಹಲಿಗೆ ಹಾರಿದ್ದಾರೆ. ಪರೀಕ್ಷೆ ಬರೆದು ರಿಸಲ್ಟ್ಗೆ ಕಾಯ್ತಿದ್ದೇವೆ ಎಂದಿದ್ದ ಯೋಗೇಶ್ವರ್, ಇಂದು ಹೈಕಮಾಂಡ್ ನಾಯಕರ ಭೇಟಿ ಮಾಡುವ ಸಾಧ್ಯತೆಗಳಿವೆ. ವರದಿ ಸಲ್ಲಿಕೆ ಬಳಿಕ ನಾಯಕತ್ವ ಬದಲಾವಣೆ ಸೆಕೆಂಡ್ ಇನ್ನಿಂಗ್ಸ್ ಶುರುನಾ ಎಂಬ ಪ್ರಶ್ನೆ ಎದ್ದಿದೆ.
ದೆಹಲಿಗೆ ಹಾರಿದ ಯೋಗೇಶ್ವರ್-ಮತ್ತೇ ನಾಯಕತ್ವ ಗೊಂದಲ
Share