ಸಿದ್ದರಾಮಯ್ಯ ಬೆಂಕಿ,ಮುಟ್ಟಿದರೆ ಭಸ್ಮವಾಗ್ತಾರೆ- ಸಚಿವ ಜಮೀರ್

Share

ಸಿದ್ದರಾಮಯ್ಯ ಬೆಂಕಿ,ಮುಟ್ಟಿದರೆ ಭಸ್ಮವಾಗ್ತಾರೆ- ಸಚಿವ ಜಮೀರ್

by-ಕೆಂಧೂಳಿ

ಬಳ್ಳಾರಿ,ಫೆ,26- ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಕುರಿತಂತೆ ನಸಯಕರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ವಿರೋಧಿ ಗುಂಪಗೆ ಸಂದೇಶ ರವಾನಿಸುತ್ತಿದ್ದಾರೆ..
ಹೌದು ಸಿಎಂ ಬದಲಾವಣೆ ಎನ್ನುವ ಹೇಳಿಕೆ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಹಾಗೂ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸಿಎಂ ಸಿದ್ದರಾಮಯ್ಯ ಅವರನ್ನು ಮುಟ್ಟಲು ಆಗುವುದಿಲ್ಲ ಅವರು ಬೆಂಕಿ ಇದ್ದಂಗೆ ಮುಟ್ಟಿದರೆ ಭಸ್ಮವಾಗಿಬಿಡುತ್ತಾರೆ ಎಂದು ವಿರೋಧಿ ಗುಂಪಗೆ ಟಾಂಗ್ ಕೊಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಿಎಂ ಕುರ್ಚಿ ಮತ್ತು ಕೆಪಿಸಿಸಿ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಇದ್ದಾರೆ. ಕುರ್ಚಿ ಖಾಲಿ ಇದ್ರೆ ತಾನೇ ಸಿಎಂ ಬದಲಾವಣೆ ಚರ್ಚೆ ಮಾಡೋದು ಎಂದು ತಿರುಗೇಟು ನೀಡಿದರು.

ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಮುಟ್ಟೋಕೆ ಸಾಧ್ಯನಾ..? ಸಿಎಂ ಬೆಂಕಿ ಇದ್ದಂತೆ. ಯಾರಿಂದಲೂ ಮುಟ್ಟಲು ಆಗಲ್ಲ ಮುಟ್ಟಿದರೇ ಭಸ್ಮವಾಗುತ್ತಾರೆ. ಎಲ್ಲವೂ ಹೈಕಮಾಂಡ್ ನಿರ್ಧರಿಸುತ್ತಾರೆ ಎಂದಿದ್ದಾರೆ.

Girl in a jacket
error: Content is protected !!