ರಾಜ್ಯದಲ್ಲಿ ಸಾಯಲು ಹಣ ಕೊಟ್ಟು ಸಾಯುವ ಪರಿಸ್ಥಿತಿ ನಿರ್ಮಾಣ ಇದೆ- ಜೋಶಿ ಕಿಡಿ

Share

ರಾಜ್ಯದಲ್ಲಿ ಸಾಯಲು ಹಣ ಕೊಟ್ಟು ಸಾಯುವ ಪರಿಸ್ಥಿತಿ ನಿರ್ಮಾಣ ಇದೆ- ಜೋಶಿ ಕಿಡಿ
by- ಕೆಂಧೂಳಿ
ಹುಬ್ಬಳ್ಳಿ, ಫೆಬ್ರವರಿ 26- ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲು ಆಗದೆ,ಬೆಲೆಗಳನ್ನು ಏರಿಸುವ ಮೂಲಕ ಜನರು ಸಾಯಬೇಕೆಂದರೂ ದುಡ್ಡು ಕೊಟ್ಟು ಸಾಯಿವ ಪರಿಸ್ಥಿಯನ್ನ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ ಎಂದುಬಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿಕೆ ವಿಚಾರವಾಗಿ ಹೇಳಿಕೆಗೆ ತಿರುಗೇಟು ನೀಡಿದರು. ಕೆಲವು ಉದ್ಯಮಿಗಳು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅವರನ್ನು ಅಪಮಾನ ಮಾಡುವ ಕೆಲಸವನ್ನು ಮಾಡಿದೆ ಎಂದು, ಅದಕ್ಕೆ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.

ಇನ್ನು ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಅಂದವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆ ಇದೆ. 24 ಗಂಟೆಯಿಂದ ವಿದ್ಯುತ್ ಇಲ್ಲ. ಸಬ್ ರಿಜಿಸ್ಟರ್ ಅಫೀಸ್‌ನಲ್ಲೂ ಕರೆಂಟ್ ಇರಲಿಲ್ಲ. ಉಚಿತ ಅಂತಾ ಹೇಳಿ ಎಲ್ಲಾ ದರ ಜಾಸ್ತಿ ಮಾಡಿದ್ದಾರೆ. ರಾಜ್ಯದ ಜನ ಸಾಯಬೇಕು ಅಂದರೂ ಸರ್ಕಾರಕ್ಕೆ ದುಡ್ಡು ಕೊಟ್ಟು ಸಾಯುವಂತಹ ಪರಿಸ್ಥಿತಿ ಇದೆ ಎಂದು ಕಾಂಗ್ರೆಸ್‌ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಮಹಾ ಕುಂಭಮೇಳದ ಬಗ್ಗೆ ಕಾಂಗ್ರೆಸ್‌ ನಾಯಕರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹಿಂದೂಗಳಿಗೆ ಅಪಮಾನ ಮಾಡೋದೇ ಕೆಲಸ. ಹಿಂದೆ ದೊಡ್ಡ ಖರ್ಗೆ ಮಾತಾಡಿದ್ರು ಇದೀಗ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ. ಯಾವ ನೀರು, ಯಾರು ಮಾರಾಟ ಮಾಡಿದಾರೆ ? ಜನರ ಶ್ರದ್ಧೆಗೆ ಅಪಮಾನ ಮಾಡೋದು ಅವರ ಹವ್ಯಾಸ ಆಗಿದ್ದು. ಮೆಕ್ಕಾ ಮದೀನಾದಲ್ಲಿ ಏನೂ ಆಗಿಲ್ವಾ ? ಅಲ್ಲಿಯ ಬಗ್ಗೆ ಕಾಂಗ್ರೆಸ್ ಮಾತನಾಡಲಿ. ಶಾಂತವಾದ ಸಮಾಜದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಹಳ ದುರಹಂಕಾರದ ವರ್ತನೆ ಸರಿ ಅಲ್ಲ ಎಂದರು.

Girl in a jacket
error: Content is protected !!