ಬಿಜೆಪಿ ರಾಜ್ಯಾಧ್ಯಕ್ಷರಾಗಿ ಡಾ.ಅಶ್ವತ್ಥ ನಾರಾಯಣ ನೇಮಕ ಸಾಧ್ಯತೆ?
by- ಕೆಂಧೂಳಿ
ಬೆಂಗಳೂರು, ಫೆ,04-ಕಳೆದ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನಂತರ ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕಾರ್ಯನಿರ್ವಹಿಸಿದ ಮತ್ತು ಡಿಕೆಶಿಬಸಹೋದರರ ವಿರುದ್ಧವತೊಡೆವ ತಟ್ಟಿ ನಿಂತಿದ್ದ ಡಾ.ಅಶ್ವತ್ಥನಾರಾಯಣ ಒಕ್ಕಲಿಗರ ಮತ ಸೆಳೆಯುವಲ್ಲಿಯೂ ಯಶಸ್ಸುಗಳಿದ್ದರು.
ಇದು ಹೈಕಮಾಂಡ್ ಗಮನದಲ್ಲೂ ಇದೆ ಬಹುಶಃ ಇವರನ್ನೆ ಈ ಹಿಂದೆ ಪ್ರತಿಪಕ್ಷದ ನಾಯಕನನ್ನಾಗಿ ನೇಮಕ ಮಾಡಲು ಉತ್ಸುಕವಾಗಿದ್ದರು ಆದರೆ ಯಡಿಯೂರಪ್ಪ ಅವರ ಅಶೋಕ್ ಅವರನ್ನೇ ನೇಮಕ ಮಾಡಬೇಕು ಎಂದು ಹಠ ಹಿಡಿದಿದ್ದರು ,ಕೆಲವು ಕಾರಣಗಳನ್ನೂ ಕೊಟ್ಟು ಅಶ್ವತ್ಥ ನಾರಾಯಣ ಅವರಿಗೆ ತಪ್ಪಿಸಿ ಅಶೋಕ್ ಗೆ ಅವಕಾಶ ಮಾಡಿಕೊಟ್ಟಿದ್ದರು..
ಆದರೆ ಅಶೋಕ್ ಈಗ ಪ್ರತಿಪಕ್ಷ ನಾಯಕರಾಗಿ ನೇಮಕವಾದಗಿನಿಂದಲೂ ತಮ್ಮ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗಿದ್ದಾರೆ,ಆದರೆ ಹೈಕಮಾಂಡ್ ನ ಮೆಚ್ಚಿಸಲು ಮಾಡುವ ವ್ಯರ್ಥ ಪ್ರಯತ್ನಗಳು ಅವರ ಗಮನಕ್ಕೆ ಬಂದಿದ್ದವು ಈಗಾಗಿ ಅವರನ್ನು ಬದಲಿಸುವ ಪ್ರಯತ್ನದಲ್ಲಿದೆ.
ಇನ್ನೂ ಅಧ್ಯಕ್ಷ ಸ್ಥಾನದ ವಿಜಯೇಂದ್ರ ವಿರುದ್ದ ದಿನಕ್ಕೊಬ್ಬರು ಬಂಡೇಳುತ್ತಿರುವುದು ಹೈಕಮಾಂಡ್ ಗಮನಿಸುತ್ತಲೆ ಇದೆ ಆದರೆ ದೆಹಲಿ ಚುನಾವಣೆ ಇರುವ ಕಾರಣ ಯಾವುದಕ್ಕೂ ಗಮನ ಕೊಡದೆ ಈಗ ದೆಹಲಿ ಚುನಾವಣೆ ನಂತರ ಕರ್ನಾಟಕದ ರಾಜಕಾರಣದ ಅಖಾಡಕ್ಕೆ ಇಳಿಯಲಿದೆ..ಎಲ್ಲವೂ ಹತೋಟಿಗೆ ತರುವ ಸಾಧ್ಯತರಗಳಿವೆ.
ವಿಜಯೇಂದ್ರ ವಿರುದ್ದ ಹಿರಿಯ ನಾಯಕರು ಬಂಡೆದ್ದ ಕಾರಣ ಈಗ ಅಶ್ವತ್ಥನಾರಾಯಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಿದೆ ಎನ್ನಲಾಗುತ್ತದೆ.
ಇದಕ್ಕೆ ಪುಷ್ಟಿ ನೀಡುವಂತೆ ಗದಗನಲ್ಲಿ ಶ್ರೀರಾಮುಲು ಅವರು ಮಾಧ್ಯಮಗಳ ಜೊತೆಮಾತನಾಡುವಾಗ ಬೆಂಗಳೂರು ಭಾಗದಲ್ಲಿ ನೋಡುವುದಾದರೆ ಸಿಎನ್ ಅಶ್ವಥ್ ನಾರಾಯಣ್ ಅವರಿಗೆ ಪಾರ್ಟಿ ಅಧ್ಯಕ್ಷರಾಗಬೇಕು ಎಂಬ ಆಸೆ ಮನಸ್ಸಿನಲ್ಲಿರಬಹುದು. ಎನ್ನುವ ಸಣ್ಣ ಸುಳಿವೊಂದನ್ನು ನೀಡಿದ್ದಾರೆ
ಆದರೆ ಇದು ಶ್ರೀರಾಮುಲು ಹೇಳಿದ್ದು ಹೈಕಮಾಂಡ್ ಸದ್ಯ ಅಶ್ವತ್ಥ ನಾರಾಯಣ ಬಗ್ಗೆ ವಿಶ್ವಾಸ ಹೊಂದಿದೆ ಎನ್ನುವುದು..ಇದನ್ನು ಬಿಜೆಪಿಯ ಕೆಲ ಹಿರಿಯ ನಾಯಕರು ಕೂಡ ದೃಡ ಪಡಿಸಿದ್ದಾರೆ..
ಹಾಗಾದರೆ ಬಿಜೆಪಿ ರಾಜ್ಯದ್ಯಕ್ಷರು ಅಶ್ವತ್ಥ ನಾರಾಯಣ ಆದರೆ ಪ್ರತಿಪಕ್ಷದ ನಾಯಕ ಸ್ಥಾನದ ಬಗ್ಗೆ ಈಗ ಹೈಕಮಾಂಡ್ ಮುಂದೆ ಎರಡು ಹೆಸರುಗಳಿವೆಯಂತೆ ಒಂದು ಬಸವನಗೌಡ ಯತ್ನಾಳ್ ಇನ್ನೊಂದು ಸುನೀಲ್ ಕುಮಾರ್..ಈ ಇಬ್ಬರಲ್ಲಿ ಒಬ್ಬರು ಪ್ರತಿಪಕ್ಷದ ನಾಯಕರಾಗುವುದು ಖಚಿತ ಎನ್ನುತ್ತವೆ ಬಿಜೆಪಿ ಉನ್ನತ ಮೂಲಗಳು..
ಈ ಎಲ್ಲಾ ಬೆಳವಣಿಗೆಗಳು ಈ ತಿಂಗಳಾಂತ್ಯಕ್ಕೆ ಅಥವಾ ಮಾರ್ಚ್ ಮೊದಲ ವಾರ ನಡೆಯುವ ಸಾಧ್ಯತೆಗಳಿವೆ.