ಬೆಂಗಳೂರು,ಜೂ,೦೧:ರಾಜ್ಯ ಬಿಜೆಪಿಯ ಆಂತರ್ಯದಲ್ಲಿ ನಾಯಕತ್ವ ಬದಲಾವಣೆಯ ಧ್ವನಿ ಜೋರಾಗಿಯೇ ಕೇಳಬರುತ್ತಿದೆ. ಬಿಜೆಪಿ ಹಿರಿಯ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರು ಲಾಕ್ಡೌನ್ ಮುಂದುವರೆಸುವ ಮೂಲಕ ನಿಮ್ಮ ಸ್ಥಾನ ಉಳಿಸಿಕೊಳ್ಳಲು ಯತ್ನಿಸಬೇಡಿ ಎಂದಿರುವುದು ಮತ್ತು ಲಿಂಗಾಯತ ಮಠಗಳ ಸ್ವಾಮೀಗಳ ಮೂಲಕ ತಮ್ಮನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿದ್ದೀರಿ ಎನ್ನುವ ಹೇಳಿಕೆ ನಿಜಕ್ಕೂ ಆ ಪಕ್ಷದಲ್ಲಿನ ಆಂತರಿಕ ಭಿನ್ನಮತ ಈಗ ಮತ್ತಷ್ಟು ಬುಗಿಲೆದ್ದಿದೆ ಎಂದು ಹೇಳ ಬಹುದು .
ಈ ಹೇಳಿಕೆಗಳನ್ನು ಗಮನಿಸಿದರೆ ಬಹುತೇಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಖಚಿತವೇ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿಎಸ್ವೈ ಪುತ್ರವಿಜಯೇಂದ್ರ ದೆಹಲಿಗೆ ಪ್ರಯಾಣ ಬೆಳಸಿರುವುದಕ್ಕೆ ಮತ್ತಷ್ಟು ಬಲವಾಗುತ್ತಿವೆ.
ಇಂದು ದಿಡೀರ್ ವಿಜಯೇಂದ್ರ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಜೊತೆ ಈ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ ಏಕೆಂದರೆ ಇಂದು ಮಧ್ಯಾಹ್ನ ಅರುಣ್ ಸಿಂಗ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ .
ರಾಜ್ಯದಲ್ಲಿ ಬಂಡಾಯದ ಬಿಸಿ ಏರುತ್ತಿದ್ದು ಮುಂದಿನ ನಡೆ ಕುರಿತು ಈ ವೇಳೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಖಚಿತವಾದರೆ ಆ ಸ್ಥಾನ್ಕಕೆ ಬಿಎಸ್ವೈ ಹೇಳಿದ ನಾಯಕರನ್ನೇ ಸಿಎಂ ಆಗಿ ಮಾಡಬೇಕು ಎನ್ನುವ ಒತ್ತಾಯ ಈ ವೇಳೆ ಬರಲಿದೆ ಎಂದು ಮೂಲಗಳು ತಿಳಿಸಿವೆ
ಆದರೆ ಒಂದು ಮೂಲದ ಪ್ರಕಾರ ಯಡಿಯೂರಪ್ಪ ಅವರನ್ನು ಬದಲಾಯಿಸುವುದು ಈಗ ಖಚಿತ ಎನ್ನಲಾಗಿದೆ ಅವರನ್ನು ಸಮಾಧಾನವಾಗಿಯೇ ಅವರಿಗೆ ಮನವರಿಕೆ ಮಾಡಿಕೊಟ್ಟು ಅವರ ಹೇಳಿದ ವ್ಯಕ್ತಿ ಅಥವಾ ಅವರ ಮಾರ್ಗದರ್ಶನದ ಮೂಲಕ ನಡೆಯುತ್ತದೆ ಹಾಗಾಗಿ ತಾವು ತಮ್ಮ ವಯಸ್ಸು ಮತ್ತು ಆಡಳಿತದಲ್ಲಿ ಏರು ಪೇರು ಆಗಿರುವ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಬೇಕು ಎನ್ನುವ ವಿಷಯವನ್ನು ಅವರ ಮುಂದೆ ಇಡಲಿದ್ದಾರೆ ಒಂದು ವೇಳೆ ಒಪ್ಪದಿದ್ದರೆ ಮುಂದೆ ಏನು ಎನ್ನುವ ಪ್ರಶ್ನೆ ಬಿಜೆಪಿ ಹೈಕಮಾಂಡ್ನಲ್ಲಿ ಮೂಡಿದೆ ಆದರೆ ಅದಕ್ಕೂ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎನ್ನುತ್ತವೆ ಮೂಲಗಳು
ಈಗಾಗಲೇ ರಾಜ್ಯದಲ್ಲಿ ಬಿಎಸ್ವೈ ಬದಲಾವಣೆಗೆ ಬಹುತೇಕ ಶಾಸಕರು ಧ್ವನಿ ಗೂಡಿಸಿದ್ದಾರೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಶಾಸಕರನ್ನು ಒಗ್ಗೂಡಿಸುವ ಕೆಲಸವೂ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಸದ್ಯ ಕೊರೊನಾ ಅಟ್ಟಹಾಸ ಇರುವುದರಿಂದ ಕೆಲವು ಧ್ವನಿ ಎತ್ತುತ್ತಿಲ್ಲ ಆದರೆ ಕೊರೊನಾ ಹತೋಟಿಗೆ ಬಂದ ತಕ್ಷಣ ರಾಜಕೀಯದಲ್ಲಿ ಮಿಂಚಿನ ಬೆಳವಣಿಗೆಯಾಗುವ ಎಲ್ಲಾ ಸಾಧ್ಯತೆಗಳಿವೆ.